ಭಾಜಪದ ಜನಪ್ರತಿನಿಧಿಗಳು ಹಿಂದಿನಿಂದಲೂ ತಮ್ಮದು 'ಪಾರ್ಟಿ ವಿದ್ ಎ ಡಿಫರೆನ್ಸ್', ಶಿಸ್ತುಬದ್ಧ ಪಕ್ಷ, ತಮ್ಮದೆಂಬ ವೈಯಕ್ತಿಕ ಹಿತಾಸಕ್ತಿ ಯಾವುದೂ ಇಲ್ಲ, ಅಧಿಕಾರದ ಆಸೆಯಿಲ್ಲ, ರಾಷ್ಟ್ರಹಿತವೇ ಸರ್ವಪರಿ ಹಾಗೆ ಹೀಗೆ ಎಂದು ತಮ್ಮ ಬಗ್ಗೆ ಹೆಚ್ಚುಗಾರಿಕೆ ಇತರೇ ಪಕ್ಷಗಳ ಅವಹೇಳನ ಮಾಡಿಕೊಂಡು ಬರುತ್ತಿದ್ದರು..... ಎಲ್ಲಿಯ ತನಕ!!? ತಮಗೆ ಪರ್ಪೆಚ್ಯುವಲ್ ಶಾಸಕಗಿರಿ ಇರುವ ತನಕ ಮಾತ್ರ.!
ಇತರ ಪಕ್ಷದವರನ್ನು ಹಂಗಿಸುವ ಮೊದಲು ತಮ್ಮ ಮಾನಸಿಕತೆ ಹೇಗಿದೆ ಎಂಬುದನ್ನು ಅವಲೋಕಿಸಬೇಕು. ಪ್ರತೀ ಚುನಾವಣೆಯ ಸಮಯದಲ್ಲಿ ಹೆಚ್ಚಿನವರ ಬಣ್ಣ ಬಯಲಾಗುತ್ತದೆ. ತನಗೆ ಟಿಕೆಟ್ ಸಿಕ್ಕರೆ ಮಾತ್ರ ಪಕ್ಷನಿಷ್ಠೆ, ಟಿಕೆಟ್ ನಿರಾಕರಣೆಯಾದ ಮರುಕ್ಷಣವೇ ರಾಜಕೀಯ ನಿವೃತ್ತಿ, ಬೇರೆ ಪಕ್ಷಕ್ಕೆ ಮತಾಂತರ ಅಥವಾ ಬಂಡಾಯ..!! ಇದು ಯಾವ ರೀತಿಯ ಮಾನಸಿಕತೆ! ಇಂತಹವರನ್ನು ನಾವು ಭಾಜಪದ ಭಕ್ತರು, ಸಾಮಾನ್ಯ ಜನರು ತಲೆ ಮೇಲೆ ಹೊತ್ತುಕೊಂಡು ತಿರುಗುತ್ತದ್ದೆವಲ್ಲ!! ಪರಸ್ಪರ ಚರ್ಚೆ ಚೌಕಾಸಿ ನಡೆಸುತ್ತಿದ್ದೆವಲ್ಲ.! ಇದ್ಯಾವ ನಮುನೆ 'ಪಾರ್ಟಿ ವಿದ್ ಎ ಡಿಫರೆನ್ಸ್!!'
ಎಟಿಟ್ಯೂಡ್ ನಲ್ಲೂ ವ್ಯತ್ಯಾಸಗಳಿವೆ. ಒಬ್ಬರು ಆರು ಬಾರಿ ಶಾಸಕರಾಗಿದ್ದರು. ಮಂತ್ರಿಯೂ ಆಗಿದ್ದರು. ಟಿಕೆಟ್ ಸಿಗಲಿಲ್ಲ ಎಂದ ಕೂಡಲೇ ರಾಜಕೀಯ ನಿವೃತ್ತಿ!
ಇನ್ನೊಬ್ಬರಿಗೆ ಟಿಕೆಟ್ ಸಿಗಲಿಲ್ಲ. ಅವರೇನೂ ರಗಳೆ ತೆಗೆಯಲಿಲ್ಲ, ಬದಲಿಗೆ ಟಿಕೆಟ್ ಸಿಕ್ಕಿದ ಅಭ್ಯರ್ಥಿಗೆ ಪೂರ್ಣ ಬೆಂಬಲ ಸಹಕಾರ ಘೋಷಿಸಿದ್ದಾರೆ. ಇವರನ್ನು ಮೆಚ್ಬಬೇಕು...
ಟಿಕೆಟ್ ವಂಚಿತರಲ್ಲಿ ಹೆಚ್ಚಿನವರು ಪಕ್ಷದ ವರಿಷ್ಠರ ಮೇಲೆ ಆರೋಪ ಮಾಡಿದ್ದಾರೆ ವಿನಃ ಪಕ್ಷಕ್ಕೆ ಪ್ರಾಮಾಣಿಕನಾಗಿರುತ್ತೇನೆಂಬ ಹೇಳಿಕೆ ಕೊಡಲಿಲ್ಲ, ತನ್ನ ಮುಂದಿನ ನಡೆ ಏನೆಂದು ಬೆಂಬಲಿಗರೊಡನೆ ಚರ್ಚಿಸುತ್ತೇನೆ ಎಂಬ ಹೇಳಿಕೆಗಳೇ ಜಾಸ್ತಿ..!
No comments:
Post a Comment