ವಿಠಲಾ ವಿಠಲಾ ವಿಠಲಾ
ಒಂದು ಸಾವಿರದಾ ಒಂಭೈನೂರ ಎಂಭತ್ತೇಳರ ಇಸವಿಯಿರಬೇಕು, ಬ್ರಾಂಚಲ್ಲಿ ಯಥಾಪ್ರಕಾರ ಕೆಲಸವು ನಡೀತಿತ್ತು.. 'ಹಾಂಜೀ ಭೈಯ್ಯಾ, ಮಾತಾದೀ ಕೀ ದರ್ಶನ್ ಠೀಕ್ ಠಾಕ್ ಹೋಗಯೀ ನಾ? ಕೋಯೀ ಪರೇಶಾನೀ?' ನನ್ನ ಸ್ಟಾಫು ತನ್ನ ಗೆಳೆಯನ ಬಳಿ ವಿಚಾರಿಸಿದ.
'ಹೌದು ದೋಸ್ತ್ ಯಾವುದೇ ಸಮಸ್ಯೆ ಆಗಿಲ್ಲ, ದೇವರ ಕೃಪೆ ದರುಶನ ಎಲ್ಲ ಸಾಂಗವಾಗಿ ನಡೆಯಿತು. ಧನ್ಯನಾದೆ, ಬಹಳ ದಿನ ಗಳಿಂದ ಕಾಯುತ್ತಿದ್ದೆವು, ಬುಲಾವಾ ತೋ ಅಬ್ ಆಯಾ...'
'ಬುಲಾವಾ ಮತಲಬ್!! ವಹಾಂ ಸೇ ಕೋಯೀ ಚಿಟ್ಠೀ ವಗೈರಾ ಆತಾ ಹೈ ಕ್ಯಾ?' ನಾನು ಮಧ್ಯೆ ಬಾಯಿ ಹಾಕಿದೆ.
'ಇಲ್ಲ ನಾಯಕ್ ಸಾಬ್, ಬುಲಾವಾ ಆನಾ ಹೈ ಅಂದರೆ ಮನದಲ್ಲಿ ಭಕ್ತಿ ಯಾತ್ರೆ ಹೋಗಬೇಕೆಂಬ ತುಡಿತ ಪ್ರೇರಣೆ ಹಾಗೂ ಕಾಲ ಕೂಡಿಬರುವುದು. ಸುಮ್ಮನೆ ತಿರುಗಾಟದ ಮೂಡಿನಲ್ಲಿ ಹಾರೈಸಿದರೆ ಆಗೂದಿಲ್ಲ...'
'ಓಹೋ ಹಾಗೇನು! ನನಗೆ ಅರಿವಿದ್ದಿಲ್ಲ'
'ನಿವೃತ್ತಿ ಬಳಿಕ ಬೆಂಗಳೂರಲ್ಲಿ ಪಾರ್ಕಲ್ಲಿ ಸಂಜೆಯ ವಾಕಿಂಗ್ ಸಮಯದಲ್ಲಿ ಮಂಗಳೂರಿನವರೊಬ್ಬರು ಖಾಸಾ ಗೆಳೆಯರಾದರು. 'ನಾಯಕರೇ ಜೀವನದಲ್ಲಿ ಒಮ್ಮೆಯಾದರೂ ಪಂಡರಾಪುರ ವಿಠಲನ ದರ್ಶನ ಪಡೆಯಬೇಕು ನೋಡಿ. ನಾವು ಇತ್ತೀಚೆಗೆ ಹೋಗಿ ಬಂದೆವು.' ತಾನು ಮಾಡಿದ ಪಂಡರಾಪುರ ಯಾತ್ರೆಯ ವಿವರಣೆಗಳನ್ನು ನೀಡಿದರು. ಜೋರಾದ ಮಳೆಯ ಕಾರಣ ಅವರಿಗೆ ಯಾತ್ರೆ ಕೊಂಚ ಕಷ್ಟವಾದರೂ ಅದರ ಯಾವುದೇ ಚಿಂತೆಯಿಲ್ಲದೇ ವಿಠಲನ ದರ್ಶನದ ಕುರಿತೇ ಅತ್ಯಂತ ಆಸಕ್ತಿ ತನ್ಮಯತೆಗಳಿಂದ ವಿವರಿಸಿದರು.
