Friday, July 3, 2020

ಬೆನ್ನು ನೋವೋ ರಕ್ಷಿತೋ ರಕ್ಷಿತಾಃ..


     ಕುಂದಾಪುರದಲ್ಲಿ ಮನೆ, ಕೊಲ್ಲೂರಲ್ಲಿ ಬ್ರಾಂಚು. ಹಾಗಾಗಿ ಬ್ರಾಂಚಿಗೆ ಬೇಕಾಗಿರುವ ಏನಾದರೂ ಸ್ಟೇಷನರಿ ವಸ್ತುಗಳನ್ನು ಪೇಟೆಯಲ್ಲಿ ಖರೀದಿಸಿ ಒಯ್ಯುವ ವ್ಯವಸ್ಥೆ ಇತ್ತು. ಅದಕ್ಕಾಗಿಯೇ ಯಾರನ್ನಾದರೂ ಸ್ಪೆಷಲ್ಲಾಗಿ ಕಳುಹಿಸುವುದು ತಪ್ಪುತ್ತಿತ್ತು.

     'ಹೆಡ್ಡಾಫೀಸಿನಿಂದ ಕಳುಹಿಸಿದ ಸ್ಟೇಷನರಿ ಐಟಮ್ಮುಗಳ ಕಟ್ಟೊಂದು ಕುಂದಾಪುರ ಸೀ ಪೀ ಸೀ ಆಫೀಸಿನಲ್ಲಿ ಉಂಟು. ಈ ವೇಬಿಲ್ಲು ತಕ್ಕೊಂಡು ಹೋಗಿ, ನಾಳೆ ಬರುವಾಗ ಬಸ್ಸಲ್ಲಿ ಹಾಕಿ ತನ್ನಿ, ಆಗ್ಬಹುದಾ?' ಮೆನೆಜರರು ಹೇಳಿದಂತೆ ನೆಕ್ಸ್ಟ್ ಡೇ ಸೀ.ಪೀ.ಸೀ. ಆಫೀಸಿಗೆ ಹೋದೆ. ನಮ್ಮ ಸ್ಟೇಷನರಿಯ ಗಂಟು ಹೆಚ್ಚುಕಮ್ಮಿ 40 ಕಿಲೋಗಳ ಮೇಲ್ಪಟ್ಟು ಇತ್ತು. ಅವರು ಅದನ್ನು ರಸ್ತೆಯ ಬದಿಯಲ್ಲಿ ಇರಿಸಿದರು. ಆ ಸಮಯಕ್ಕೆ ಬಸ್ಸೂ ಬಂತು. ನಡೂರಸ್ತೆಯಲ್ಲಿ ಬಸ್ಸು ಹೆಚ್ಚು ಹೊತ್ತು ನಿಲ್ಲಸುವುದಿಲ್ಲ , ಮೇಲಾಗಿ ಕಂಡಕ್ಟರ್ ಸಹ ಬೇಗ ಬೇಗ ಎಂದು ಗಡಿಬಿಡಿ ಮಾಡಿದ ನಿಮಿತ್ತ ಬೆನ್ನು ಬಾಗಿಸಿ ಆ ಗಂಟನ್ನು ಎತ್ತಿದ್ದೇ ನೆನಪು , ಬೆನ್ನು ಮೂಳೆಯ ಯಾವುದೋ ಒಂದು ಲಿಂಕು ಕಳಕ್ ಎಂದು ಮುರಿಯಿತೆಂದು ಕಾಣುತ್ತದೆ. ನನ್ನ ಬೆನ್ನಿಗೇ ಗುರಿಯಿಟ್ಟು ಒಂದೇ ಸವನೆ ಸ್ವತಃ ಅರ್ಜುನನೇ ಐದಾರು ಬಾಣ ಬಿಟ್ಟಂತೆ ಸಳ್ಳನೆ ನೋವಿನ ಸೆಳೆತ, ಕಣ್ಣಿಂದ ದಳದಳನೆ ಕಣ್ಣೀರು, ಬೆಂಕಿಯಂತೆ ನೋವಿನ ಉರಿ ಎಲ್ಲವೂ ಏಕಕಾಲದಲ್ಲಿ ಉಂಟಾದವು. ಮೇಲಾಗಿ ಗಂಟು ಎತ್ತೂದು ಬಿಡಿ ನನ್ನ ಸೊಂಟ ನೇರ ಮಾಡಲಾಗದ ವ್ಯಥೆ, ನಾಚಿಕೆಗಳಿಂದಾಗಿ ನನ್ನ ಪಾಡು ತುಂಬ ಕಷ್ಟಕ್ಕೆ ಬಿತ್ತು. ಅಷ್ಟರಲ್ಲಿ ಪ್ರಯಾಣಿಕರೊಬ್ಬರು ದಯೆತೋರಿ ನನಗೆ ಸಹಾಯ ಮಾಡಿದರು. ಬೇಂಕಿಗೆ ಬಂದೆ....

     ದಿನಗಳುರುಳಿದವು. ಈ ಎಪಿಸೋಡು ನಾನು ಮರೆತರೂ ನನ್ನ ಸೊಂಟ ಮಾತ್ರ ಮರೀಲಿಲ್ಲ. ಕಾಲ ಕಾಲಕ್ಕೆ ಮುಖ್ಯವಾಗಿ ಮಳೆ-ಚಳಿಗಾಲಗಳಲ್ಲಿ ನೋವಿನ ಇರವನ್ನು ದೃಢಗೊಳಿಸುತ್ತಿದ್ದವು. ಕೆಲವೊಮ್ಮೆ ತೀವ್ರ ಇತರೇ ದಿನಗಳಲ್ಲಿ ಸಾಮಾನ್ಯ ನೋವಿನ ಎಪಿಸೋಡುಗಳು ಸರ್ವೇ ಸಾಮಾನ್ಯವಾಯಿತು.

     ಈ ಸಲದ ಪ್ರಸಂಗ ಮಾತ್ರ ಸೀರಿಯಸ್ ಗೆ ತಿರುಗಿ  ಸ್ಪೆಶಲಿಸ್ಟ್ ಅವರಿಗೆ ತೋರಿಸಿ, ಅದು ಎಂತಹ ಸಮಸ್ಯೆ ಅಂತ ನಿಷ್ಕರ್ಷೆ ಮಾಡಿಯೇ ಬನ್ನಿ ಎಂದ ಕಾರಣ ಹಿಂದೆ ಭೇಟಿ ಕೊಟ್ಟು ತೃಪ್ತಿ ಇರುವ ಡಾಕ್ಟರ್ ಅವರ ಭೇಟಿಗಾಗಿ ಹೊರಟೆ. ಹೆಬ್ರಿಯಿಂದ ಉಡುಪಿಗೆ ಪೇಟ್ಳೆಯ ತರಹ ಒಂದರ ಹಿಂದೆ ಇನ್ನೊಂದು ಬಸ್ಸುಗಳಿವೆ. ಆದರೆ ನಮಗೆ ಅತೀ ಅರ್ಜೆಂಟು ಇರುವಾಗ (ಅದ್ಯಾವುದೋ ನಿಯಮದಂತೆ) ಈ ಸಲ ಬಸ್ಸು ಸ್ಟೇಂಡಲ್ಲಿ ಕಾದದ್ದೇ ಬಂತು... ಊಂಹುಂ... ಬಸ್ಸೇ ಇಲ್ಲ. ಒಬ್ಬಿಬ್ಬರು ದೂರ? ಎಂದು ವಿಚಾರಿಸಿಯೂ ಆಯಿತು....

     ನಾವು ಹಳಬರು ನಮ್ಮದೇ ಹಳೇ ಲೆಕ್ಕಾಚಾರಗಳಿಗೆ ಕಟ್ಟು ಬಿದ್ದು ಅವುಗಳ ಪರಿಧಿಯಿಂದ ಅಷ್ಟು ಸುಲಭದಲ್ಲಿ ಹೊರಬರುವುದಿಲ್ಲ..ಈಗಿನವರಾದರೆ ಬಸ್ಸಿಳಿದ ಕೂಡಲೇ ಆಟೋ ಹಿಡಿದು ಹೋಗಿಬಿಡುತ್ತಾರೆ. ನಾನೋ...ಸಿಟಿ ಬಸ್ಟೇಂಡಲ್ಲಿ ಆಸ್ಪತ್ರೆಗೆ ಹೋಗುವ ರೂಟಿನ ಬಸ್ಸಲ್ಲಿ ಕೂತೆ. ಏಳು ರುಪಾಯಲ್ಲಿ ಹೋಗುವ ಮಾರ್ಗಕ್ಕೆ ಮುವತ್ತೈದು ಏಕೆ ಕೊಡಬೇಕು? ಎನ್ನುವ ಧೋರಣೆ!! ಇರಲಿ.. ಆಸ್ಪತ್ರೆ ತಲಪಿ ರಿಜಿಸ್ಟ್ರೇಷನ್ ಮಾಡಿಸಿ ಡಾಕ್ಟರರ ರೂಮ್ ಗೆ ಬಂದಾಗ ನನ್ನ ಮುಂದೆ ಮೂರು ಮಂದಿ ಕಾಯುತ್ತಿದ್ದರು.

     ನನ್ನ ಸಮಸ್ಯೆಯನ್ನು ಕೇಳಿ ಪರೀಕ್ಷಿಸಿ ಎಕ್ಸ್ ರೇ ಮಾಡಿಸಿ ಸೂಕ್ತ ವಿವರಣೆ, ಮಾತ್ರೆಯ ಚೀಟು ಎಲ್ಲ ಬರೆದು ಕೊಟ್ಟು 'ಮೇಲೆ ಹೋಗಿ, ಯಾವ ಯಾವ ರೀತಿಯ ವ್ಯಾಯಾಮಗಳನ್ನು ಮಾಡಬೇಕೆಂದು ತಿಳಿಸಿಕೊಡುತ್ತಾರೆ' ಎಂದು ಸಲಹೆ ಕೊಟ್ಟರು.

