1978 ರಲ್ಲಿ ನಮ್ಮ ವಿವಾಹ ಆಯಿತು. ಮಗಳಿಗೆ ಹತ್ತಿರದಲ್ಲೇ ಸಂಬಂಧ ಆದದ್ದು ತಾಯಿಗೆ ಸಂಭ್ರಮ, ಪರಿಚಯದವನೇ ಆದ ಅಳಿಯ ಎಂದು ವಿಶೇಷ ಗೌರವ ಅಭಿಮಾನ. ವಾಸ್ತೇವ ಭಾವನವರ ಡ್ಯೂಟಿಯ ವ್ಯಾಪ್ತಿಯಲ್ಲಿ ಹೆಬ್ರಿಯೂ ಬರುತ್ತಿದ್ದು ಮನೆಗೆ ಬಂದಾಗ ಅಣ್ಣ ಅಣ್ಣ ಎಂದು ಇವಳ ಸಂಭ್ರಮ!
ಮೊದಲ ಸಲದ ಹೆರಿಗೆ/ಬಾಳಂತಿರ ತವರು ಮನೆಯಲ್ಲೇ ಆಗಬೇಕು ಎಂಬ ರೂಲ್ಸ್ ಪ್ರಕಾರ ಅಜೆಕಾರು ಆಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ ಆಯಿತು. ಕಿಣಿಯರ ಮನೆಮಗಳ ಹೆರಿಗೆ ಎಂದು ಆಸ್ಪತ್ರೆ ಸ್ಟಾಫ್ ನವರ ವಿಶೇಷ ಕಾಳಜಿ.
ಗಂಡು ಮಗು ಆಗಿದೆ ಎಂಬ ಸುದ್ದಿ ಕೇಳಿ ಆಗ ತಾನೇ ಮೂರು ಸಹ ತುಂಬದ ಸತ್ಯೇಂದ್ರ ಮಗುವಿಗೆ ಕೊಡಲೆಂದು ಕೈಯಲ್ಲಿ ಚಾಕಲೇಟು ಹಿಡಕೊಂಡು ಪುಟು ಪುಟು ಒಂದೂವರೆ ಕಿ.ಮೀ ದೂರದ ಆಸ್ಪತ್ರೆಗೆ ನಡಕೊಂಡು ಬಂದಿದ್ದ. ಅವನಿಗೆ ನಂದಿನಕ್ಕ ಅಂದ್ರೆ ಜೀವ.
ನಂತರದ ದಿನಗಳಲ್ಲಿ ಆಗಾಗ ಅಜೆಕಾರು ಟ್ರಿಪ್ಪು ಆಗುತ್ತಿತ್ತು. ಬೆಳಗ್ಗೆ ತಿಂಡಿಗೆ ವಾಸ್ತೇವ ಭಾವಜಿ-ಮೋಕೆಯ ಸತ್ಯೇಂದ್ರ-ಕೇಶವ ಭಾವಜಿ-ತಿಲಕಾ... ಈ ತೆರನ ಪಂಕ್ತಿಯ ವ್ಯವಸ್ಥೆ. ಅನ್ಸೂಯಕ್ಕ ಬಿಸಿ ಬಿಸಿ ದೋಸೆ ಸರ್ವ್ ಮಾಡೂದು ಅದು ಇದು ಮಾತಾಡುತ್ತ ತಿಂಡಿ ಸಮಾರಾಧನೆ ಕ್ರಮ. "ತೆಂಕಿಲೇಕ ಭಾಲ್ತಾ, ಸಾನ್ ಸುಮಾರಾ ನಾ ತೋ ಹ್ಞಾಂ" ಎಂದು ಮಧ್ಯೆ ಮಧ್ಯೆ ಭಾವಜಿಯವರ ಡೈಲಾಗು.
"ಕೇಶವು ಭಾವಜೀ, ತೆಂಕಿಲ ಮ್ಹಳೇರಿ ಕೋಣ್ ಮ್ಹೊಣು ಗೊಸ್ಸ್ ಕೀ?"
"ನಾರೇ ಬಾಬ್ಬಾ! ಕೋಣಾಸ್ಸೆ ಪೂರೋ?"
"ಹಾಂವಚೀ, ಆನ್ನಾನ ಮಾಕ್ಕ ಗೊತ್ನಾ ಮೋಣು ಲೆಕ್ಲಾಂ, ತೆಂಕಿಲ ಮ್ಹಳೇರಿ ಹಾಂವ" ಜ್ಯೂನಿಯರ್ ಕಿಣಿಯ ಸ್ಪಷ್ಟನೆ.☺ ☺
ಎರಡು ವರ್ಷಗಳ ನಂತರದ ಭೇಟಿ. ಪುನಃ ಬೆಳಗಿನ ತಿಂಡಿಯ ಸೀನು....
"ಕೇಶವು ಭಾವಜಿ, ಆತ್ತ ಹಾಂವ ತೆಂಕಿಲ ನ್ಹಂಯೀ,"
"ಆತ್ತ ತೆಂಕಿಲ ಕೋಣ?"
"ವಿಕ್ರಮು, ಆತ್ತ ತೋ ತೆಂಕಿಲ. ಆನಿ ಹಾಂವ ಈಪೆದಾಯೆ. ನ್ಹಂವೇ ಆನಾ.!" ಐದರ ಮಗು ಸತ್ಯೇಂದ್ರನಿಗೆ ಬಹಳ ಹೆಮ್ಮೆ..
ಒಂದು ರಸಮಯ ಘಳಿಗೆಯ ಮೆಮೋರಿ ಬಟನನ್ನು ಪುನಃ ಒತ್ತಿದ್ದೇನೆ.
No comments:
Post a Comment