'ನನಗೂ ಪಂಡರಾಪುರ ವಿಠಲನ ದರ್ಶನ ಪಡೆಯಬೇಕು ಎಂಬ ಆಶೆ ಇದೆ ಮಾರಾಯರೇ, ಯಾವುದಕ್ಕೂ ಬುಲಾವಾ ಬಂದಿಲ್ಲ.'
'ಬುಲಾವಾ ಅಂದ್ರೇ?' .... ಅವರಿಗೆ ನನ್ನ ದಿಲ್ಲಿಯ ಕಥೆ ಹೇಳಿದೆ.
'ಕಳೆದ ದಶಂಬರ ತಿಂಗಳಲ್ಲಿ ಆ ಸುಯೋಗ ಒದಗಿತು. ನಿರ್ಮಲಾ ಟ್ರಾವಲ್ಸ್ ನ ಎಂಟು ದಿನಗಳ ಟೆಂಪಲ್ ಟೂರ್ ಪ್ರೋಗ್ರಾಮು ಹಾಕಿಕೊಂಡೆವು. ಇತರ ಪ್ರಖ್ಯಾತ ದೇವಳಗಳ-ಕೊಲ್ಹಾಪುರ ಮಹಾಲಕ್ಷ್ಮಿ ಮಂದಿರ, ಶಿರಡೀ ಸಾಯಿಬಾಬಾ, ಶನಿ ದೇವಸ್ಥಾನ, ಅಜಂತಾ, ಎಲ್ಲೋರಾ- ಅಲ್ಲದೇ ಇತರ ಕ್ಷೇತ್ರಗಳ ಒಟ್ಟಿಗೆ ಪಂಡರಾಪುರ ವಿಠಲನ ದರ್ಶನ ಭಾಗ್ಯವೂ ಇತ್ತು. ಬಹು ಕಾರಣೀಕದ ಭಕ್ತವತ್ಸಲನೆಂಬೋ ಬಿರುದು ಹೊತ್ತವನ ದೇವಾಲಯ. ಅನೇಕ ಬೋಧಕ ಕಥೆಗಳಿವೆ.....
ಚೋಖಾ ಮೇಳಾ ಎಂಬ ವಿಠಲನ ಪರಮ ಭಕ್ತನೊಬ್ಬನಿದ್ದ. ಜಾತಿಯಲ್ಲಿ ಕೊಂಚ ನಿಮ್ನ ವರ್ಗದವನು. ಸದಾ ವಿಠಲನ ನಾಮಸ್ಮರಣೆ. ವಿಠಲನ ದರ್ಶನ ಪಡೆಯಬೇಕು ಪಡೆಯಬೇಕು ಎಂಬ ಹಂಬಲ. ಕೊನೆಗೊಮ್ಮೆ ಅವಕಾಶ ಒದಗಿತು. ವಿಠಲನ ದರ್ಶನಾಕಾಂಕ್ಷಿ ವಾರಕರಿ ಗುಂಪೊಂದು ಆತನ ಊರಿನ ಮೂಲಕ ಹಾದು ಹೋಗುವಾಗ ಇವನೂ ಅದನ್ನು ಸೇರಿಕೊಂಡ. ಖುಷಿಯೋ ಖುಷಿ!! ಪರಮಾತ್ಮನ ದರ್ಶನವಾದದ್ದೇ ಆತ ತನ್ಮಯನಾದ, ತನ್ನನ್ನು ಮರೆತ... ದೇವರ ಎದುರು ಕುಳಿತು ಭಕ್ತಿಪರವಶನಾಗಿ ಸ್ತುತಿಸುತ್ತಿದ್ದ ಚೋಖಾ ಮೇಳನಿಗೆ ಸಮಯದ ಪ್ರಜ್ಞೆ ಇರಲಿಲ್ಲ...