     ಮೇಲೆ ಹೋದರೆ ಫಿಜಿ಼ಯೋಥೆರಪಿಯ ಸ್ಟಾಫ್ ಊಟ ಮಾಡುತ್ತಿದ್ದರು. ಈಗ ಲಂಚ್ ಟೈಮ್ ಸರ್, ಸ್ವಲ್ಪ ಕಾಯಬಹುದೇ?

     'ಹಾಗಾದರೆ ನಾನೂ ಊಟ ಮಾಡಿ ಬರುತ್ತೇನೆ. ಇಲ್ಲಿ ಹೋಟೆಲ್ ಎಲ್ಲಿದೆ?'

     'ಇಲ್ಲೇ ಕೆಳಗೆ ಕ್ಯಾಂಟೀನು ಉಂಟು. ಅದಲ್ಲವಾದರೆ ಹತ್ತಿರದಲ್ಲೇ ಹೊಸಾ ಹೋಟೆಲಿದೆ. ನಮ್ಮ ಲಂಚ್ ಅವರ್ 2.15ರ ತನಕ ಇದೆ.'

     ನಾನು ಊಟ ಮುಗಿಸಿ ಬಂದಾಗ ನನ್ನ ನೋವು ಶಮನಕ್ಕಾಗಿ ಮಾಡಬೇಕಾದ ಐದಾರು ಅಭ್ಯಾಸಗಳನ್ನು ವಿವರವಾಗಿ ಎರಡೆರಡು ಬಾರಿ ತಿಳಿಸಿದರು. 'ನೀವು ಬಾಯಲ್ಲಿ ಹೇಳಿದರೆ ಸಾಲದು. ಅದರ ಪಾಂಪ್ಲೆಟ್ ಏನಾದರೂ ಇದ್ದರೆ ಕೊಡಿ, ಅನುಕೂಲವಾಗ್ತದೆ.'

     'ಉಂಟು ಸರ್, ಈಗ ಕೊಡ್ತೇನೆ.' ತನ್ನ ಫೈಲಲ್ಲಿ ಹುಡುಕಿದರೆ ಆಕೆಗದು ಸಿಗಲಿಲ್ಲ. 'ಸರ್ ಈಗ ಸಪರೇಟ್ ಡಯಾಗ್ರಾಂ ಎಲ್ಲ ಮಾಡಿ ಕೊಡುತ್ತೇನೆ, ಐದೇ ನಿಮಿಷ' ಎಂದು ನಾನು ಮುಂದಿನ ದಿನಗಳಲ್ಲಿ ಮಾಡಬೇಕಾದ ವ್ಯಾಯಾಮಗಳ ಡೈಯಾಗ್ರಾಂ ಸಹಿತ ವಿವರಣೆಗಳಿರುವ ಚೀಟಿ ತಂದಳಾಕೆ.

     'ಶ್ಶೀ ಒಂದು ಡೈಯಾಗ್ರಾಮ್ ಬರೆದದ್ದು ಮಿಸ್ಟೀಕಾಯ್ತು. ಬೇರೆ ಬರೆಯುತ್ತೇನೆ.' ಸರಸರನೆ ಚಿತ್ರ ಬರೆಯ ತೊಡಗಿದಳು.

     'ನಿಮಗೆ ಕೆ.ಕೆ.ಹೆಬ್ಬಾರ್ ಗೊತ್ತುಂಟಾ? ಅವರ ಹಾಗೇ ಚಿತ್ರ ಬರೀತೀರಲ್ಲ!! ಗುಡ್ ಗುಡ್.'

     'ಹೌದಾ ಅಂಕಲ್!!' ಆಕೆಗೆ ಖುಷಿಯಾಯಿತು. ಆದರೆ ಕೆ.ಕೆ.ಹೆಬ್ಬಾರ್ ಯಾರೆಂಬುದು ಆಕೆಗೆ ಗೊತ್ತಿಲ್ಲ...

     'ಇಷ್ಟು ಚೆನ್ನಾಗಿ ಪೇಷನ್ಸಿನಿಂದ ವಿವರಿಸಿದಿರಿ. ಭಾಳ ಖುಷಿಯಾಯಿತು. ಅರ್ಧ ಸೊಂಟನೋವು ಇಲ್ಲೇ ಗುಣ ಆಯಿತು. ನಿಮ್ಮ ಹೆಸರೇನಮ್ಮ?'

     'ರಕ್ಷಿತಾ.'

     'ಧರ್ಮೋ ರಕ್ಷಿತೋ ರಕ್ಷಿತಃ' ಎಂದವಳ ದೋಸ್ತಿ ನಕ್ಕಳು.

     'ಬೆನ್ನು ನೋವೋ ರಕ್ಷಿತಾ ರಕ್ಷಿತಃ' ಎಂದೆ.

     ಮೂವರೂ ಘೊಳ್ಳನೆ ನಕ್ಕೆವು......

ನಾಸ್ಟಾಲ್ಜಿಯಾ .....

ಜಿ. ನರಸಿಂಹ ನಾಯಕರು
 
     ನಾವೆಲ್ಲ ಅರುವತ್ತು ಎಪ್ಪತ್ತರ ದಶಕಗಳ ಮಂದಿ. ಅರುವತ್ತು ಹದಿಹರೆಯದ ದಶಕವಾದರೆ ಎಪ್ಪತ್ತರದ್ದು ಯವ್ವನದ ಕಾಲ. ನನ್ನದು ಆಗ ಕೊಂಚ ದಾಕ್ಷಿಣ್ಯದ ಸ್ವಭಾವ. ಊರೂ ಸಣ್ಣದು. ಹೆಬ್ರಿ ಗ್ರಾಮವೆಂದರೆ ಗ್ರಾಮವೇ!! ಕುಗ್ರಾಮವಲ್ಲದಿದ್ದರೂ ಪೇಟೆಯ ದರ್ಜೆಗೇರಿರಲಿಲ್ಲ. ಆಗಿನ ಕಾಲವೂ ಕಷ್ಟದ್ದಾಗಿತ್ತು. ಎಲ್ಲರಿಗೂ ಹೊಟ್ಟೆಪಾಡಿನದ್ದೇ ಚಿಂತೆ. ಮೇಲಾಗಿ ನಾವು ಏಳು ಮಂದಿ ಗೋಣಗಳು ಒಬ್ಬಳು ತಂಗಿ. ನಾಲ್ಕು ಜನರೆದುರು ಮುಖಕ್ಕೆ ಮುಖ ಕೊಟ್ಟು ಅಥವಾ ಕಣ್ಣಲ್ಲಿ ಕಣ್ಣಿಟ್ಟು ಮಾತುಕತೆ ವ್ಯವಹಾರ ನಡೆಸುವ ಚಾಕಚಕ್ಯತೆ ನನ್ನಲ್ಲಿ ಬಂದಿರಲಿಲ್ಲ ನಾನು ಸ್ವಲ್ಪ ಮೊದ್ದು ಸ್ವಭಾವದಂವ ಎಂಬುದನ್ನು ತಿಳಿಸುವುದಕ್ಕೆ ಇಷ್ಟೆಲ್ಲ ವಿವರಣೆ. ಇರಲಿ....

     ಇಂತಿರುವ ಸಮಯದಲ್ಲಿ ನನಗೆ ದೇವರು ಹಾಗೂ ಮಾನ್ಯ ಕೆ.ಕೆ.ಪೈಯವರ ಕೃಪೆಯಿಂದಾಗಿ ಸಿಂಡಿಕೇಟಿನಲ್ಲಿ ಜಾಬು ಆಯಿತು. ಊರವರಿಗೆಲ್ಲ ಭಾರಿ ಖುಷಿ. 'ದೇವೂ ಪುತ್ತಾಕ ಸಿಂಡಿಕೇಟಾ ಕಾಮ್ ಜಾಲ್ಲೆಂ ಖೈಂ. ಆಸ್ಸೋಂ, ಬರೇಂ ಜಾಲ್ಲೆ.' ಎಂದು ಹಿರಿಯರಾದಿಯಾಗಿ ಎಲ್ಲರಿಗೂ ಸಂತೋಷ. ಪ್ರಿಮೈಸಸ್ ಡಿಪಾರ್ಟಮೆಂಟಲ್ಲಿ ಫರ್ನಿಚರ್ ಸೆಕ್ಷನಲ್ಲಿ ಕೂಡು ಎಂದರು, ಹೋಗಿ ಕೂತೆ. ಏನು ಮಾಡೂದೆಂದು ತಿಳೀಲಿಲ್ಲ , ಪ್ರತಿಯೊಬ್ಬರೂ ತಮ್ಮತಮ್ಮ ಕೆಲಸದಲ್ಲಿ ಮಗ್ನರು. ಎದುರು ಕುಳಿತಿದ್ದ ಇಕನಾಮಿಕ್ಸ್ ಡಿಪಾರ್ಟಮೆಂಟಿನ ಟೈಪಿಸ್ಟ್ ನನ್ನ ಪರಿಚಯ ಕೇಳಿದರು. ಏನೋ ಗುಣುಗುಣು ಗೊಣಗಿದೆ. ನನ್ನ ಗೊಣಗಾಟ ಅವರಿಗೆ ಸಮ್ಮತವಾಗಲಿಲ್ಲವೋ ಏನೋ 'ಏಕ ನಿಮ್ಮಿಲೇರೀ ಆನ್ಯೇಕ ಉಲ್ಲೈತಾ' ಎಂದು ಮುಖ ತಿರುಗಿಸಿ ತಮ್ಮ ಕೆಲಸ ಮುಂದುವರೆಸಿದರು. ಪಕ್ಕದ ಸೀಟಿನಲ್ಲಿನ ಲಲನಾಮಣಿ ಕಿಸಕ್ಕೆಂದು ನಕ್ಕಳು. ನನಗೆ ಕೊಂಚ ಮುಜುಗರವಾಯಿತು. 
 
