ಸರ್ವೇ ಸಾಮಾನ್ಯ ಸಣ್ಣಸಣ್ಣ ಪ್ರಬಂಧ ಬರಿಯೂದು ನಾನು. ಇದು ಒಂಚೂರು ಉದ್ದವುಂಟು, ಪುರಸತ್ತು ಮಾಡಿಕೊಂಡು ಓದಬೇಕಾಗಿ ಅರಿಕೆ....
ಅರುವತ್ತೊಂಭತ್ತರ ಇಸವಿಯಂದು ಹದಿನಾಲ್ಕು ಬೇಂಕುಗಳ ರಾಷ್ಟ್ರೀಕರಣವಾಯಿತು. ಅಂತೆಯೇ ದೇಶದಲ್ಲಿ ಬೇಂಕುಗಳ ಜಾಲ ಬಹುಬೇಗನೇ ವಿಸ್ತಾರಗೊಳ್ಳಲು ಶುರುವಾಯಿತು. ರಾಷ್ಟ್ರೀಕರಣದ ರಾಜಕೀಯ ಏನೇ ಇರಲಿ, ಒಂದು ಎಕ್ಸ್ ಕ್ಲೂಸಿವ್ ವರ್ಗಕ್ಕೆ ಸೀಮಿತವಾದ ಬೇಂಕಿಂಗ್ ಸೌಲಭ್ಯವು ಜನಸಾಮಾನ್ಯರಿಗೂ ತಲುಪಲಾರಂಭಿಸಿತು.👌👌ಸರಕಾರದ ಸಾಮಾಜಿಕ ನ್ಯಾಯವ್ಯವಸ್ಥೆ ಒಂದು ಅಂಗವಾಗಿಯೂ-ಸೋಷಿಯಲ್ ಜಸ್ಟಿಸ್ ಸಿಸ್ಟಮ್- ಇದನ್ನು ಪರಿಗಣಿಸಬಹುದು, ಹೀಗೆಂದು ನಮ್ಮ ಟ್ರೇನಿಂಗ್ ಸಮಯದಲ್ಲಿ ಕೇಳಿದ ನೆನಪು.
ಸಿಂಡಿಕೇಟ್ ಬೇಂಕು ಎಲ್ಲರಿಗೂ ತಿಳಿದಿರುವಂತೆ ಆದ್ಯತಾರಂಗ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಪರಿಕಲ್ಪಿಸಿ ಅನುಷ್ಠಾನಕ್ಕೆ ತರುವಲ್ಲಿ ಮುಂಚೂಣಿಯಲ್ಲಿದ್ದ ಬೇಂಕು. ಕೃಷಿಗೆ ಪ್ರಾಧಾನ್ಯತೆ ನೀಡಿದ ಮೊದಲ ವಾಣಿಜ್ಯ ಬೇಂಕು ನಮ್ಮದು.... ಇರಲಿ, ದೇಶದಲ್ಲಿ ಬೇಂಕಿಂಗ್ ಜಾಲ ಹಬ್ಬಿದಂತೆ ಮಣಿಪಾಲ ಹೆಡ್ ಆಫೀಸಿನಲ್ಲೂ ಕೆಲಸ ಕಾರ್ಯಗಳ ಒತ್ತಡ ಬಲವಾಯಿತು, ಡಿಪಾರ್ಟುಮೆಂಟುಗಳು ಹೆಚ್ಚಿದವು ಅಂತೆಯೇ ಸಿಬಂದಿವರ್ಗವೂ ಹೆಚ್ಚಿತು.