ದೇವಾಲಯದ ಪ್ರಧಾನ ಅರ್ಚಕರು ರಾತ್ರಿ ಪೂಜೆಗೆಂದು ಬಂದಾಗ ಚೋಖಾ ವಿಠಲನಲ್ಲೇ ಮಗ್ನನಾಗಿ ಇಹದ ಪರಿವೆಯಲ್ಲಿರಲಿಲ್ಲ. ಒಬ್ಬ ಹೀನ ಜಾತಿಯವ ಮಂದಿರದೊಳಗೆ ನುಗ್ಗುವುದೆಂದರೇನು!! ಅರ್ಚಕರಿಗೆ ನಖಶಿಖಾಂತ ಏರಿತು ಸಿಟ್ಟು, ಕೋಪಾವೇಶದಿಂದ ಚೋಖಾ ಮೇಳನ ಕಪಾಳಕ್ಕೆ ರಪ್ಪೆಂದು ಬಾರಿಸಿ, ಎಬ್ಬಿಸಿ ಬೈದು ಒದ್ದು ಹೊರಹಾಕಿದರು. 'ದೇವಾ ದೇವಾ ಏನು ಅಪಚಾರವಾಯಿತು! ನಿನ್ನ ಪಾವನ ಸನ್ನಿಧಿಗೆ ಇವನು ಅಪಚಾರ ಮಾಡಿದನೇ!!' ಎಂದು ಶುದ್ಧಾಚಾರದ ಕಾರ್ಯಗಳನ್ನು ಮಾಡಿ ಮನೆಗೆ ಹೋದರು.
ಮರುದಿನ ಯಥಾಪ್ರಕಾರ ದೇವಳದ ಬಾಗಿಲು ತೆರೆದು ಭಕ್ತಾದಿಗಳ ದರ್ಶನಕ್ಕಾಗಿ ವಿಠಲನ ಶೃಂಗಾರ ಮಾಡುತ್ತಿರುವಾಗ ದೇವರ ಮೂರ್ತಿಯಲ್ಲಿ ಏನೋ ವ್ಯತ್ಯಾಸ ಕಂಡುಬಂತು, ಗಮನವಿಟ್ಟು ನೋಡಿದರು, ವಿಠಲನ ಎಡ ಕೆನ್ನೆ ಕೊಂಚ ಊದಿತ್ತು!! ಅರ್ಚಕರಿಗೆ ಒಮ್ಮೆಲೇ ಆಘಾತವಾಯಿತು! ಅವರೂ ಜ್ಞಾನಿಗಳೇ, ವಿಠಲನ ಅನನ್ಯ ಭಕ್ತರು, ದೇವರ ಸನ್ನಿಧಿಯಲ್ಲಿ ಬಹುಕಾಲದಿಂದ ಸೇವೆ ಸಲ್ಲಿಸುತ್ತಿದ್ದವರು, ಭಗವಂತನ ಸಾಕ್ಷಾತ್ಕಾರ ಆಗಿಲ್ಲವೇ ಎಂದು ಪರಿತಪಿಸುತ್ತಿದ್ದವರು. ಆದರೂ ರೂಢಿಗತ ಆಚರಣೆ, ನೇಮ ನಿಯಮ ಮತ್ತು ಸಂಪ್ರದಾಯಗಳಿಗೆ ಕಟ್ಟು ಬಿದ್ದ ಕಾರಣ ಹಿಂದಿನ ದಿನ ಆತ ಕಟುವಾಗಿ ವರ್ತಿಸಿದ್ದರು.
'ಅರೇ, ಎಂತಹ ಘೋರ ಅಚಾತುರ್ಯ ನಡೆಯಿತು!! ಯಾವ ದೇವನ ಸಾಕ್ಷಾತ್ಕಾರಕ್ಕೆಂದು ಜೀವನ ಸವೆಸುತ್ತಿದ್ದ ತಾನು ಆ ದೇವರೇ ಪ್ರತ್ಯಕ್ಷನಾದಾಗ ಕುರುಡನಾದೆನಲ್ಲಾ!? ನನ್ನಂಥ ಮೂರ್ಖ, ಅಜ್ಞಾನಿ ಅಥವಾ ಪಾಪಿ ಇನ್ನಾರಾದರೂ ಇದಾರೆಯೇ! ಮನುಷ್ಯನ ಜಾತಿ ಮಾತ್ರ ನೋಡಿದೆ, ಮನುಷ್ಯನಲ್ಲಿರುವ ವಿಠಲನನ್ನು ಗುರುತಿಸದೇ ಹೋದೆನೇ! ವಿಠಲಾ ವಿಠಲಾ ವಿಠಲಾ!!' ಎಂದು ಪರಿ ಪರಿಯಾಗಿ ದುಃಖಿಸಿ ಹಿಂದಿನ ರಾತ್ರಿ ಹೊಡೆದು ಬೈದು ಹೊರನೂಕಿದ ಚೋಖಾ ಮೇಳಾನನ್ನು ಹುಡುಕುತ್ತಾ ಕರೆಯುತ್ತಾ ಹುಚ್ಚರಂತೆ ಊರೆಲ್ಲ ಹುಡುಕಾಡಿದರು. ಕೊನೆಗೆ ನದೀ ತೀರದಲ್ಲಿ ವಿಠಲನ ಧ್ಯಾನದಲ್ಲಿ ಇದ್ದ ಚೋಖಾ ಮೇಳಾನನ್ನು ಹುಡುಕಿ ಆತನ ಕಾಲಿಗೆ ಬಿದ್ದು ಕ್ಷಮೆ ಕೇಳಿದರು....