       ಹನ್ನೊಂದರ ಸಮಯಕ್ಕೆ ಶ್ರೀ ನಾರಾಯಣ ಗಡಿಯಾರ್  'ನನ್ನ ಗುರುತ ಆಗ್ತದೋ, ಸರೀ ನೋಡು.' ಎಂದು ಹತ್ತಿರ ಕೂತರು.

     'ಹೌದು, ಕೇ ಪೀ ಟಿ ಮಂಗಳೂರಲ್ಲಿ ನೀವು ನನ್ನ ಸೀನಿಯರ್ ಆಗಿದ್ದಿರಿ. ನೀವು ಫೈನಲ್ ಈಯರ್, ನಾನು ಫಸ್ಟ್ ಈಯರ್ ಸ್ಟೂಡೆಂಟ್ ಆಗಿದ್ದೆ.'

      ಕರೆಕ್ಟ್, ಈಗ ನೋಡು, ಕೆಲವು ಫೈಲು ಇಟ್ಟಿರುತ್ತೇನೆ, ಬ್ರಾಂಚುಗಳಿಂದ ತಮಗೆ ಬೇಕಾಗಿರುವ ಫರ್ನಿಚರ್-ಟೇಬಲ್, ಖುರ್ಚಿ ಮುಂತಾದವುಗಳ- ಬೇಡಿಕೆ ನಮಗೆ ಕಳಿಸ್ತಾರೆ. ನಾವು ಅವರಿಗೆ ಸಾಂಕ್ಷನ್ ಬರೆದು ಕಳಿಸಬೇಕು..... ನೀನು ಇವತ್ತು ಈ ಫೈಲು ಗಳನ್ನು ಓದು, ಮೆಲ್ಲ ಮೆಲ್ಲ ಅರ್ಥ ಆಗ್ತದೆ. ವೆಲ್ ಕಮ್ ಟು ಸಿಂಡಿಕೇಟ್ ಫೇಮಿಲಿ'. ನನಗೆ ಕೊಂಚ ಉಮೇದು ಬಂತು. ಫೈಲು ಗಳನ್ನು ಬಿಡಿಸಿ ಓದಲಾರಂಭಿಸಿದೆ, ಏನೂ ಅರ್ಥ ಆಗಲಿಲ್ಲ. ಇರಲಿ ಎಂದು ಓದುತ್ತಾ ಕೂತೆ. ಹನ್ನೊಂದೂಮುಕ್ಕಾಲರ ಹೊತ್ತಿಗೆ 'ಬಾ ಮಹರಾಯ, ಒಂದೊಂದು ಚಾ ಹಾಕಿ ಬರುವ' ಎಂದು ಕೇಂಟೀನಿಗೆ ಕರಕೊಂಡು ಹೋದರು.

     ನಾನು ಖುರ್ಚಿಯಲ್ಲಿ ಕೂತು ಫೈಲು ಓದುವದು, ಸಂಜೆ ಆರೂಕಾಲರ ಸೀ ಎಮ್ ಟಿ ಯಲ್ಲಿ ಹೆಬ್ರಿಗೆ ಮರಳುವುದು. ನನ್ನ ಸೆಕ್ಷನ್ನಿನ ಗೆಳೆಯ, ಆಫೀಸರ್ ಮತ್ತು ಗಡಿಯಾರ ಮೂರು ಜನರ ಬಳಿ ಮಾತಾಡುವುದು ಅದೂ ಅವರು ಮಾತಾಡಿಸಿದರೆ ಮಾತ್ರ , ಅಷ್ಟೇ, ಇದು ದಿನಚರಿ. 'ನಮ್ಮ ಆಫೀಸಿಗೆ ಒಂದು ಮಗು ಬಂದಿದೆ, ಮೂಗಲ್ಲಿ ಬೆರಳು ಹಾಕಿದರೆ ಕಚ್ಚಲಿಕ್ಕೆ ಸಹ ಬರೂದಿಲ್ಲ,' ಪಕ್ಕದ ಟೈಪಿಣಿಯರು ನಗುತ್ತಿದ್ದರು.

     ಹದಿನೈದು ದಿನಗಳ ಬಳಿಕ ಅಂದರೆ ಮಾರ್ಚ್ 1971ರ ತಿಂಗಳಲ್ಲಿ ಸಣ್ಣ ಬಿರುಗಾಳಿ ಬೀಸಿತು. ಡಿಪಾರ್ಟಮೆಂಟಿಗೆ ಹೊಸಬ ರೊಬ್ಬರ ಸೇರ್ಪಡೆಯಾಯಿತು. G.ನರಸಿಂಹ ನಾಯಕ್. ನನಗಿಂತ 4 ವರ್ಷ ದೊಡ್ಡವರು. ಕೆಲಸಕ್ಕೆ ರಿಪೋರ್ಟು ಮಾಡಿದ ಅರ್ಧಘಂಟೆಯೊಳಗಾಗಿ ಎಲ್ಲರ ಬಳಿ ಹೋಗಿ ಪರಿಚಯ ಹೇಳಿಕೊಂಡು ಮಾತನಾಡಿಸಿ ದೋಸ್ತಿ ಸ್ಥಾಪನೆ ಮಾಡಿ ಆಯಿತು. ನನ್ನ ಬಳಿಯೂ ಬಂದು ಮಾತನಾಡಿಸಿ ಹೋದರು.

       ನಾಯಕರದು ಅತ್ಯಂತ ಸರಳ ಪ್ರೀತಿಭರಿತ ಆಕರ್ಷಕ ಸ್ವಭಾವ. ಕುಷಾಲು ಮಾತುಗಳು ಸ್ವಲ್ಪ ಜಾಸ್ತಿ. ನನಗೆ ಅವರ ಸಾಂಗತ್ಯ ಬಹಳವೇ ಹಿಡಿಸಿತು. 'ಏನು ಮಹರಾಯ ಗುಮ್ಮನ ಹಾಗೆ ಕೂತಿರ್ತಿ? ಅವರಿವರ ಬಳಿ ಮಾತಾಡಲು ಕಲಿ. Be open and friendly....' 

     ಗೆಳೆಯರ ಲೈನಿನಲ್ಲಿ ನಾಯಕರು ಎದೂರು ಇರುವವರು. ನಮ್ಮದು ಆಗ ಯವ್ವನದ ದಿನಗಳು. ವಯಸ್ಸಿಗೆ ಸರಿಯಾದ ಹುಚ್ಚು ಬಿಚ್ಚು ಮನಸ್ಸುಗಳಿದ್ದವು. ಮೇರೆಗಳಿಲ್ಲದ ಮಾತುಗಳು ಅಂತೆಯೇ ಕಪಟಗಳಿಲ್ಲದ ಪ್ರೀತಿ, ಗೆಳೆತನ ನಾಯಕರಿಂದ ಕಲೀಬೇಕು. ಅವರ ಮಾತುಗಾರಿಕೆ, ಸ್ನೇಹಿತರನ್ನು ಗಳಿಸಿಕೊಳ್ಳುವ ಪರಿ, ನಗುಮುಖದ ವ್ಯವಹಾರ ಮುಂತಾದವುಗಳಿಗೆ ಪೂರಕವಾದ ಸೆಕ್ಷನ್ನೇ ಅವರಿಗೆ ಸಿಕ್ಕಿತು. 'ಹೆಡ್ ಆಫೀಸು ಮೇಂಟೈನೆನ್ಸ್.' ಎಷ್ಟೇ ಕುಸಾಲು ಬಿಸಾಲು ಇದ್ದರೂ ಕೆಲಸದಲ್ಲಿ ಶೃದ್ಧೆ ಇದ್ದುದರಿಂದ ಜನ ಎಲ್ಲಾ ಮಂದಿಯ ಡಾರ್ಲಿಂಗ್ ಆಗಿದ್ದರು. 
 
     ಛೇರ್ಮನ್ ಪೈಯವರು ಡ್ಯೂಟಿ ವಿಚಾರದಲ್ಲಿ ತುಂಬಾ ಸ್ಟ್ರಿಕ್ಟು. ತಾವೇ ಸ್ವತಃ ವಿರಾಮವಿಲ್ಲದೇ ದುಡಿಯುತ್ತಿದ್ದರು, ಹಾಗಾಗಿ ಹೆಡ್ ಆಫೀಸಿನ ಸ್ಟಾಫ್ ಗಳಲ್ಲಿ ಆಲಸ್ಯವನ್ನು ಸಹಿಸುತ್ತಿರಲಿಲ್ಲ. ಅನವಶ್ಯಕ ತಪ್ಪು ತೊಂದರೆಗಳಾದರೆ ಮುಖ ಮೂತಿ ನೋಡದೇ ನೀರಿಳಿಸಿಬಿಡುತ್ತಿದ್ದರು.

     'ಏನು ನಾಯಕರು ಸ್ವಲ್ಪ ಚಪ್ಪೆ ಇದ್ದೀರಿ ಇವತ್ತು?'

     'ಅಲ್ಲ ಮಹರಾಯ ಛೆಯರ್ ಮೇನ್ ರಿಗೆ ಆರಾಮವಿಲ್ಲವೊ ಅಂತ ಯೋಚನೆಯಾಗಿದೆ?'

     'ಏಕೆ?'

     'ಟೂರ್ ಮುಗಿಸಿ ಬಂದು ನಾಲ್ಕು ದಿನ ಆಗಿವೆ. ಇನ್ನೂ ನನಗೆ ಕಾಲ್ ಬಂದಿಲ್ಲ!!'

