Monday, December 19, 2022

ಕೂಡು ಕುಟುಂಬದ ಸಂಭ್ರಮ


1920ರ ಉತ್ತರಾರ್ಧ: ಹಿರಿಯ ಮಗ ಶ್ರೀನಿವಾಸ ನಂತರ ದೇವು, ಗುಂಡ ಮತ್ತು ಎರಡರ ಮಗು ವಿಟ್ಟಲರನ್ನು ಕಟ್ಟಿಕೊಂಡು ಕಣ್ಣಿ ಹೊಳೆಮಾ ತನ್ನ ಒಳ್ಳೆಯ ದಿನಗಳ ಹಂಬಲದಿಂದ ಹೆಬ್ರಿಗೆ ಪಯಣಿಸಿದರು. ದೇಶದಲ್ಲಿ ಪರಕೀಯರ ಆಡಳಿತ. ಕಷ್ಟದ ದಿನಗಳು, ಎಲ್ಲೆಲ್ಲೂ ಬಡತನ.... ಆದರೆ ಶ್ರೀನಿವಾಸ ನಾಯಕರದು ನಾಯಕತ್ವದ ಜೀವನ. ಪರಿಶ್ರಮದ ದಿನಗಳು. ಒಳ್ಳೆಯ ಮನಸ್ಸು. ಇತರರಿಗೆ ಆಪತ್ತಿನಲ್ಲಿ ಸಹಕರಿಸುವ ಸಹೃದಯ ಭಾವ. ವ್ಯಾಪಾರದಲ್ಲೂ ಮೇಲುಗೈ. ಅನತಿ ಕಾಲದಲ್ಲಿ ಸಾಹುಕಾರ ಶ್ರೀನಿವಾಸ ನಾಯಕರಾದರು. ಊರಲ್ಲಿ ಗೌರವಾನ್ವಿತ ಆಢ್ಯ ಕುಟುಂಬದ ನಾಯಕರು, ದಾನಿ, ಸಮಾಜಮುಖೀ ಜೀವನ, ದೈವ ದೇವರುಗಳಲ್ಲಿ ಭಕ್ತಿ ಮತ್ತು ಆಸ್ತಿಕ ಜೀವನ. 

1957ರಲ್ಲಿ ಹಿರಿಯ ಮಗ ಸುಬ್ರಾಯನ ಬ್ರಹ್ಮೋಪದೇಶ ಸಡಗರ. ಊರ ಮಂದಿ ಎಲ್ಲರು, ಸಂಬಂಧಿಕರೂ‌ ಸೇರಿದಂತೆ ಅಂದಿನ ದಿನಗಳಲ್ಲಿನ ಸಂಭ್ರಮದ ಸಮಾರಂಭ. ಸಂಜೆಯ ಇಳಿ ಸೂರ್ಯನ ಬೆಳಕಲ್ಲಿ ಫೋಟೋ ಕಾರ್ಯಕ್ರಮ. 'ಸಕ್ಕಡ ಲೋಕು ಯೆಯ್ಯಾರೇ, ಫೋಟು ಕಾಡ್ಚೇ ಆಸ್ಸ.' ಬಂದು ಕುಳಿತ ಬಂಧುವರ್ಗದವರ ಗುಂಪು ಕಂಡು ಫೋಟೋಗ್ರಾಫರಿಗೆ ದಿಗಿಲಾಯಿತು. 'ಉಂದು ಎಂಚಿನ ಮಾರ್ರೇ!! ಒಂಜೇಟ ಆಪುನ ಬಂಗ, ಬೇತೆ ಬೇತೆ ಪಟ ಗೆಪ್ಪುಗನಾ?' ನಾಲ್ಕು ಅಣ್ಣ ತಮ್ಮಂದಿರ ಕುಟುಂಬಗಳ ಒಂದು ಚಿತ್ರ, ಎಲ್ಲಾ ಬಂಧುಗಳು ಸೇರಿಸಿ ಒಂದು ಚಿತ್ರ.. ಇಂದಿಗೂ ಅವರ ಮನೆಯಲ್ಲಿ ರಾರಾಜಿಸುತ್ತದೆ. ಹಳೆಯ ದಿನಗಳ ನೆನಪುಗಳು ಅಲೆ ಅಲೆಗಳಾಗಿ ಎದ್ದು ಸುಖಾನುಭವ ಉಂಟಾಗುತ್ತದೆ..,

2021.... ಅಶ್ವಿನಿಯು ಮೊನ್ನೆ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದಳು. ಬಹಳ ಸಂಭ್ರಮದ ಗಳಿಗೆ. ಆಸೆ ಪಟ್ಟು ಆಹ್ವಾನಿಸಿದ ಎಲ್ಲ ಬಂಧುಮಿತ್ರರು ಆಗಮಿಸಿ ವಧೂವರರನ್ನು ಆಶೀರ್ವದಿಸಿದ್ದಾರೆ. ಒಂದು ಫ್ಯಾಮಿಲಿ ಗ್ರೂಪ್ ಫೋಟೋ ಆಗಬೇಕೆಂಬ ಆಸೆ. ಬಂದ ಅತಿಥಿಗಳಿಗೂ ಸಂಭ್ರಮ. ಶಿಸ್ತು ಪ್ರಕಾರ ಕುಳಿತುಕೊಳ್ಳುವಾಗ ಸುಸ್ತಾಯಿತು. ಇನ್ನೊಂದು ಭಾವಪೂರ್ಣ ಸಂಭ್ರಮದ ಗಳಿಗೆ.
 
ನೆನಪು: ಫೇಸ್ ಬುಕ್ ಪ್ರಬಂಧ ನವಂಬರ ೨, ೨೦೨೧
 

No comments:

Post a Comment