ನಮಗೆ ದೇವರ ದರ್ಶನ ಬಹಳ ಸುಲಭದಲ್ಲಿ ಆಯಿತು. ಹೆಚ್ಚಿನ ಗಡಿಬಿಡಿಯಿಲ್ಲದೇ ಸಾಂಗವಾಗಿ ನಡೆಯಿತು. ಭಕ್ತರು ಸರತಿ ಸಾಲಲ್ಲಿ ಹೋಗಲೆಂದೇ ಅಟ್ಟಳಿಗೆಯನ್ನು ಕಟ್ಟಿದ್ದಾರೆ. ದೇವರ ಬಳಿ ಬಂದಂತೆಲ್ಲ ಮನವು ಆನಂದಮಯವಾಗಿ ಭಾವುಕವಾಯಿತು. ಭಗವಂತನ ಬಳಿ ಬಂದಂತೆಲ್ಲ ಮೈಮನಗಳಲ್ಲೆಲ್ಲ ವಿಠಲನೇ ತುಂಬಿಕೊಂಡ. ವಿಠಲ ವಿಠಲ ಎಂದು ಧ್ಯಾನಿಸುತ್ತ ಬಳಿ ಸಾರಿ ಅವನ ಪಾದಗಳನ್ನು ಸ್ಪರ್ಶಿಸಿ ಬಾಗಿ ಹಣೆಯನ್ನು ತಾಗಿಸಿ ನಮಸ್ಕರಿಸುವಾಗ ಎಲ್ಲೆಡೆ ವಿಠಲನೇ ತುಂಬಿಕೊಂಡ. ಚಲಾ ಚಲಾ ಎನ್ನುವ ದೇವಳದ ತೈನಾತಿಯಾಗಲೀ ಹಿಂದೆ ಮುಂದೆ ನಿಂತಿರುವ ಭಕ್ತಾದಿ ಯಾತ್ರಾರ್ಥಿಗಳಾಗಲೀ ಯಾರೂ, ಯಾವುದೂ ಗಮನಕ್ಕೆ ಬಾರದೇ ಕೇವಲ ವಿಠಲ ಹಾಗೂ ಆತನ ನಾಮಸ್ಮರಣೆ ಮಾತ್ರ ಅನುಭವವಾಗುತ್ತಿತ್ತು. ಪರಮಾತ್ಮನ ಪಾದಗಳನ್ನು ಕೈಯಾರೆ ಮುಟ್ಟಿ ಹಣೆ ತಾಗಿಸಿ ನಮಸ್ಕರಿಸಿ ಧನ್ಯನಾಗುವ ಸುಯೋಗ, ಸುಖ ಹಾಗೂ ಆನಂದ ಕೇವಲ ಪಂಡರಾಪುರ ವಿಠಲನಲ್ಲಿ ಮಾತ್ರ ಪ್ರಾಪ್ತವಾಗುತ್ತದೆ.🙏🙏🙏
ಜೀವನದಲ್ಲಿ ಧನ್ಯತೆಯ ಕ್ಷಣಗಳು ಅಪರೂಪವಾಗಿ ಲಭ್ಯವಾಗುತ್ತವೆ!!🙏🙏🙏

No comments:
Post a Comment