ಭಕ್ತಿ, ನಂಬಿಕೆ ಮತ್ತು ಶರಣಾಗತಿ-
ಒಂದು ಊರಲ್ಲಿ ಭಯಂಕರ ಕ್ಷಾಮದ ಸಂಕಟ ಬಿತ್ತು. ವರುಷಗಳಿಂದ ಮಳೆ ಬಾರದೇ ಜನರು ನಾನಾ ಕಷ್ಟ ಕೋಟಲೆಗಳಿಗೀಡಾದರು. ಅನೇಕರು ತಮ್ಮ ಗದ್ದೆ ಬೇಸಾಯಗಳನ್ನು ತೊರೆದು ಇತರ ಊರುಗಳಿಗೆ ಗುಳೇ ಹೋದರು. ಊರಲ್ಲಿ ಇನ್ನೂ ಯಾವುದೋ ಆಸೆಯ ಆಧಾರದಲ್ಲಿ ಉಳಕೊಂಡವರೂ ತಲೆಯ ಮೇಲೆ ಕೈಯಿಟ್ಟು ಆಕಾಶದತ್ತ ಕುತ್ತಿಗೆ ಉದ್ದ ಮಾಡಿ ನೋಡುತ್ತ ನಿಟ್ಟುಸಿರು ಬಿಡತೊಡಗಿದರು. ಕೊನೆಯಲ್ಲಿ ಎಲ್ಲರೂ ಸಮಾಲೋಚನೆ ಮಾಡಿ ಊರ ಹೊರಗಿನ ಗುಡ್ಡದ ಮೇಲೆ ಅಖಂಡ ಭಜನಾ ಕಾರ್ಯಕ್ರಮ ಮಾಡುವುದು, ದೇವರು ಭಕ್ತವತ್ಸಲ, ದಯಾಮಯಿ ತನ್ನ ಭಕ್ತರ ಅಭೀಷ್ಟೆಯನ್ನು ತಪ್ಪದೇ ನೆರವೇರಿಸುತ್ತಾನೆ ಎಂಬ ಮಹನೀಯರೊಬ್ಬರ ಸಲಹೆಯನ್ನು ಒಪ್ಪಿ ಗುಡ್ಡ ಏರಲು ಹೊರಟರು.
ಎಲ್ಲರೊಡನೆ ಆ ಊರಿನ ವಿಧವೆಯೋರ್ವಳ ಚಿಕ್ಕ ಮಗನೂ ಹೊರಟ. ಅವನು ಮತ್ತು ತಾಯಿ ಇಬ್ಬರೂ ತೀರ ಬಡವರಾಗಿದ್ದು ಅವಿದ್ಯಾವಂತರಾಗಿದ್ದು ಊರವರ ತಾತ್ಸಾರಕ್ಕೊಳಪಟ್ಟಿದ್ದರು. ಈ ಹುಡುಗನು ಈ ಬುದ್ಧಿವಂತ ಮಹನೀಯರ ಮಾತುಗಳನ್ನು ನೂರಕ್ಕೆ ನೂರೂ ನಂಬಿ ಭಜನಾಕಾರ್ಯಕ್ರಮಕ್ಕೆ ಹೊರಟ. ಮೇಲ್ಗಡೆ ಝಗಝಗನೆ ಝಳಪಿಸುವ ಸೂರ್ಯ. ಈ ಹುಡುಗ ತನ್ನೊಡನೆ ಒಂದು ಹಳೇ ಕೊಡೆಯನ್ನೂ ಹಿಡಿದುಕೊಂಡು ಹೊರಟಿದ್ದ. ಅವನ ಈ ಚರ್ಯೆಯನ್ನು ನೋಡಿ ಎಲ್ಲರೂ ಗಹಗಹಿಸಿ ನಕ್ಕರು. ಏಕೆ ನಗುತ್ತೀರಿ? ಎಂದು ಮಹನೀಯರು ಕೇಳಿದರು...
'ಅಲ್ಲ ಸ್ವಾಮೀ, ಮೇಲೆ ಈ ನಮೂನೆ ಬಿಸಿಲುಂಟು, ಈ ಹುಂಬ ಹುಡುಗ ಕೊಡೆ ಹಿಡಕೊಂಡು ಬಂದಿದ್ದಾನೆ. ಹ್ಹ ಹ್ಹ' ಎಂದು ಉತ್ತರ ಬಂತು.
'ನಿಜವಾದ ಹುಂಬರು ಯಾರು? ಖಂಡಿತ ಮಳೆ ಬರೂದಿಲ್ಲ ಎಂದು ತಿಳಿದೂ ಭಜನೆಗೆಂದು ಹೊರಟ ನಾವೋ, ನನ್ನ ಮಾತಿನ ಮೇಲೆ ಅಚಲ ವಿಶ್ವಾಸವಿಟ್ಟು ಭಜನೆ ಮಾಡಿದರೆ ಮಳೆ ಖಂಡಿತಾ ಬರುತ್ತದೆ, ಬಂದಾಗ ನೆನೆಯಬಾರದಲ್ಲ ಎಂಬ ಮುಂದಾಲೋಚನೆಯ ಈ ಹುಡುಗನೋ?'
ಕ್ಷಣಕಾಲ ಊರವರು ಸಂದಿಗ್ಧಕ್ಕೊಳಗಾದರು...
ನಮ್ಮ ಅಮ್ಮ ಹೇಳಿದ ಕತೆ. ಅವರ ನೆನಪಿನ ಖಜಾನೆಯಲ್ಲಿ ಇಂತಹ ನೂರಾರು ರತ್ನಗಳಿದ್ದವು. ನನ್ನ ನಿರೂಪಣೆ ಅಷ್ಟು ಸ್ವಾರಸ್ಯವಾಗಿಲ್ಲ. ಆದರೆ ಕತೆಯ ಭಾವ ಮನದಟ್ಟು ಮಾಡಿಸಲು ಶಕ್ತನಾಗಿದ್ದೇನೆಂಬ ನಂಬಿಕೆ ಇದೆ.

No comments:
Post a Comment