     ಅಷ್ಟರಲ್ಲಿ ಛೇರ್ಮನ್ ರ ಅಟೆಂಡರ್ ಗಡಬಡಿಸಿ ಬಂದು 'ನಾಯಕರೆ ನಾಯಕರೇ ಛೇರ್ಮನ್ ಕರೀತಾರೆ, ಬೇಗ ಬನ್ನಿ, ಕಂಡಾಪಟ್ಟೆ ಸಿಟ್ಟಾಗಿದ್ದಾರೆ, ಕೆಂಪಕೆಂಪು ಆಗಿದ್ದಾರೆ!! ನಡೀರಿ ನಡೀರಿ.'
 
     'ಅಯ್ಯಬ್ಬ! ಈಗ ಸರಿಯಾಯಿತು ನೋಡು, ನೀನು ಹೋಗು ಮಾರಾಯ! ನಾನು ಬರ್ತೇನೆ.....' ಮೇಲೆ ಮೂರನೇ ಮಾಳಿಗೆಗೆ ಹೋಗಿ ಚೆನ್ನಾಗಿ (ನಾಲ್ಕು ದಿನಗಳ ಕೋಟಾ) ಉಗಿಸಿಕೊಂಡು ಬಂದು ಕೂತರು. 'ನಿನ್ನೆಯಿಂದ ಮೋಷನ್ನೇ ಸರಿಯಾಗಿರಲಿಲ್ಲ , ಈಗ ಸರಿಯಾಯ್ತು ನೋಡು!!'......ಹೆಡ್ಡಾಫೀಸಿನಲ್ಲಿ ನಮ್ಮ ಡ್ಯೂಟಿಯ ಸ್ಟೈಲೇ ಹಾಗೆ.
 
     ಮುಂದಿನ ದಿನಗಳಲ್ಲಿ ಜಾಬ್ ರೊಟೇಷನ್ ನಲ್ಲಿ ಅವರ ಡ್ಯೂಟಿ ನನ್ನ ಪಾಲಿಗೆ ಬಂತು. ಆಗ ಮಾನ್ಯ ಪೈಯವರು ಕೆಲಸ ಮಾಡುವ ಪರಿ, ಕಟ್ಟುನಿಟ್ಟು ಮತ್ತು ಶೃದ್ಧೆಯಿಂದ ನಿಭಾಯಿಸುವ ಸ್ಟೈಲು. ಇವೆಲ್ಲವನ್ನು ಹತ್ತಿರದಿಂದ ನೋಡಿದ್ದೇನೆ..!! ಅಷ್ಟು ಸ್ಟ್ರಿಕ್ಟ್ ಹಾಗೂ ದಕ್ಷ ಆಡಳಿತಗಾರರಾಗಿದ್ದರೂ ಬೇಂಕಿನ ಹಾಗೂ ತನ್ನ ಸಿಬಂದಿ ಸಹಯೋಗಿಗಳ ಮೇಲಿನ ಅವರ ಪ್ರೀತಿ ಸಂಬಂಧಗಳನ್ನು ವರ್ಣಿಸಲು ಶಬ್ದ ಸಾಲದು.

     ನನ್ನ ಮತ್ತು ನಾಯಕರ ಸುಮಾರು ನಲವತ್ತೈದು ವರ್ಷಗಳಿಗಿಂತಲೂ ಮಿಕ್ಕಿದ ಸ್ನೇಹ ದೋಸ್ತಿ ಸಂಬಂಧ. ಇವತ್ತಿಗೂ ನಿತ್ಯ ನೂತನ........

Opposition Parties and Democracy


See the difference between opposition party at Vajpayee's time and today.  Do you find?
Some history not to be forgotten
“If India pokes its nose in Pakistan, US will not keep its trap shut. India will be taught a lesson”
- Richard Nixon.
“India regards America as a friend. Not a boss. India is capable of writing its own destiny. We know and are aware how to deal with each one according to circumstances”
- Indira Gandhi
The year was 1971 and the month November.
Indian Prime Minister Indira Gandhi articulated these exact words sitting with the U.S. President Richard Nixon in the White House, while maintaining an eye-to-eye contact.
The said event was narrated by the then Secretary of State and NSA, Henry Kissinger in his autobiography.
That was the day when the Indo-U.S. joint media address was cancelled by Indira Gandhi who walked away from the White House in her own inimitable style.
Kissinger, while ushering Indira Gandhi into her car, had commented, "Madam Prime Minister, don't you feel you could have been a little more patient with the President".
Indira ji replied, "Thank you, Mr. Secretary, for your valuable suggestion.
Being a developing country, we have our backbones straight - & enough to fight the atrocities. We shall prove that days are gone to rule any nation far from thousands of miles”
Thereafter.. as soon as the Air India Boeing touched the Palam runway in Delhi, Indira Gandhi summoned the leader of opposition, Atal Behari Vajpayee to her residence immediately.
Post an hour of discussion behind closed doors, Vajpayee was seen hurrying back. It was thereafter known that Atal Ji would be representing India at the United Nations.
Donald Paul of BBC had jumped in with a question to Vajpayee, "Indira ji regards you as a staunch critic. In spite of that, are u sure you'd be at the United Nations shouting your throat (voice) out in favour of the Incumbent Government?”
Vajpayee had a repartee.. "A rose adorns a garden, so does a Lily. Each is beset with the idea that they are individually the most beautiful. When the garden falls in a crisis, it's no secret that the guarden has to safeguard its beauty as one. I have come today to save the garden. This is called Indian Democracy."
The resultant history is all known to us.
America sent 270 paton tanks to Pakistan. They called the world media to demonstrate that these tanks were produced under exclusive technology, and are/were thus indestructible. The intention was very clear. This was a warning signal to the rest of the world that no one should help India.
America did not stop here.
Burma-Shell the only U.S. company supplying oil to India, was told to stop. They were sternly told by U.S. not to deal with India anymore.
India's history thereafter was only about fighting back.
Indira Gandhi's incisive diplomacy ensured oil came in from Ukraine.
A battle that lasted just a day destroyed these  270 paton tanks. The destroyed  tanks were brought into India for demonstration. The hot deserts of Rajasthan still stands as a witness where U.S. pride was decimated.
A war that lasted eighteen days thereafter culminated into capturing 1.5 lakhs POWs from Pakistan. 
Mujibar Rahman was released from Lahore Jail.
The month was March - Indira Gandhi recognized Bangladesh as an independent nation in the Indian Parliament.
Vajpayee praised Indira Gandhi profusely for the great achievement and victory.
These events had a packet of long lasting manifested fallouts.
—India's own oil company, viz. Indian Oil came into being.
—India expressed itself as a nation of strength in the eyes of the world.
—India led the Non-Aligned Movement (NAM) from the front.
Its leadership was unquestioned.
Times and events of such strength did get submerged into the great depths of yore.
Truthful history till date remains as a baton.
India has treaded fifty years hence. There is a sense of tiredness.
Democracy finds itself lonely as a word in the lexicon.
The opposition is no longer part of democracy anymore.
The voices, if not in toe, are regarded as voices of evil.

Chitra why did you pay my hotel bill



The ticket collector came in and started checking people's tickets. Suddenly, he looked in my direction and asked, 'What about your ticket?'

'Not you, madam, the girl hiding below your berth. Hey, come out, where is your ticket?' Someone was sitting below my berth. When the collector yelled at her, the girl came out of hiding.

She was thin, dark, scared and looked like she had been crying profusely. She must have been about 13 or 14 years old. She had uncombed hair and was dressed in a torn skirt and blouse. She was trembling and folded both her hands. The collector started forcibly pulling her out from the compartment. Suddenly, I had a strange feeling. I stood up and called out to the collector. 'Sir, I will pay for her ticket,' I said.

Then he looked at me and said, 'Madam, if you give her ten rupees, she will be much happier with that than with the ticket.'

I did not listen to him. I told the collector to give me a ticket to the last destination, Bangalore, so that the girl could get down wherever she wanted.

Slowly, she started talking. She told me that her name was Chitra. She lived in a village near Bidar. Her father was a coolie and she had lost her mother at birth. Her father had remarried and had two sons with her stepmother. But a few months ago, her father died. Her stepmother started beating her often and did not give her food. She did not have anybody to support her so she left home in search of something better.

By this time, the train had reached Bangalore. I said goodbye to Chitra and got down from the train. My driver came and picked up my bags. I felt someone watching me. When I turned back, Chitra was standing there and looking at me with sad eyes. But there was nothing more that I could do. I had paid her ticket out of compassion but I had never thought that she was going to be my responsibility!

I told her to get into my car. My driver looked at the girl curiously. I told him to take us to my friend Ram's place. Ram ran separate shelter homes for boys and girls. We at the Infosys Foundation supported him financially. I thought Chitra could stay there for some time and then we could talk about her future.

Ram suggested that Chitra could go to a high school nearby. I said that I would sponsor her expenses. I left the shelter knowing that Chitra had found a home and a new direction in her life.

I always enquired about Chitra's well-being over the phone. She was studying well and her progress was good.. I offered to sponsor her college studies if she wanted to continue studying. But she said, 'No, Akka. I have talked to my friends and made up my mind. I would do my diploma in computer science so that I can immediately get a job after 3 years.' She wanted to become economically independent as soon as possible.  

Chitra obtained her diploma & got a job in a software company as an assistant testing engineer. When she got her first salary, she came to my office with a sari and a box of sweets.

One day, I got a call from Chitra. She was very happy. 'Akka, my company is sending me to USA! I wanted to meet you and take your blessings but you are not here in Bangalore.'

Years passed. Occasionally, I received an e-mail from Chitra. She was doing very well in her career. She was posted across several cities in USA and was enjoying life. I silently prayed that she should always be happy wherever she was.

Years later, I was invited to deliver a lecture in San Francisco for Kannada Koota, an organization where families who speak Kannada meet and organize events. The lecture was in a convention hall of a hotel and I decided to stay at the same hotel. After the lecture, I was planning to leave for the airport. When I checked out of the hotel room and went to the reception counter to pay the bill, the receptionist said, 'Ma'am, you don't need to pay us anything. The lady over there has already settled your bill. She must know you pretty well.' I turned around and found Chitra there.