ಆ ಸಮಯದಲ್ಲಿ ದೇವರ ಹಾಗೂ ಕೇ ಕೇ ಪೈಯವರ ಕೃಪೆಯಿಂದ ನನಗೂ ಬೇಂಕ್ ಜೋಬ್ ಆಯಿತು. ಪ್ರಿಮೈಸಸ್ ಡಿಪಾರ್ಟ್ ಮೆಂಟಿನಲ್ಲಿ ಹೆಡ್ ಆಫೀಸಿನ ಮೇಂಟೆನೆನ್ಸ್ ನನ್ನ ಜಬಾದಾರಿ. 'ನಮ್ಮ ಸೆಕ್ಷನ್ನಿನಲ್ಲಿ ಇಬ್ಬರ ನೇಮಕಾತಿಯಾಗಿದೆ, ಕೂಡಲೇ ನಮಗೆ ಎರಡು ಮೇಜು+ಕುರ್ಚಿ+ಒಂದು ಕಪಾಟುಗಳನ್ನು ಕೂಡಲೇ ಸಪ್ಲೈ ಮಾಡಿರಿ' ಎಂಬ ರಿಕ್ವೆಸ್ಟ್ ಒಂದು ಆಫೀಸಿನಿಂದ ಬಂದಿತು. ಮೇಜು ಖುರ್ಚಿಗಳ ವ್ಯವಸ್ಥೆಯಾಯಿತು, ಕಬ್ಬಿಣದ ಕಪಾಟು ಎಲ್ಲಿ ಇಡಿಸಲಿ? ಎಂದು ಅದರ ಮುಖ್ಯಸ್ಥರ ಬಳಿ ಹೋಗಿ ವಿನಯದಿಂದ ಕೇಳಿದೆ. ಅವರು ಸ್ವಲ್ಪ ಕುಶಾಲು-ಹಾಸ್ಯಪ್ರವೃತ್ತಿಯ ಎಕ್ಸಿಕ್ಯೂಟಿವ್, 'ಪಳೇ ಚೆರ್ಡಾ, ಓ ಹಾಂಗಾ ಥೊಡೋ ಖಾಲಿ ಜಾಗೊ ಆಸ್ಸ, ಹಾಣು ದವರಿ' ತನ್ನ ಬೋಳು ತಲೆಯನ್ನು ಸವರಿಕೊಳ್ಳುತ್ತ ನಕ್ಕರು. ನಾನು ನೌಕರಿಗೆ ಸೇರಿ ಹೆಚ್ಚು ಸಮಯವಾಗಿರಲಿಲ್ಲ, ಏನು ಜವಾಬು ನೀಡಲೆಂದು ತಡಕಾಡಲಾರಂಭಿಸಿದೆ....
ಆದರೆ ಈ ಕಪಾಟು ಸಪ್ಲೈ ವಿಚಾರ ತುಸು ಗಂಭೀರವಾಯಿತು. ಕೆಲಸದ ಪ್ರಮಾಣ ದ್ವಿಗುಣವಾಯಿತು, ಕಪಾಟು ಕೊಡಿ ಕಪಾಟು ಕೊಡಿ ಎಂಬ ಇಂಡೆಂಟುಗಳು ಹೆಚ್ಚಾದವು. ಕಪಾಟು ಇಡಲು ಸ್ಥಳಾವಕಾಶವಿಲ್ಲದ ಸಮಸ್ಯೆ ಎದುರಾಯಿತು.
ತುಂಬಾ ಹಳತಾದ, ಅವಶ್ಯವಲ್ಲದ ಕಾಗದಪತ್ರಗಳನ್ನು ವಿಂಗಡಿಸಿ ಅವುಗಳಿಗೆಂದೇ ನಿಯುಕ್ತಿಗೊಳಿಸಿದ ರೆಕಾರ್ಡ್ ಸೆಕ್ಷನ್ ಗಳಲ್ಲಿ ಒಯ್ದು ಕ್ರಮ ಪ್ರಕಾರ ಪ್ರತೀ ಫೈಲು, ರಿಕಾರ್ಡು ಅಥವಾ ಲೆಡ್ಜರುಗಳಲ್ಲಿನ ವ್ಯವಹಾರ ಮುಗಿದ ಇಂತಿಷ್ಟು ವರ್ಷಗಳ ತನಕ ರೆಕಾರ್ಡು ರೂಮಲ್ಲಿ ಇಡಬೇಕು. ಆ ರೀತಿ ರೆಕಾರ್ಡ್ಸ್ ಮೇಂಟೈನ್ ಮಾಡಲು ಸೂಕ್ತ ನಿಯಮಗಳೂ ಇವೆ, ಮತ್ತದಕ್ಕೆ ಅದರದ್ದೇ ಮಹತ್ವವಿದೆ.
