ಕುಂದಾಪುರದಲ್ಲಿ ಮನೆ, ಕೊಲ್ಲೂರಲ್ಲಿ ಬ್ರಾಂಚು. ಹಾಗಾಗಿ ಬ್ರಾಂಚಿಗೆ ಬೇಕಾಗಿರುವ ಏನಾದರೂ ಸ್ಟೇಷನರಿ ವಸ್ತುಗಳನ್ನು ಪೇಟೆಯಲ್ಲಿ ಖರೀದಿಸಿ ಒಯ್ಯುವ ವ್ಯವಸ್ಥೆ ಇತ್ತು. ಅದಕ್ಕಾಗಿಯೇ ಯಾರನ್ನಾದರೂ ಸ್ಪೆಷಲ್ಲಾಗಿ ಕಳುಹಿಸುವುದು ತಪ್ಪುತ್ತಿತ್ತು.
'ಹೆಡ್ಡಾಫೀಸಿನಿಂದ ಕಳುಹಿಸಿದ ಸ್ಟೇಷನರಿ ಐಟಮ್ಮುಗಳ ಕಟ್ಟೊಂದು ಕುಂದಾಪುರ ಸೀ ಪೀ ಸೀ ಆಫೀಸಿನಲ್ಲಿ ಉಂಟು. ಈ ವೇಬಿಲ್ಲು ತಕ್ಕೊಂಡು ಹೋಗಿ, ನಾಳೆ ಬರುವಾಗ ಬಸ್ಸಲ್ಲಿ ಹಾಕಿ ತನ್ನಿ, ಆಗ್ಬಹುದಾ?' ಮೆನೆಜರರು ಹೇಳಿದಂತೆ ನೆಕ್ಸ್ಟ್ ಡೇ ಸೀ.ಪೀ.ಸೀ. ಆಫೀಸಿಗೆ ಹೋದೆ. ನಮ್ಮ ಸ್ಟೇಷನರಿಯ ಗಂಟು ಹೆಚ್ಚುಕಮ್ಮಿ 40 ಕಿಲೋಗಳ ಮೇಲ್ಪಟ್ಟು ಇತ್ತು. ಅವರು ಅದನ್ನು ರಸ್ತೆಯ ಬದಿಯಲ್ಲಿ ಇರಿಸಿದರು. ಆ ಸಮಯಕ್ಕೆ ಬಸ್ಸೂ ಬಂತು. ನಡೂರಸ್ತೆಯಲ್ಲಿ ಬಸ್ಸು ಹೆಚ್ಚು ಹೊತ್ತು ನಿಲ್ಲಸುವುದಿಲ್ಲ , ಮೇಲಾಗಿ ಕಂಡಕ್ಟರ್ ಸಹ ಬೇಗ ಬೇಗ ಎಂದು ಗಡಿಬಿಡಿ ಮಾಡಿದ ನಿಮಿತ್ತ ಬೆನ್ನು ಬಾಗಿಸಿ ಆ ಗಂಟನ್ನು ಎತ್ತಿದ್ದೇ ನೆನಪು , ಬೆನ್ನು ಮೂಳೆಯ ಯಾವುದೋ ಒಂದು ಲಿಂಕು ಕಳಕ್ ಎಂದು ಮುರಿಯಿತೆಂದು ಕಾಣುತ್ತದೆ. ನನ್ನ ಬೆನ್ನಿಗೇ ಗುರಿಯಿಟ್ಟು ಒಂದೇ ಸವನೆ ಸ್ವತಃ ಅರ್ಜುನನೇ ಐದಾರು ಬಾಣ ಬಿಟ್ಟಂತೆ ಸಳ್ಳನೆ ನೋವಿನ ಸೆಳೆತ, ಕಣ್ಣಿಂದ ದಳದಳನೆ ಕಣ್ಣೀರು, ಬೆಂಕಿಯಂತೆ ನೋವಿನ ಉರಿ ಎಲ್ಲವೂ ಏಕಕಾಲದಲ್ಲಿ ಉಂಟಾದವು. ಮೇಲಾಗಿ ಗಂಟು ಎತ್ತೂದು ಬಿಡಿ ನನ್ನ ಸೊಂಟ ನೇರ ಮಾಡಲಾಗದ ವ್ಯಥೆ, ನಾಚಿಕೆಗಳಿಂದಾಗಿ ನನ್ನ ಪಾಡು ತುಂಬ ಕಷ್ಟಕ್ಕೆ ಬಿತ್ತು. ಅಷ್ಟರಲ್ಲಿ ಪ್ರಯಾಣಿಕರೊಬ್ಬರು ದಯೆತೋರಿ ನನಗೆ ಸಹಾಯ ಮಾಡಿದರು. ಬೇಂಕಿಗೆ ಬಂದೆ....