She was standing with a young white man and wore a beautiful sari. She was looking very pretty with short hair. Her dark eyes were beaming with happiness and pride. As soon as she saw me, she gave me a brilliant smile, hugged me and touched my feet. I was overwhelmed with joy and did not know what to say. I was very happy to see the way things had turned out for Chitra. 

But I came back to my original question. 'Chitra, why did you pay my hotel bill? That is not right.' Suddenly sobbing, she hugged me and said, 'Because you paid for my ticket from Bombay to Bangalore!'

(Excerpted from Mrs. Sudha Murty's 'The Day I Stopped Drinking Milk’ )

I thank Smt. Sudha Murthy for this beautiful thought....Hknayak

Thursday, June 18, 2020

Aihole-Pattadakallu

ಐಹೊಳೆ ಪಟ್ಟದಕಲ್ಲು ಇವು ಈಗಿನ ಟರ್ಮಿನಾಲಜಿಯಲ್ಲಿ ಹೇಳುವುದಾದರೆ ಟ್ವಿನ್‌ಸಿಟೀಸ್ಕಳೆದ ಬಾರಿ ಹೋದಾಗ ಸಂಜೆ ತುಂಬ ತಡವಾಗಿತ್ತು. ಮತ್ತು ಅಲ್ಲೇನೂ ಹೆಚ್ಚು ನೋಡುವಂತಹುದು ಇಲ್ಲ ಎಂದೊ ಏನೋ ಒಟ್ಟಾರೆ ಹಾಗೇ ಬಂದಿದ್ದೆವು. ಈಗ ಐಹೊಳೆ-ಪಟ್ಟದಕಲ್ಲು ಎರಡೂ ಕಡೆ ಸರಕಾರದ ವತಿಯಿಂದ ಒಳ್ಳೆಯ ವ್ಯವಸ್ಥೆ ಹಾಗೂ ದೇಖ್‌ಬಾಲ್ ಇದ್ದಂತೆ ತೋರುತ್ತದೆಶುದ್ಧಶುಭ್ರ ಪಾರ್ಕ್‌ನಂತಹ ಪರಿಸರ.ಕಾರಿನಿಂದ ಇಳಿದ ಕೂಡಲೇ ಖುಶಿ ಆಯಿತು.ಇಲ್ಲಿ ಭಗ್ನಗೊಂಡು ಅಲ್ಲಲ್ಲಿ ಮಾಯವಾಗಿದ್ದ ಶಿಲ್ಪ ದೇವಸ್ಥಾನಗಳ ಪುನರುತ್ಥಾನವನ್ನು ಬಹಳ ಕ್ರಮಬದ್ಧವಾಗಿ ಅಚ್ಚುಕಟ್ಟಾಗಿ ಮಾಡಿದ್ದಾರೆಎಲ್ಲಾ ಕಲ್ಲುಗಳು ತಮ್ಮತಮ್ಮ ಒರಿಜಿನಲ್ ಸ್ಥಾನಗಳನ್ನು-ಆದಷ್ಟು ಮಟ್ಟಿಗೆ-ಪಡಕೊಂಡು ಶಿಲ್ಪ ಹಾಗೂ ದೇವಸ್ಥಾನ ಪುನಃ ಶೋಭಿಸುತ್ತಿವೆಎಷ್ಟು ಹೊತ್ತು ನೋಡಿದ್ರೂ ಸಾಲದು ಎನಿಸುತ್ತಿದೆಹಿಂದೆ ವಿಜಯನಗರ ಸಾಮ್ರಾಜ್ಯದಲ್ಲಿ ಸಂಪತ್ತು ಸುಖ ಸಮೃದ್ಧಿ ತುಂಬಿ ತುಳುಕುತ್ತಿದ್ದವು ಎಂದು ಪಾಠಗಳಲ್ಲಿ ಓದಿದ್ದೆಅದು ಹೌದುರಾಜ್ಯದಲ್ಲಿ ಒಂದು ಉತ್ತಮ ಆಡಳಿತ ಕಾಲಕಾಲಕ್ಕೆ ಮಳೆಬೆಳೆ ಜನರಿಗೆ ಭದ್ರತೆ ಸಾಮಾಜಿಕ ನೆಮ್ಮದಿ ಇದ್ದರೆ ಮಾತ್ರ ಶಿಲ್ಪಸಂಗೀತನಾಟ್ಯ ಅಥವಾ ಇತರೇ ವಿದ್ಯೆಗಳ ಅಭಿವೃದ್ಧಿ ಸಾಧ್ಯಯಾವನೇ ವ್ಯಕ್ತಿ ತನ್ನ ಅಂತರಂಗದಲ್ಲಿನ ವಿದ್ಯೆ ವಿಶೇಷಗಳಲ್ಲಿ ಅಭಿವೃದ್ಧಿ ಹೊಂದಬೇಕಿದ್ದರೆ ತಾನು ಸ್ವತಹ ಶ್ರೀಮಂತನಾಗಬೇಕಿಲ್ಲಆದರೆ ಊರು ದೇಶ ಗಳಲ್ಲಿ ಶಾಂತಿ ಸಮಾಧಾನ ಇರಬೇಕಾಗುತ್ತದೆ ಇದು ನನ್ನ ಕಿಂಚಿತ್ ಅಭಿಪ್ರಾಯಹೌದೋ ಅಲ್ಲವೋ ತಿಳಿದವರು ಹೇಳಬೇಕುಹಿಂದೆ ಕದಂಬಚಾಲುಕ್ಯ ಹಾಗೂ ಇತರ ಕೆಲವು ಸಾಮ್ರಾಜ್ಯಗಳ ಆಳ್ವಿಕೆಯ ಸಮಯದಲ್ಲಿ ಸುಖ-ಸಂಪತ್ತು ಮಾತ್ರವಲ್ಲದೇ ಕಲಾವಿದರಿಗೆ ಸವಲತ್ತು ಸೌಲಭ್ಯ ಮರ್ಯಾದೆಗಳು ಆಡಳಿತ ಹಾಗೂ ಸಮಾಜದಿಂದ ದೊರೆಯುತ್ತಿರಬೇಕು. ಆದ್ದರಿಂದ ಉತ್ತಮಗಳಲ್ಲಿ ಅತ್ಯುತ್ತಮ ಎನಿಸುವಂತಹ ಶಿಲ್ಪಕಲೆಯ ಬೆಳವಣಿಕೆ ನಾವು ನೋಡಬಹುದು. ಇವನ್ನು ನಾವು ಹಂಪಿ ಮತ್ತಿತರ ಕಡೆಗಳಲ್ಲಿ ನೋಡುತ್ತೇವೆಫೂಟ್‌ರೂಲ್ ಹಿಡಕೊಂಡು ಸರಿಯಾಗಿ ನಾಲ್ಕು ಲೈನು ಎಳೆಯುವ ತಾಳ್ಮೆ ನನಗಿಲ್ಲಹಾಗಿರುವಾಗ ಅದೆಷ್ಟು ದೇವಳ, ಮೂರ್ತಿಗಳು, ಕೆತ್ತನೆಗಳು!ಅವುಗಳಲ್ಲಿ ಅವೆಷ್ಟು ವೈವಿಧ್ಯಅವೇನು ಸೌಂದರ್ಯ! ಒಬ್ಬ ಕವಿ ಯಾ ಭಾವುಕ ಮನುಷ್ಯನಾಗಿದ್ದರೆ ಹುಚ್ಚನೇ ಆಗುತ್ತಾನೆನನಗೂ ಒಂದೆರಡು ಕಡೆ ಮನವು ಭಾವದಲ್ಲಿ ಬಿದ್ದು ತನ್ಮಯನಾದೆಮುಂದೆ ಹೊರಡಲು ಕಾಲೇಳಲಿಲ್ಲ.ಇನ್ನು ಈ ಎರಡು ಕಡೆಗಳಲ್ಲಿ ಏನೆಲ್ಲ ನೋಡಿದೆವೆಂದು ಬರೀತಾ ಇದ್ದರೆ ಪುನರಾವರ್ತನೆ ಆಗುತ್ತದೆಆದರೂ ಸರಕಾರದಭಾರತೀಯ ಪುರಾತತ್ವ ವಿಭಾಗದ ಜನರಿಗೆ ಶಭಾಸ್ ಹೇಳಬೇಕುಅವರ ಕೆಲಸವೇ ಇರಬಹುದು ಆದ್ರೂ ಈ ಸ್ಮಾರಕಗಳನ್ನು ಬಹುಮಟ್ಟಿಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆನಮ್ಮ ಹಣೆಬರಹ, ಸಂಕುಚಿತ ಭಾವನೆಗಳಿಂದಾಗಿ ಸರಿಯಾಗಿ ನಾವು ಈ ಶಿಲ್ಪ,ಕಲೆದೇವಾಲಯಗಳನ್ನು ಅವುಗಳ ಮೂಲ ವೈಭವಔನ್ನತ್ಯಗಳಲ್ಲಿ ಉಳಿಸಿಕೊಳ್ಳಲು ಅಸಮರ್ಥರಾದೆವುಅದು ವಿಚಾರ ಬೇರೆ