ಇಂತಹ ಕೆಲಸಗಳನ್ನು ಆಫೀಸುಗಳಲ್ಲಿ ಅಥವಾ ಬ್ರಾಂಚುಗಳಲ್ಲಿ ಉಪೇಕ್ಷೆ ಮಾಡುವುದೇ ಜಾಸ್ತಿ. ಯಾವುದೇ ಮಜ ಇಲ್ಲ, ಮೈ ಕೈ ಬಟ್ಟೆ ಕೊಳಕಾಗುತ್ತದೆ, ನಮಗೆ ಹೇಳಿಸಿದ ಜಾಬ್ ಅಲ್ಲ ಇತ್ಯಾದಿ ಇತ್ಯಾದಿ ಅನೇಕ ಸಬೂಬುಗಳಿಂದಾಗಿ ಇದು ಬಾಕಿಯಾಗಿರುತ್ತದೆ.
ನಮ್ಮ ಪೀ ಎಮ್ ಡೀ ಯವರ ಒತ್ತಡ ಮತ್ತು ಒತ್ತಾಸೆಗಳಿಂದ ಮೊದಮೊದಲು ವಿರೋಧ ಇದ್ದರೂ ಹೆಡ್ ಆಫೀಸಿನ ಎಲ್ಲಾ ಡಿಪಾರ್ಟ್ ಮೆಂಟುಗಳಿಂದ ಅನುಪಯುಕ್ತ, ಹಳೆಯ ಫೈಲುಗಳ ರಾಶಿ ರಾಶಿ ಹೊರ ಬಿದ್ದವು. 'ಅಲ್ಲ ಮಾರ್‍ರೇ ನಮ್ಮ ಕಪಾಟುಗಳಲ್ಲಿ ಈ ನಮುನೀ ಕಜಾವು ಬಿದ್ಕೊಂಡಿತ್ತೆಂದು ನಮಗೇ ಗೊತ್ತಿರ್ಲಿಲ್ಲ! ಓ ದೇವರೇ!!' ಎಂದು ಒಂದು ಸೆಕ್ಷನ್ನಿನ ಮುಖ್ಯಸ್ಥರು ನನ್ನ ಬಳಿ ಉದ್ಘರಿಸಿದ್ದರು. ಈ ಕಾರ್ಯಾಚರಣೆಯಿಂದ ಹೆಡ್ಡಾಫೀಸಿನಲ್ಲಿ ಸುಮಾರು ಹದಿನೈದಕ್ಕಿಂತ ಜಾಸ್ತಿ ಕಪಾಟುಗಳು, ಫೈಲ್ ಕ್ಯಾಬಿನೆಟ್ ಗಳು ಖಾಲಿಯಾಗಿ ಸಿಕ್ಕವು. ನನಗೆ ಹೆಮ್ಮೆಯೆನಿಸಿತು....
ನಂತರದ ದಿನಗಳಲ್ಲಿ ನನ್ನ ಡ್ಯೂಟಿ ಬ್ರಾಂಚುಗಳಲ್ಲಿ, ಈ 'ಓಲ್ಡ್ ರೆಕಾರ್ಡ್ಸ್ ಮೇಂಟೇನೆನ್ಸ್' ನನ್ನ ಆಸಕ್ತಿಯ ವಿಷಯಗಳಲ್ಲಿ ಒಂದಾಯಿತು... ಎಂಭತ್ತರ ಉತ್ತರಾರ್ಧದಲ್ಲಿ ಆಫೀಸರಾಗಿ ಭಡ್ತಿ ಸಿಕ್ಕು ದೆಹಲಿ ಜೀವನ, ವೃತ್ತಿ ಆರಂಭವಾಯಿತು....
'ಮಾನ್ಯವರ್, ಮುಝೆ ಆಪಕೇ ಅಧೀನ್ ಕರ್ತವ್ಯ ನಿಭಾನೇ ಕಾ ಆದೇಶ್ ಮಿಲಾ ಹೈ, ಪೆಹಲೇ ರಾಮ್ ರಾಮ್ ಕಹಿಯೇ, ಹಸ್ತಲಾಘವ್ ಕೀಜಿಯೇ, ಅಥಃ ಆಜಕಾ ಕಾಮ್ ಬತಾಯಿಯೇ' ಠಾಕುರ್ ಹೆಸರಿನ ಕ್ಲರ್ಕ್ ನನ್ನ ಸೆಕ್ಷನ್ ಗೆ ಬಂದ.
