Wednesday, September 3, 2025

ತಾಜಾ ಬೆಣ್ಣಿ...

ಹುಬ್ಬಳ್ಳಿ....

ಒಮ್ಮೆ ಮಧ್ಯಾಹ್ನ ಮೂರೂವರೆಗೆ ನನ್ನ ಕುರ್ಚಿಯಿಂದ ಮೆಲ್ಲನೇ ಎದ್ದು ನಿಂತೆ.....

'ನಾಯಕರು ಬಂದ್ರು, ನಾಯಕರು ಬಂದ್ರು' ಎಂದು ಕಿಸಿಪಿಸೀ ಹರಟುತ್ತಿದ್ದ ಲಲನಾಮಣಿಗಳು ತಮ್ಮ ತಮ್ಮ ಸೀಟುಗಳಲ್ಲಿ ನೆಟ್ಟಗೆ ಕೂತು ಸುಖಾಸುಮ್ಮನೆ ಲೆಜ್ಜರುಗಳ ಫೋಲಿಯೋ ಮಗುಚತೊಡಗಿದರು. ಒಬ್ಬಳ ಹಿಂದೆ ನಿಂತೆ, 'ಏನು ಸರ್!' ಎಂಬಂತೆ ಮುಖಭಾವ ಮೂಡಿತು...

'ಐನೂರು ಗ್ರಾಮು ತಾಜಾ ಬೆಣ್ಣೀ  ತಂದೀನೀ, ಯಾರ ಬೆನ್ನಿಗೆ ಹಚ್ಚೂಣು ಅಂದ್ಕೋತ ಹಂಗೇ ಬಂದೆ' .....

'ನೀವು ಬೆಣ್ಣೀ ಹಚ್ಚೂಣು ಬೇಡಾ, ನಾಟಕಾ ಆಡೂದೂ ಬೇಡಾ, ಏನ್ ಕೆಲಸಾ ಐತೀ ಹೇಳ್ರಲಾ...'

'ಬೆಣ್ಣೀ ತಾಜಾ ಮತ್ತ ಚಲೋ ಐತೀ, ಹಚ್ಚಿದ್ರ ಜಾರವಲ್ದು, ನೀವೇ ಸೂಕ್ತ ಅದೀರೀ,......'

'ಇಲ್ಲ್ ಕೊಡ್ರೀ ಸರ, ಅದೇನ್ ಮಹಾ ಕೆಲಸಾ!! ಏನ್ ನಾಟ್ಕಾ ಮಾಡಾಕ ಹತ್ತೀರಿ ಅಂತೀನಿ. ಸುಮ್ಮಕ ಇಂತಾ ಕೆಲಸ ಅದ ಅಂತ ಹೇಳಾಕ ಬದಲು ಬೆಣ್ಣೀ ಅಂತೆ ಬೆಣ್ಣೀ!!'  ನಗುತ್ತಾ ಕೊಟ್ಟ ಕೆಲಸ ಮಾಡಿದಳಾಕೆ. 

😄😄😄😄😄


No comments:

Post a Comment