ದಿನಗಳುರುಳಿದವು. ಈ ಎಪಿಸೋಡು ನಾನು ಮರೆತರೂ ನನ್ನ ಸೊಂಟ ಮಾತ್ರ ಮರೀಲಿಲ್ಲ. ಕಾಲ ಕಾಲಕ್ಕೆ ಮುಖ್ಯವಾಗಿ ಮಳೆ-ಚಳಿಗಾಲಗಳಲ್ಲಿ ನೋವಿನ ಇರವನ್ನು ದೃಢಗೊಳಿಸುತ್ತಿದ್ದವು. ಕೆಲವೊಮ್ಮೆ ತೀವ್ರ ಇತರೇ ದಿನಗಳಲ್ಲಿ ಸಾಮಾನ್ಯ ನೋವಿನ ಎಪಿಸೋಡುಗಳು ಸರ್ವೇ ಸಾಮಾನ್ಯವಾಯಿತು.
ಈ ಸಲದ ಪ್ರಸಂಗ ಮಾತ್ರ ಸೀರಿಯಸ್ ಗೆ ತಿರುಗಿ ಸ್ಪೆಶಲಿಸ್ಟ್ ಅವರಿಗೆ ತೋರಿಸಿ, ಅದು ಎಂತಹ ಸಮಸ್ಯೆ ಅಂತ ನಿಷ್ಕರ್ಷೆ ಮಾಡಿಯೇ ಬನ್ನಿ ಎಂದ ಕಾರಣ ಹಿಂದೆ ಭೇಟಿ ಕೊಟ್ಟು ತೃಪ್ತಿ ಇರುವ ಡಾಕ್ಟರ್ ಅವರ ಭೇಟಿಗಾಗಿ ಹೊರಟೆ. ಹೆಬ್ರಿಯಿಂದ ಉಡುಪಿಗೆ ಪೇಟ್ಳೆಯ ತರಹ ಒಂದರ ಹಿಂದೆ ಇನ್ನೊಂದು ಬಸ್ಸುಗಳಿವೆ. ಆದರೆ ನಮಗೆ ಅತೀ ಅರ್ಜೆಂಟು ಇರುವಾಗ (ಅದ್ಯಾವುದೋ ನಿಯಮದಂತೆ) ಈ ಸಲ ಬಸ್ಸು ಸ್ಟೇಂಡಲ್ಲಿ ಕಾದದ್ದೇ ಬಂತು... ಊಂಹುಂ... ಬಸ್ಸೇ ಇಲ್ಲ. ಒಬ್ಬಿಬ್ಬರು ದೂರ? ಎಂದು ವಿಚಾರಿಸಿಯೂ ಆಯಿತು....
ನಾವು ಹಳಬರು ನಮ್ಮದೇ ಹಳೇ ಲೆಕ್ಕಾಚಾರಗಳಿಗೆ ಕಟ್ಟು ಬಿದ್ದು ಅವುಗಳ ಪರಿಧಿಯಿಂದ ಅಷ್ಟು ಸುಲಭದಲ್ಲಿ ಹೊರಬರುವುದಿಲ್ಲ..ಈಗಿನವರಾದರೆ ಬಸ್ಸಿಳಿದ ಕೂಡಲೇ ಆಟೋ ಹಿಡಿದು ಹೋಗಿಬಿಡುತ್ತಾರೆ. ನಾನೋ...ಸಿಟಿ ಬಸ್ಟೇಂಡಲ್ಲಿ ಆಸ್ಪತ್ರೆಗೆ ಹೋಗುವ ರೂಟಿನ ಬಸ್ಸಲ್ಲಿ ಕೂತೆ. ಏಳು ರುಪಾಯಲ್ಲಿ ಹೋಗುವ ಮಾರ್ಗಕ್ಕೆ ಮುವತ್ತೈದು ಏಕೆ ಕೊಡಬೇಕು? ಎನ್ನುವ ಧೋರಣೆ!! ಇರಲಿ.. ಆಸ್ಪತ್ರೆ ತಲಪಿ ರಿಜಿಸ್ಟ್ರೇಷನ್ ಮಾಡಿಸಿ ಡಾಕ್ಟರರ ರೂಮ್ ಗೆ ಬಂದಾಗ ನನ್ನ ಮುಂದೆ ಮೂರು ಮಂದಿ ಕಾಯುತ್ತಿದ್ದರು.
ನನ್ನ ಸಮಸ್ಯೆಯನ್ನು ಕೇಳಿ ಪರೀಕ್ಷಿಸಿ ಎಕ್ಸ್ ರೇ ಮಾಡಿಸಿ ಸೂಕ್ತ ವಿವರಣೆ, ಮಾತ್ರೆಯ ಚೀಟು ಎಲ್ಲ ಬರೆದು ಕೊಟ್ಟು 'ಮೇಲೆ ಹೋಗಿ, ಯಾವ ಯಾವ ರೀತಿಯ ವ್ಯಾಯಾಮಗಳನ್ನು ಮಾಡಬೇಕೆಂದು ತಿಳಿಸಿಕೊಡುತ್ತಾರೆ' ಎಂದು ಸಲಹೆ ಕೊಟ್ಟರು.