'ಅರೇ ಬರ್ಕುರ್ದಾರ್, ಢಂಗ್ ಸೇ ಹಿಂದಿ ಮೇ ಕಹೋ ನಾ, ಯಹ ತೇರೇ ಸಂಸ್ಕೃತ್ ಮೇರೆ ಪಲ್ಲೆ ನಂಹೀ ಪಡತೀ' ಅಂದೆ.
ಈತನದ್ದು ಹೆಸರು-ಸರನೇಮು-ಮಾತ್ರ 'ಠಾಕೂರ್'. ಯಾವುದೇ ಅಹಂಕಾರವಾಗಲೀ, ಅಸಡ್ಡೆಯಾಗಲೀ ದರ್ಪವಾಗಲೀ ಇಲ್ಲದ ಸಜ್ಜನ ಸಾಧು ಮನುಷ್ಯ. ಯುವ ಪ್ರಾಯ, ಕೆಲಸ ಮಾಡುವ, ಕಲಿಯುವ ಹುಮ್ಮಸ್ಸಿನ ಹುಡುಗ. ಯಾವಾಗಲೂ ಹಸನ್ಮುಖದ ಸ್ಟಾಫು. ನನಗೂ ಆತನಿಗೂ ಬಹುಬೇಗ ಸಲಿಗೆ ಬೆಳೆಯಿತು.
'ನಾಯಕ್ ಸರ್, ಯಹ ರೋಜ಼್ ರೋಜ಼್ ಡೆಬಿಟ್, ಕ್ರೆಡಿಟ್, ಪಿಗ್ಮಿ ಎಂಟ್ರೀ ಇನಕೇ ಅಲಾವಾ ಬ್ರಾಂಚ್ ಮೇ ಕೋಯೀ ಔರ್ ಕಾಮ್ ನಂಹೀ ಕ್ಯಾ?... ಈ ದಿನ ನಿತ್ಯದ ಏಕತಾನತೆಯ ಕೆಲಸಗಳಿಂದ ರೋಸಿ ಹೋಗಿದ್ದೇನೆ...'
ನಾನು ಇದೇ ಗಳಿಗೆಯ ನಿರೀಕ್ಷೆಯಲ್ಲಿದ್ದೆ, 'ಇದೆಯಲ್ಲಾ! ನಾನು ಹೇಳಿದ ಹಾಗೆ ಕೇಳುವುದಾದರೆ ಹೇಳಿ ಕೊಡುತ್ತೇನೆ, ಬಾ' ಎಂದು ಆತನನ್ನು ಹಳೇ ರಿಕಾರ್ಡುಗಳ ರೂಮಿಗೆ ಕರಕೊಂಡು 'ನಾಳೆ ಬರುವಾಗ ಒಂದು ಜೋಡಿ ಹಳೆಯ ಡ್ರೆಸ್ ತಾ, ಇಲ್ಲಿನ ಹಳೆಯ ಕಡತಗಳ ರಾಶಿಯನ್ನು ನಿಯಮಗಳ ಪ್ರಕಾರ ಜೋಡಿಸಿಡಬೇಕು, ನಿನ್ನೊಡನೆ ನಾನೂ ಬರುತ್ತೇನೆ. ಎರಡು ತಿಂಗಳ ಟೈಮು ಉಂಟು, ಇದರ ಮಹತ್ವ ನಿನಗೇ ಮುಂದಿನ ದಿನಗಳಲ್ಲಿ ತಿಳೀತದೆ.'
ಬಹು ಖುಷಿಯಿಂದ ಒಪ್ಪಿಕೊಂಡ. ನಾನು, ಠಾಕುರ್ ಹಾಗೂ ಅಶೋಕ ಎಂಬ ಟೆಂಪರರಿ ಅಟೆಂಡರ್ ಮೇಲೆ ಮಾಳಿಗೆಯಲ್ಲಿನ ಕೊಠಡಿಯಲ್ಲಿ ಸ್ಥಾಪಿತರಾದೆವು.