ಮರುದಿನ-೨೫ಜನವರಿ ೨೦೧೧-ಲಕ್ಕುಂಡಿಗೆ ಸಾಗಿದೆವುಗದಗದಿಂದ ಹೆಚ್ಚು ದೂರವಿಲ್ಲ. ಇಲ್ಲೂ ಅಷ್ಟೆಎಲ್ಲಿ ಅಗೆದರೂ ಅಲ್ಲಿ ಒಂದಲ್ಲ ಒಂದು ಶಿಲ್ಪ, ಒಡೆದು ಹೋದ ವಿಗ್ರಹ ಯಾ ವಿನಾಶಗೊಂಡ ದೇವಸ್ಥಾನದ ಭಾಗ ಸಿಗುತ್ತಲೇ ಇದೆಯಂತೆಊರಲ್ಲಿ ಒಂದು ಸಂಗ್ರಹಾಲಯವಿದೆಹೀಗೆ ಸಿಕ್ಕಿರುವ ಶಿಲ್ಪ, ಶಿಲ್ಪಗಳ ಅವಶೇಷಗಳ ದೊಡ್ಡ ಸಂಗ್ರಹವೇ ಇದೆನಮಸ್ಕಾರ ನಾವು ಹೊರ ಊರಿಂದ ಬಂದಿದ್ದೇವೆನಮಗೆ ಸ್ವಲ್ಪ ಮಾಹಿತಿ ಬೇಕು, "ಮಂಗ್ಳೂರ್ ಕಡೀಂದ ಬಂದೀರೇನ್ರೀ? ಬರ್ರಿ ಬರ್ರಿ" ಸ್ವಾಗತ ದೊರೆಯಿತುಅಲ್ಲದೇ ಲಕ್ಕುಂಡಿಯ ಬಗ್ಗೆ ಮಾಹಿತಿ ಕೊಟ್ಟರುಒಂದು ದೇವಸ್ಥಾನವಿದೆ. ಒಂದು ಕೆರೆಯಿದೆ. ಕೆರೆಯ ಆವರಣದಲ್ಲಿ ಎರಡು ಬೋರೆಹಣ್ಣಿನ ಮರಗಳಿದ್ದಾವೆಬೋರೇಹಣ್ಣುಗಳೇನೂ ಸಿಕ್ಕಲಿಲ್ಲಆದರೆ ಒಂದೆರಡು ಕಾಯಿಗಳು ಸಿಕ್ಕವು. ಒಬ್ಬ ಬಹುಶ ಮರಗಳ ಕಾಂಟ್ರಾಕ್ಟ್ ವಹಿಸಿಕೊಂಡವನಿರಬೇಕು ಬಂದು ಹುಡುಕಿ ಹುಡುಕಿ ಎರಡು ಹಣ್ಣು ತೆಗೆದುಕೊಟ್ಟದೇವಾಲಯವು ಯಥಾಪ್ರಕಾರ ಅದ್ಭುತವಾಗಿತ್ತುಸಂಗ್ರಹಾಲಯದಲ್ಲಿ ಅನೇಕ ಮಾಸ್ಟರ್ ಪೀಸ್‌ಗಳಿದ್ದಾವೆ. ಪಟ ತೆಗೀಲಿಕ್ಕಿಲ್ರೀಆದೇಶ ಐತಿ" ಅಂದರು. "ಈಗ ನಿಮ್ಮ ಸಂಗ್ರಹಾಲಯ ಚಾಲೂ ಆಗಿಲ್ಲ ತಾನೆ? ಪಟ ತೆಗೆಯಬಹುದುನಿಮಗೆ ಏನೂ ಕಾನೂನಿನ ಸಮಸ್ಯೆ ಬರುವುದಿಲ್ಲ. ಮತ್ತು ಇದು ನಮ್ಮ ವೈಯಕ್ತಿಕ ಉಪಯೋಗಕ್ಕೆ. ಮಾರಾಟಕ್ಕಲ್ಲದಯಮಾಡಿ ಒಪ್ಪಿಗೆ ಕೊಡಿಎಂದು ಒಪ್ಪಿಸಿ ಕೆಲವು ಚಿತ್ರಗಳನ್ನು ತೆಗೆದೆವುಐಹೊಳೆ-ಪಟ್ಟದಕಲ್ಲು ಎಲಿಮೆಂಟರಿ ಸಾಲಿಲಕ್ಕುಂಡಿಹಂಪಿ ಇವು ಹೈಸ್ಕೂಲ್ ಮತ್ತು ಬೇಲೂರು ಹಳೇಬೀಡು ಇವು ಕೊಲೇಜು" ನಮ್ಮೊಡನೆ ಇದ್ದ ಅಲ್ಲಿಯ ಮಹನೀಯರು ಆ ಭಾಗದ ಶಿಲ್ಪ ವೈಭವದ ಬಗ್ಗೆ ತನ್ನ ವಿಮರ್ಶೆ ವ್ಯಕ್ತಪಡಿಸಿದರು.ಅವರ ಮಾತು ಸರಿ.

Innocence...

Some Very Beautiful Examples of Innocence, which will touch your heart.

1.   Author and lecturer, Leo Buscaglia, once talked about a contest he was asked to judge.
The purpose of the contest was to find the most caring child.
The winner was:

A four-year-old child, whose next door neighbour was an elderly gentleman, who had recently lost his wife.
Upon seeing the man cry, the little boy went into the old man's yard, climbed onto his lap, and just sat there.
When his mother asked him what he had said to the neighbour, the little boy just said: 'Nothing, I just
helped him cry.'
👍👍


2.  Students, of class one in a school, were discussing a student's family picture. One little boy in the picture had a hair colour, different from the other family members.
One of the other students suggested that he was adopted.

A little girl said: 'I know all about
adoption, bcoz I was adopted..'

'What does it mean to be adopted ?', asked another child.

'It means', said the girl, 'that you grew in your mommy's heart, instead of her tummy.!'
👍👍


3. Whenever I'm disappointed with my life, I stop and think about little Jamie Scott. Jamie was trying out for a part in the school play.
His mother told me that he'd set his heart on being in it, though she feared he would not be chosen..
 
On the day the parts were awarded, I went with her to collect him after school.
Jamie rushed up to her, eyes shining with pride and excitement..  'Guess what, Mom,' he shouted, and then said those words that will remain a lesson to me..: 'I've been chosen to clap and cheer.'
 👍👍


4.   An eye witness account from New York City , on a cold day in December.
A little boy, about 10-years-old, was standing before a shoe store on the road, barefooted, peering through the window, and shivering
with cold.

 A lady approached the young boy and said: 'My, but you're in such deep thought staring in that window!'
The boy replied:'I was asking God to give me a pair of shoes.'

The lady took him by the hand, went into the store, and asked the clerk to get half a dozen pairs of socks for the boy.
She then asked if he could give her a basin of water and a towel.
He quickly brought them to her.

She took the little fellow to the back
part of the store and, removing her gloves, knelt down, washed his little feet, and dried them with the towel.

By this time, the clerk had returned with the socks.
Placing a pair upon the boy's feet, she purchased him a pair of shoes..

She tied up the remaining pairs of socks and gave them to him. She patted him on the head and said, 'No doubt, you will be more comfortable now..'

As she turned to go, the astonished kid caught her by the hand, and looking up into her face, with tears
in his eyes, asked her:

'Are you God's wife.........?'
👍👍

Facebook story, Sandhya Nayak.

Wednesday, June 17, 2020

ಇವನು ನನ್ನ ತಮ್ಮ...


     ಇವನು ನನ್ನ ತಮ್ಮ. ನಾವು ಹೈಸ್ಕೂಲಿಗೆ ಹೋಗುತ್ತಿರುವಾಗ, ಬಹುಶಃ ಫಾರೆಸ್ಟಿನವರೋ ಯಾರೋ ಸಾಲಾಗಿ ನೆಟ್ಟವರಲ್ಲಿ ಇವನೂ ಒಬ್ಬ. ಆಗ ಎದುರು ಇರುವ ರಸ್ತೆ ಈಗಿನಷ್ಟು ಅಗಲವಿರಲಿಲ್ಲ, ವನರಾಜಿ ರಾರಾಜಿಸುತ್ತಿದ್ದ ಸುಭಿಕ್ಷ ಕಾಲ! ನಾವು ಮಧ್ಯಾಹ್ನ ಊಟ ಮುಗಿಸಿ ಸರಭರನೆ ಹೊರಟು ಸಿಗುವ 25 ನಿಮಿಷಗಳಲ್ಲಿ ಈ ತಂಪಾದ ನೇರಾದ ಉಡುಪಿ ರಸ್ತೆಯಲ್ಲಿ ಆಟ, ಓಟ, ಸೈಕಲ್ ಓಡಿಸುವುದು ಮುಂತಾದವುಗಳಲ್ಲಿ ಬಿಜಿ಼ಯಾಗುತ್ತಿದ್ದೆವು. ಆಗಲೇ ಒಂದು ದಿನ ನನಗೆ ಇವನ ಮೇಲೆ ಮೋಹ ಹುಟ್ಟಿತ್ತು. ಸಪೂರ ನೇರ ಗಿಡವಾಗಿದ್ದ. 'ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ' ಎಂದು ಆಗ ಯಾರೋ ದೋಸ್ತಿ ಗಾದೆಮಾತು ಹೇಳಿ ತನ್ನ ಜ್ಞಾನವನ್ನು ಪ್ರದರ್ಶಿಸಿದ. 'ಇಂವ ಮರವಾಗಿ ಬಗ್ಗಲಿಕ್ಕಲ್ಲ, ಬದಲಿಗೆ ನೇರವಾಗಿ ಉನ್ನತಕ್ಕೇರುತ್ತಾನೆ ನೋಡು' ಎಂದಿದ್ದೆ.
 