ಮೇಲೆ ಹೋದರೆ ಫಿಜಿ಼ಯೋಥೆರಪಿಯ ಸ್ಟಾಫ್ ಊಟ ಮಾಡುತ್ತಿದ್ದರು. ಈಗ ಲಂಚ್ ಟೈಮ್ ಸರ್, ಸ್ವಲ್ಪ ಕಾಯಬಹುದೇ?
'ಹಾಗಾದರೆ ನಾನೂ ಊಟ ಮಾಡಿ ಬರುತ್ತೇನೆ. ಇಲ್ಲಿ ಹೋಟೆಲ್ ಎಲ್ಲಿದೆ?'
'ಇಲ್ಲೇ ಕೆಳಗೆ ಕ್ಯಾಂಟೀನು ಉಂಟು. ಅದಲ್ಲವಾದರೆ ಹತ್ತಿರದಲ್ಲೇ ಹೊಸಾ ಹೋಟೆಲಿದೆ. ನಮ್ಮ ಲಂಚ್ ಅವರ್ 2.15ರ ತನಕ ಇದೆ.'
ನಾನು ಊಟ ಮುಗಿಸಿ ಬಂದಾಗ ನನ್ನ ನೋವು ಶಮನಕ್ಕಾಗಿ ಮಾಡಬೇಕಾದ ಐದಾರು ಅಭ್ಯಾಸಗಳನ್ನು ವಿವರವಾಗಿ ಎರಡೆರಡು ಬಾರಿ ತಿಳಿಸಿದರು. 'ನೀವು ಬಾಯಲ್ಲಿ ಹೇಳಿದರೆ ಸಾಲದು. ಅದರ ಪಾಂಪ್ಲೆಟ್ ಏನಾದರೂ ಇದ್ದರೆ ಕೊಡಿ, ಅನುಕೂಲವಾಗ್ತದೆ.'
'ಉಂಟು ಸರ್, ಈಗ ಕೊಡ್ತೇನೆ.' ತನ್ನ ಫೈಲಲ್ಲಿ ಹುಡುಕಿದರೆ ಆಕೆಗದು ಸಿಗಲಿಲ್ಲ. 'ಸರ್ ಈಗ ಸಪರೇಟ್ ಡಯಾಗ್ರಾಂ ಎಲ್ಲ ಮಾಡಿ ಕೊಡುತ್ತೇನೆ, ಐದೇ ನಿಮಿಷ' ಎಂದು ನಾನು ಮುಂದಿನ ದಿನಗಳಲ್ಲಿ ಮಾಡಬೇಕಾದ ವ್ಯಾಯಾಮಗಳ ಡೈಯಾಗ್ರಾಂ ಸಹಿತ ವಿವರಣೆಗಳಿರುವ ಚೀಟಿ ತಂದಳಾಕೆ.
'ಶ್ಶೀ ಒಂದು ಡೈಯಾಗ್ರಾಮ್ ಬರೆದದ್ದು ಮಿಸ್ಟೀಕಾಯ್ತು. ಬೇರೆ ಬರೆಯುತ್ತೇನೆ.' ಸರಸರನೆ ಚಿತ್ರ ಬರೆಯ ತೊಡಗಿದಳು.
'ನಿಮಗೆ ಕೆ.ಕೆ.ಹೆಬ್ಬಾರ್ ಗೊತ್ತುಂಟಾ? ಅವರ ಹಾಗೇ ಚಿತ್ರ ಬರೀತೀರಲ್ಲ!! ಗುಡ್ ಗುಡ್.'
'ಹೌದಾ ಅಂಕಲ್!!' ಆಕೆಗೆ ಖುಷಿಯಾಯಿತು. ಆದರೆ ಕೆ.ಕೆ.ಹೆಬ್ಬಾರ್ ಯಾರೆಂಬುದು ಆಕೆಗೆ ಗೊತ್ತಿಲ್ಲ...
'ಇಷ್ಟು ಚೆನ್ನಾಗಿ ಪೇಷನ್ಸಿನಿಂದ ವಿವರಿಸಿದಿರಿ. ಭಾಳ ಖುಷಿಯಾಯಿತು. ಅರ್ಧ ಸೊಂಟನೋವು ಇಲ್ಲೇ ಗುಣ ಆಯಿತು. ನಿಮ್ಮ ಹೆಸರೇನಮ್ಮ?'
'ರಕ್ಷಿತಾ.'
'ಧರ್ಮೋ ರಕ್ಷಿತೋ ರಕ್ಷಿತಃ' ಎಂದವಳ ದೋಸ್ತಿ ನಕ್ಕಳು.
'ಬೆನ್ನು ನೋವೋ ರಕ್ಷಿತಾ ರಕ್ಷಿತಃ' ಎಂದೆ.
ಮೂವರೂ ಘೊಳ್ಳನೆ ನಕ್ಕೆವು......

No comments:
Post a Comment