'ಅರೇ ಛೋಟೇಮಿಯಾ, ನಾನು ಹಿಂದೀ ಪಿಕ್ಚರುಗಳಲ್ಲಿ ನೋಡಿದ ಪ್ರಕಾರ ಠಾಕೂರ್ ಅಂದರೆ ಒಂದು ತೆರನ ರುಸ್ತುಮ್ ಇದ್ದ ಹಾಗೆ, ಮುಖ ತುಂಬ ಗಲ್ಲಿ ಮೀಸೆ, ಕೈಯಲ್ಲಿ ಲಾಠಿ, ಮನೆಯ ಚಾವಡಿಯಲ್ಲಿ ಒಡ್ಡೋಲಗ, ಹಿಂದೆ ಪೀಕದಾನಿ ಹಿಡಕೊಂಡು ಒಬ್ಬ ತೈನಾತಿ, ಖುರ್ಚಿಯ ಬಗಲಲ್ಲಿ ಗುಂಡು ತುಂಬಿದ ಕೋವಿ!!....... ಈ ರೀತಿಯ ಚಿತ್ರಣ ಮೂಡುತ್ತದೆ!! ನೀನು ನೋಡಿದರೆ ಹೆಸರಿಗೆ ಮಾತ್ರ 'ಠಾಕುರ್' ಕೋವಿ ಬಿಡು, ಒಂದು ಬೆತ್ತ ಸಹ ಇಲ್ಲ........' ಸುಮ್ಮನೆ ಛೇಡಿಸಿದೆ.
'ಅರೇ ನಾಯಕ್ ಜೀ, ನೀವು ಸುಮ್ಮನೆ ಉಂಗಲೀ ಮಾಡುತ್ತಿದ್ದೀರಿ, ಠಾಕೂರಗಿರಿ ಏನೂ ಇಲ್ಲ, ಮರ್ಯಾದೆಯಿಂದ ಊರಲ್ಲಿ ಜೀವಿಸುವುದೇ ಪ್ರಯಾಸಕರವಾಗಿದೆ. ಅದೆಲ್ಲ ಇರಲಿ, ಒಂದು ಬರ್ಕಲಿ ಈಚೆ ಬಿಸಾಡಿ.....' ಕೆಲಸ ಮುಂದುವರೆಸಿದ.
'ಒಂದು ಕತೆ ಕೇಳು, ಅಧ್ಯಕ್ಷ ಅಬ್ರಹಾಮ್ ಲಿಂಕನ್ ರನ್ನು ಭೆಟ್ಟಿಯಾಗಲು ವೈಟ್ ಹೌಸಿಗೆ ಒಬ್ಬ ಸೆನೇಟರ್ ಬಂದ, ಆಗ ಈ ಅಧ್ಯಕ್ಷ ರೂಮಲ್ಲಿ ಕೂತು ತನ್ನ ಶೂಗಳ ಪಾಲಿಷ್ ಚಮಕಾಯಿಸುತ್ತಿದ್ದರು. ಈ ಸೆನೇಟರಿಗೆ ಅದನ್ನು ನೋಡಿ ಬಹಳ ಆಶ್ಚರ್ಯವಾಯಿತು. ಅರೇ ಸರ್! ನಿಮ್ಮ ಶೂಗಳನ್ನು ನೀವೇ ಪಾಲಿಷ್ ಮಾಡುವುದೇ? ಎಂದು ಉದ್ಘರಿಸಿದ. 'ಹೌದು, ನೀನು ಯಾರ ಶೂಗಳನ್ನು ಪಾಲಿಷ್ ಮಾಡುತ್ತೀ?' ಅಧ್ಯಕ್ಷ ಕೆಣಕಿದರು.....
'ಕತೆಯ ತಾತ್ಪರ್ಯವೆಂದರೆ ಯಾವುದೇ ಕೆಲಸವಿರಲಿ ಶೃದ್ಧೆಯಿಂದ ಮಾಡಬೇಕು, ಯಾವ ಕೆಲಸವನ್ನೂ ಹೀನೈಸಿಕೆಯಿಂದ ನೋಡಬಾರದು. ತಿಳಿಯಿತೇ'
'ಆಪನೇ ತೋ ಬಡೀ ಅಚ್ಛೀ ಬಾತ್ ಬತಲಾಯೀ, ಆಪಕಾ ಧನ್ಯವಾದ್.' ಠಾಕುರಿಗೆ ಖುಷಿಯಾಯಿತು. ತಾನು ಮಾಡುತ್ತಿರುವ ಕೆಲಸದ ಕುರಿತು ಒಂದಿಬ್ಬರು ದೋಸ್ತಿಗಳು ತಮಾಷೆ ಮಾಡಿದ್ದುದರಿಂದ ಖಿನ್ನನಾಗಿದ್ದ, ಈಗ ಸರಿಯಾದ....