ಹೈಸ್ಕೂಲಿನಲ್ಲಿ ವಿಜ್ಞಾನಕ್ಕೆ ಹಂದೆಮಾಸ್ಟ್ರು - ಸಾಯನ್ಸ್ ಮಾಸ್ಟರು ಎಂದು ಹೈಸ್ಕೂಲಲ್ಲಿ ಹಾಗೂ ಊರಲ್ಲೂ ಫೇಮಸ್ಸು. ಗಿಡ ಮರಗಳಿಗೆ ವಯಸ್ಸಾಗುವುದನ್ನು ಕಂಡುಹಿಡಿಯಲು ಸುಲಭೋಪಾಯವಿದೆ, ಪ್ರತಿ ವರ್ಷಕ್ಕೆ ಒಂದರಂತೆ ಕಾಂಡದಲ್ಲಿ ವರ್ತುಲಗಳು - ರಿಂಗ್ - ಬೆಳೆಯುತ್ತವೆ. ಎಷ್ಟು ರಿಂಗುಗಳು ಇವೆಯೋ ಆ ಮರಕ್ಕೆ ಅಷ್ಟು ವರ್ಷ ಪ್ರಾಯ ಆಯಿತು ಅಂತ ಲೆಕ್ಕ.
 
 ಮರುದಿನ ನಮ್ಮ ಗೆಳೆಯನೊಬ್ಬ ಕ್ಲಾಸಿಗೆ ಬರುವಾಗ ಕತ್ತಿಯೊಂದನ್ನು ತಂದಿದ್ದ.

”ಕತ್ತಿ ಯಾಕೆ ಮಾರಾಯ!”

”ಮಾಸ್ಟ್ರು ಹೇಳೀರಲೆ ಗಡೆ, ಮರದ ಪ್ರಾಯ ಎಷ್ಟು ಅಂತ ತನಿಖೆ ಮಾಡುವ ಅಂತ ಕತ್ತಿ ಹಿಡ್ಕಬಂದಿದೆ. ನೀವು ಸುಮ್ನೆ ಬನಿ.” ಅಂತೆಯೇ ಕಾಡಿನಲ್ಲಿ ಒಂದು ಮರ ಸಿಲೆಕ್ಟ್ ಮಾಡಿ ಇನ್ನೇನು ಕತ್ತಿ ಬೀಸಬೇಕು, ಒಂದು ಡೌಟು ಬಂತು. 

”ಅಲ್ಲ, ಈಗ ಪ್ರಾಯ ತಿಳಿಯುವ ಗಡಿಬಿಡಿಯಲ್ಲಿ ಮರ ಕಡಿದರೆ ಅದು ಸಾಯುತ್ತದಲ್ಲ!! ನಾವದರ ಪ್ರಾಯ ಕಂಡುಹಿಡಿದು ಏನು ಸಾರ್ಥಕವಾಯಿತು?”

”ಹೌದಲ್ಲ! ಕಾಂಡದ ಬದಲು ಗೆಲ್ಲು ಕಡಿದರೆ ಹೇಗೆ?”

”ಕಾಂಡ ಮೊದಲೇ ಇರುತ್ತದೆ, ಗೆಲ್ಲುಗಳು ಬರೂದು ನಂತರದ ದಿನಗಳಲ್ಲಿ ತಾನೇ?” ಇನ್ನೊಬ್ಬನ ಸಂಶಯ. ಕತ್ತಿ ತಂದ ವಿಜ್ಞಾನಿಗೆ ಬೇಸರ ಸಿಟ್ಟು ಬಂದು ಕತ್ತಿಯನ್ನು ಬಿಸಾಡಿದ. 

”ಇರಲಿ ಇವನೇ, ವನಮಹೋಸ್ತವ ಮಾಡೂದು ನಾವೆ, ಈಗ ನಾವೇ ಗಿಡ ಕಡಿಯೂದೇಕೆ?” ಮತ್ತೊಬ್ಬ ಸಮಾಧಾನ ಮಾಡಿದ. ಒಂದು ಮರ ಆದಿನ ಉಳಿಯಿತು.
 
     ನಂತರದ ಯವ್ವನದ ದಿನಗಳಲ್ಲಿ ಹೆಬ್ರಿಯಲ್ಲೇ ನೌಕರಿಯಿದ್ದು, ಬೇಂಕು ಮುಗಿದ ನಂತರ ಸಂಜೆಯ ವಾಕಿಂಗಿಗೆ ಗೆಳೆಯ ರೊಡನೆ ಹೋಗುತ್ತಿದ್ದಾಗ ಇವನೂ ಕೊಂಚ ದಪ್ಪಗಾಗಿದ್ದು ಎತ್ತರಕ್ಕೇರಿದ್ದುದನ್ನು ಕಂಡು ನನ್ನೊಳಗೇ ಖುಷಿಪಡುತ್ತಿದ್ದೆ. ಎದುರಿನ ರಸ್ತೆಯು ಕಾಲಾಂತರದಲ್ಲಿ ಅವಶ್ಯಕತೆಗಳಿಗನುಸಾರ ಅಗಲವಾಗುತ್ತಿದ್ದುದು ಸಣ್ಣಗೇ ಕಿರಿಕಿರಿಯೆನಿಸುತ್ತಿತ್ತು. ರಸ್ತೆಯ ಅಗಲೀಕರಣವೆಂಬ ಡೆಮೊಕ್ಲೀಸನ ಖಡ್ಗವನ್ನು ಎಂಭತ್ತರ ದಶಕದಲ್ಲಿ ಮೊತ್ತಮೊದಲು ಇವನ ಮೇಲೆ ನೇತಾಡಿಸಿದರು.... ಈ ನಡುವೆ ನಿಂತ ನೀರಿನಂತಹ ಊರ ಜೀವನದ ಸಾಕ್ಷಿಯಾಗಿ ಇವನು ಬೆಳೆಯಲಾರಂಭಿಸಿದ....
 
1971ರಲ್ಲಿ ನನಗೆ ಸಿಂಡಿಕೇಟಿನಲ್ಲಿ ಜಾಬ್ ಆಯಿತು. ಕಲಿತದ್ದು ಮೆಕಾನಿಕಲ್ ನಲ್ಲಿ ಡಿಪ್ಲೋಮಾ, ಕೇ ಪಿ ಟಿ ಮಂಗಳೂರಲ್ಲಿ. ಆದರೆ ನಮ್ಮ ಅದೃಷ್ಟದ ಬಾಗಿಲು ಪೂರ್ತಿ ತೆರೆದಿರಲಿಲ್ಲ. ಕಲಿತ ವಿದ್ಯೆಯ ಲೈನಲ್ಲಿ ಯಾವುದೇ ನೌಕರಿಯಾಗಲಿಲ್ಲ. ಬಹಳ ಬೇಸರ ದು:ಖದಲ್ಲಿರುವ ಸಮಯದಲ್ಲಿ ನನ್ನ ಗೆಳೆಯ ವೆಂಕಟೇಶ ಕಾಮತನಿಗೆ ನೌಕರಿಯಾಯಿತು. ತನಗೆ ಜಾಬ್ ಸಿಕ್ಕಿದ ಸಂತಸದ ಜತೆಗೆ ನನ್ನ ನಿರುದ್ಯೋಗ ಪರ್ವ ಮುಂದುವರೆದ ಖತಿ ಎರಡನ್ನೂ ಹೊತ್ತುಕೊಂಡು ಆತ ಕೆ ಜಿ ಎಫ್ ನತ್ತ ಹೊರಟು ಬಿ ಇ ಎಮ್ ಎಲ್ ನಲ್ಲಿ ನೌಕರಿ ಸೇರಿಕೊಂಡ. ಸಂಜೆ ನಮ್ಮ ಗೆಳೆಯರ ಗುಂಪಿನೊಡನೆ ವಾಕಿಂಗ್ ಹೋಗುವಾಗ ಈ ನನ್ನ ತಮ್ಮ ಸಹ ನಮ್ಮೆಲ್ಲರ ಕುರಿತು ಸಹಾನುಭೂತಿ ತೋರುತ್ತಿದ್ದ. ತಾನೂ ನಿಂತಲ್ಲೇ ತನ್ನ ಬಳಗದವರೊಡನೆ ಗಾಳಿಯಲ್ಲಿ ತೂಗುತ್ತಿದ್ದ. 

ಹೌದನಾ ನಿನ್ನ ಕೆಲಸದ ವಿಚಾರ ಎಲ್ಲಿಯವರೆಗೆ ಬಂತು?’’ ನಮ್ಮ ಗಿಂಡಮಾಮ-ಪುರುಷೋತ್ತಮ ಮಲ್ಯರು- ವಿಚಾರಿಸಿದರು.

”ಸಧ್ಯಕ್ಕೆ ಎಂತದೂ ಆಗಿಲ್ಲ.”

”ಒಂದು ಕೆಲಸ ಮಾಡುವಾ. ಈಗ ಸಿಂಡಿಕೇಟಿನಲ್ಲಿ ಭಾರೀ ಡಿಮಾಂಡು ಉಂಟು. ಇವತ್ತು ಕಸ್ಟೋಡಿಯನ್ ಕೆ ಕೆ ಪೈ ಯವರೊಡನೆ ಮಾತಾಡಿ ಬರುವಾ. ನನಗೆ ಅವರ ಒಳ್ಳೇ ಗುರ್ತ ಉಂಟು. ದೇವರು ಕಣ್ಣು ಬಿಟ್ಟರೆ ಏನಾದರೂ ಆಗಬಹುದು.” 

1970ರ ಮೇ ತಿಂಗಳ ಕಡುಬೇಸಿಗೆಯ ಒಂದು ಮಧ್ಯರಾತ್ರಿ ಸುಮಾರು ಮೂರು ಘಂಟೆಯ ಹೊತ್ತಿನಲ್ಲಿ ಮನೆಯವರೆಲ್ಲರೂ ಗಾಢ ನಿದ್ದೆಯಲ್ಲಿರುವಾಗ ನಮ್ಮ ಮುಳಿಮಾಡಿನ ಮನೆಯು ಭಗ್ಗನೆ ಬೆಂಕಿಗಾಹುತಿಯಾಯಿತು. ಬ್ರಹ್ಮಾವರದಿಂದ ಬರುತ್ತಿದ್ದ ಒಬ್ಬ ಲಾರಿ ಡ್ರೈವರನಿಗೆ ದೂರದಿಂದ ಈ ಬೆಂಕಿಯ ರೌದ್ರಾವತಾರ ಕಂಡು ಜೀವದ ಹಂಗು ತೊರೆದು ಲಾರಿ ಓಡಿಸಿ ಬಂದು ಉರಿಯುತ್ತಿದ್ದ ಮನೆಯಲ್ಲಿ ಮೈಮೇಲೆ ಜ್ಞಾನವಿಲ್ಲದಂತೆ ಮಲಗಿದ್ದ ನಮ್ಮನ್ನೆಲ್ಲ ಎಬ್ಬಿಸಿ ಬದುಕಿಸಿದ. ಪುಣ್ಯಾತ್ಮನವನು. ’ದೇವರು ಆಪತ್ತಿನಲ್ಲಿರುವವರ ಕೈ ಹಿಡಿದು ಪೊರೆಯುತ್ತಾನೆ ನೋಡು. ಯಾವ ಯಾವ ರೂಪಗಳಲ್ಲಿ ಬಂದು ಒದಗುತ್ತಾನೆ ನೋಡು!’ ಎಂದು ನಮ್ಮಮ್ಮ ಆಗಾಗ ನೆನಪಿಸಿಕೊಳ್ಳುತ್ತಿದ್ದರು.
 
ಇದೇ ಸಮಯದ ಒಂದು ದಿನ -ಜುಲೈ ತಿಂಗಳಿರಬೇಕು- ಗಿಂಡಮಾಮನವರು ನನ್ನನ್ನು ಕರಕೊಂಡು ಉಡುಪಿಗೆ ಬಂದರು. ”ನೋಡು ಕೆ ಕೆ ಪೈ ಯವರ ಮನೆಯಲ್ಲಿ ಮಾತಾಡಬೇಕು. ಆಫೀಸಿನಲ್ಲಿ ನಮ್ಮ ಕಷ್ಟ ಸುಖ ವಿಚಾರಿಸಲು ಅವರಿಗೆ ವ್ಯವಧಾನವಿರುವುದಿಲ್ಲ. 

     1975ರಲ್ಲಿ ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿ ಹೇರಿದರು, ಹೆಚ್ಚಿನ ಊರವರು ಇದನ್ನು ವಿರೋಧಿಸಿ ಕ್ಷೋಭೆಗೆ ಒಳಗಾದರು, 1977ರಲ್ಲಿ ಅದೇ ಇಂದಿರಾಗಾಂಧಿಯವರು ಸ್ವತಃ ಸೋತರು. ಎಲ್ಲರಿಗೂ ಸಂತಸ, ಮೂರು ವರುಷಗಳ ವರೆಗೆ ಜನತಾಪಕ್ಷದವರ ನಾಟಕಮಂಡಳಿಯಿತ್ತು, ಪುನಾ ಇಂದಿರಾಗಾಂಧಿಯವರ ಅಬ್ಬರ ಶುರುವಾಯಿತು. ಎಲ್ಲ ಘಟನಾವಳಿಗಳಿಗೆ ಸಾಕ್ಷಿಯಾಗಿ ಇವನು ಬೆಳೆಯುತ್ತಲಿದ್ದ.
 
     ನನ್ನ ನೌಕರಿಯ ದೌಡು ಎಂಭತ್ತನಾಲಕ್ಕರಿಂದ ದೆಹಲಿಗೆ ವರ್ಗವಾದಂತೆ ಆರಂಭವಾಗಿ ದೇಶದ ರಾಜ್ಯದ ಅನೇಕ ನಗರ ಊರುಗಳಲ್ಲಿ ಸುರುವಾದಂತೆ ಈತನ ಸಂಗ ವಿರಳವಾಯಿತು. ರಜಾಕಾಲಗಳಲ್ಲಿ ಮಕ್ಕಳನ್ನು ಕಟ್ಟಿಕೊಂಡು ಬಂದಾಗ ಊರಲ್ಲಿ ಇವನನ್ನು ಭೆಟ್ಟಿಯಾಗಿ ಖುಷಿಪಡುತ್ತಿದ್ದೆ. 'ಏನು ನಾಯಕರೇ, ರಜದಲ್ಲಿ ಬಂದದ್ದಾ? ಅಂದ ಹಾಗೆ ಈಗ ನೀವು ದಿಲ್ಲಿಯಲ್ಲಿ ಇರೂದಲ್ವಾ? ಮೊನ್ನೆ ನಮ್ಮ ಓಕುಡ ಮಾಸ್ಟ್ರು ಹೇಳುತ್ತಿದ್ರು. ನಿಮ್ಮಲ್ಲಿ ಅವರಿಗೆ ಭಾರೀ ಗಮ್ಮತ್ತಾಯಿತಂತೆ. ಇಲ್ಲಿ ರಸ್ತೆ ಬದಿಯಲ್ಲಿ ಒಬ್ಬರೇ ಏನು ಮಾಡ್ತಾ ಇದ್ದೀರಿ?' ಪರಿಚಿತರೊಬ್ಬರು ಒಮ್ಮೆ ಸಂಜೆ ವಿಚಾರಿಸಿದರು. 'ನನ್ನ ತಮ್ಮ , ಗೆಳೆಯ ಹಾಗೂ ಆತ್ಮೀಯನೊಡನೆ ಸ್ವಗತದಲ್ಲಿದ್ದೇನೆ, ಇವರಿಗೆ ಹೇಗೆ ಹೇಳಲೀ' ಎಂಬ ಗೊಂದಲದಲ್ಲಿ ನಾನು ಬಿದ್ದೆ. ಪುಣ್ಯಕ್ಕೆ ಅವರು ಹೆಚ್ಚು ಹೊತ್ತು ನಿಲ್ಲಲಿಲ್ಲ.....
 
     ಊರು ಬೆಳೆಯಿತು. ಗ್ರಾಮವಾಗಿದ್ದ ಹೆಬ್ರಿಯು ಪೇಟೆಯಾಗಿ, ಪಟ್ಟಣವಾಗಿ ಈಗ ತಾಲೋಕು ಕೇಂದ್ರವಾಗಿದೆ. ಹೈಸ್ಕೂಲು ಕಲಿಯುತ್ತಿದ್ದ ಕೇಶವ, ಸಿಂಡಿಕೇಟು ಬೇಂಕಿನ ಸದಸ್ಯನಾಗಿ, ಸಂಸಾರಿಗನಾಗಿ ಏಗುತ್ತ ಇಂದು ತಕ್ಕಮಟ್ಟಿನ ಗೌರವಯುತನಾಗಿರುತ್ತೇನೆ. ಈ ನನ್ನ ಸಹೋದರನೂ ಹೆಬ್ರಿ ಊರಿನ ಎಲ್ಲಾ ಪ್ರಗತಿ, ಉನ್ನತಿ ಅವನತಿಗಳಿಗೂ, ಊರಜನರ ಕಷ್ಟ ಸುಖಗಳಿಗೂ ಸಾಕ್ಷಿಯಾಗಿ ತಾನೂ ಸಹ ಸಾಕಷ್ಟು ಬೆಳೆದಿದ್ದಾನೆ. ಸಾಕಷ್ಟು ದಪ್ಪವೂ ಆಗಿದ್ದಾನೆ. ಜ್ಞಾನಿಯೂ ಆಗಿದ್ದಾನೆ. ಮನುಷ್ಯರ ಬುದ್ಧಿ/ದುರ್ಬುದ್ಧಿ , ಪ್ರೀತಿ/ದ್ವೇಷ , ಆಶೆ/ನಿರಾಶೆ ಮೋಹ, ಮದ, ಮತ್ಸರ, ಕಾಮ ವೈರಾಗ್ಯಗಳಿಗೆ ತತ್ವಜ್ಞಾನಿಯ ತೆರದಲ್ಲಿ ಸಾಕ್ಷೀಭೂತನಾಗಿದ್ದಾನೆ! ಇವನು ನನ್ನ ತಮ್ಮನೆಂದು ಕಂಡು ಪ್ರೀತಿಸಿದ ನಾನು ನಿಜವಾಗಿ ನೋಡಿದರೆ ಇವನೆದುರು ತೀರಾ ಕುಬ್ಜ. ರಾಗ ದ್ವೇಷ ಪ್ರೀತಿ ಕಾಮ ಹಮ್ಮು ಬಿಮ್ಮುಗಳಿಂದ ಆವೃತನಾದ ನಾನು ಅಣ್ಣ ಹೇಗಾದೇನು!! ಕೊಂಚ ಆತ್ಮ ವಿಶ್ಲೇಷಣೆಗೆ ಒಳಗಾದೆ....
 
     ಇವನನ್ನು ಈಗ ಕಂಡಾಗ ಅನೇಕ ಭಾವಗಳು ಹುಟ್ಟುತ್ತವೆ. ಆದರೆ ದೇಶವು ಪ್ರಗತಿಪಥದಲ್ಲಿ ದೌಡಾಯಿಸುತ್ತಿದೆ. ದೇಶಕ್ಕೆ ಒಬ್ಬ ಉನ್ನತ ವ್ಯಕ್ತಿತ್ವದ ಸಮರ್ಥ ನೇತಾರನ ನೇತೃತ್ವ ದೊರಕಿದೆ. ಪ್ರಗತಿಯ ಒಂದು ಭಾಗ ವಿಶಾಲವಾದ ಅಗಲವಾದ ರಸ್ತೆಗಳ ಜಾಲ. ಎಂಭತ್ತರ ದಶಕದಲ್ಲಿ ತೂಗಹಾಕಿದ ಡೆಮೊಕ್ಲೀಸನ ಖಡ್ಗವು ಈಗಲೂ ಇವನ ಮೇಲೆ ಇನ್ನೂ ಛಕಛಕ ಎಂದು ಝಳಪಿಸುತ್ತ ಇದೆ...!!!!