'ಅಶೋಕ್, ಸ್ವಲ್ಪ ಬೋರ್ ಆಗುತ್ತಾ ಇದೆ, ಒಂದು ನಿನ್ನ ಪಸಂದೀಲಾ ಗಾನಾ ಹಾಡು ನೋಡುವ.....' ಆತನಿಗೂ ಉಮೇದು ಬಂತು, ಹಾಡಲಾರಂಭಿಸಿದ... 'ಆವಾಜ಼್ ದೇ, ಕಹಾಂ ಹೈ? ದುನಿಯಾ ಮೇರೀ ಜವಾಂ ಹೈ......'
'ಇಲ್ಲಿ ಏನು ನಡೀತಾ ಉಂಟು ನಾಯಕರೇ?' ನಮ್ಮ ಡಿವಿಜನಲ್ ಮೆನೇಜರ್ - ಡಿಸೋಜಾ ಎಂದವರ ಹೆಸರಿರಬೇಕು - ಬಾಗಿಲಲ್ಲಿ ನಿಂತು ಆವಾಜು ಹಾಕಿದರು.
'ನಾವು ಮೂವರೂ ಎದ್ದು ನಿಂತೆವು, 'ಸರ್ ಓಲ್ಡ್ ರಿಕಾರ್ಡ್ಸ್ ಸೆಗ್ರಿಗೇಷನ್ ಜಾತ್ತ ಆಸ್ಸ, ಚೆರಕೇಂಕ ಬೋರ್ ಜಾಯಿನಾಶೀಂ ಥೊಡೇಂ ಎಂಟರ್ ಟೇನ್ ಮೆಂಟ್...'
'ಗುಡ್ ಗುಡ್, ಯೂ ಆರ್ ಡೂಯಿಂಗ್ ವೆಲ್.' ಮರುದಿನದ ಟಪಾಲಿನಲ್ಲಿ ಈತನ ಕರ್ತವ್ಯದಲ್ಲಿನ ತನ್ಮಯತೆ ಹಾಗೂ ನಿಷ್ಠೆಗಳನ್ನು ಪ್ರಶಂಸಿಸಿ ಡಿವಿಜನಲ್ ಆಫೀಸಿನಿಂದ ಒಂದು ಪ್ರಶಂಸಾಪತ್ರ ಠಾಕೂರ್ ಹೆಸರಲ್ಲಿ ಬಂತು. ಠಾಕುರನ ಖುಷಿಗೆ ಎಲ್ಲೆಯೇ ಇರಲಿಲ್ಲ...
ಇದು ಯಾವುದೇ ಹಾಸ್ಯ, ವಿಡಂಬನೆಯ ಪ್ರಬಂಧವಲ್ಲ. ಸಾಮಾನ್ಯವಾಗಿ ನಮ್ಮಲ್ಲಿ ಆತ ಕೀಳು ತಾನು ಮೇಲು, ಈ ಕೆಲಸ ತನಗೆ ಹೇಳಿಸಿದ್ದಲ್ಲ ಎಂಬ ತಾರತಮ್ಯ ಇರುತ್ತದೆ. ಒಂದು ಕೆಲಸ ಕೀಳು ಎಂದಾದರೆ ಅದು ಸಂಸ್ಥೆಯ ನಿಯಮಾವಳಿಯಲ್ಲಿ ಏಕೆ ಇರುತ್ತದೆ? ಯಾವುದೇ ಕೆಲಸ ಕೀಳಲ್ಲ, ಕೆಲಸ ತಪ್ಪಿಸಿ ತಿರುಗುವುದು ಅಲ್ಪತನ. ಹಾಗಾಗಿ ಈ ನೆನಪನ್ನು ಕೆದಕಿದ್ದೇನೆ.

No comments:
Post a Comment