ಅಮೆರಿಕದ ನ್ಯೂಯಾರ್ಕ್ ನಗರದ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡಗಳು ಉಗ್ರವಾದಿಗಳ ಭಯೋತ್ಪಾದನೆಗೆ ತುತ್ತಾಗಿ ನೆಲಸಮವಾದವು. ಸುಮಾರು 3500 - 4000 ಕ್ಕೂ ಅಧಿಕ ಸಂಖ್ಯೆಯ ಜನರು ಈ ದಾಳಿಗೆ ತುತ್ತಾದರು.
ನನಗೆ ತಿಳಿದಂತೆ ಮರುದಿನ ಅಧ್ಯಕ್ಷ ಬುಷ್ ಅವರು ಆ ಸ್ಥಳಕ್ಕೆ ಹೋಗಿ ಅಲ್ಲಿ ಎಡೆಬಿಡದೆ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗದವರೊಡನೆ ಮಾತನಾಡಿ ಅವರ ಮನೋಬಲವನ್ನು ಹೆಚ್ಚಿಸುವ ಕಾರ್ಯ ಮಾಡಿದರು. ಯಾರ ಬಗ್ಗೆಯೂ ಅವರು ಟೀಕೆ ಟಿಪ್ಪಣಿ ಮಾಡಲಿಲ್ಲ....
ಇಂದು ಬೆಳಗ್ಗೆ ಮುಂಬಯಿ ಶಹರದಲ್ಲಿ ಅಗ್ನಿ ದುರಂತ ನಡೆಯಿತು. 60 ಮಹಡಿಯ ಕಟ್ಟಡವೊಂದರ 19ನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡು ಒಬ್ಬ ದುರ್ಬಾಗ್ಯ ವ್ಯಕ್ತಿಯ ಮರಣವೂ ಸಂಭವಿಸಿತು. ಇಪ್ಪತ್ತನಾಲ್ಕು ಅಗ್ನಿಶಾಮಕ ದಳಗಳು ರಕ್ಷಣೆಯಲ್ಲಿ ನಿರತರಾಗಿದ್ದಾರೆ. ಮುಂಬಯಿಯ ಮಾಧ್ಯಮ, ಜನಪ್ರತಿನಿಧಿಗಳ ಮತ್ತು ಸಂಬಂಧ ಪಟ್ಟವರ ಪ್ರತಿಕ್ರಿಯೆ ಏನು? ಮಾಧ್ಯಮದವರೊಬ್ಬರು ಅಲ್ಲಿನ ವಿಧಾಯಕರ ತಪ್ಪು ಹುಡುಕುವುದರಲ್ಲೇ ಬಹು ಆಸಕ್ತರಾಗಿದ್ದರು, ಏಕೆ? ಅದರಲ್ಲಿ ಟೀ ಆರ್ ಪೀ ಜಾಸ್ತಿಯಿದೆ.
ಮುಂಬಯಿಯಲ್ಲಿ ಸಾವಿರಗಟ್ಟಳೆ ಬಹುಮಹಡಿ ಕಟ್ಟಡಗಳಿವೆ. ಎಲ್ಲದರ ಲೆಕ್ಕಾಚಾರವಿಡೂದು ನನ್ನ ಕೆಲಸವಲ್ಲ ಎಂದು ವಿಧಾಯಕರ ಸಮಜಾಯಿಷಿ, ಬಿಲ್ಡಿಂಗಿನ ಡೆವಲಪರ್ ಯಾವುದೋ ಕಾರಣ ನೀಡಿ ನುಣುಚಿಕೊಂಡರು. ಕಟ್ಟಡದ ನಿವಾಸಿಯೊಬ್ಬರು ಇದ್ದಬಿದ್ದವರನ್ನೆಲ್ಲ ದೂರುತ್ತಿದ್ದರು...
ಬೆಂಕಿ ಬಿದ್ದು ಒಂದೆರಡು ಘಂಟೆಗಳ ವರೆಗೆ ರಕ್ಷಣಾ ಕೆಲಸದ ಕುರಿತು ಯಾವುದೇ ವಿವರವಿಲ್ಲ, ಅಲ್ಲಿ ದುಡಿಯುವವರ ಮನೋಬಲ ಹೆಚ್ಚಿಸುವ ಒಂದೇ ಒಂದು ಹೇಳಿಕೆಯಿಲ್ಲ. ಬದಲಿಗೆ ಯಾರು ಯಾರು ತಪ್ಪಿತಸ್ಥರು, ಕರ್ತವ್ಯ ನಿರ್ವಹಣೆಯಲ್ಲಿ ಚ್ಯುತಿ ಹೊಂದಿದ್ದಾರೆ ಎಂಬ ಖಾನೇಷುಮಾರಿಯೇ ಮುಖ್ಯವಾಯಿತು..
ಬಹಳ ಬೇಸರವಾಗುತ್ತದೆ...
Responses:-
Ishwar Bhat:-It shows that be it joy or sorrow we the so called press tries to dig for some fault as some opposition parties are reacting to the P M s speech today.
Keshav Nayak:- You are quite right Sir...
Narasimha Moorthy T: Useless people...they lost humanity.
Keshav Nayak:- ಸರ್, ಮೊದಲು ರಕ್ಷಣಾ ಕಾರ್ಯಕ್ರಮಗಳು ಅಬಾಧಿತವಾಗಿ ಜರುಗಬೇಕು, ಕೆಮರಾ ಹಿಡಕೊಂಡು ಇಡೀ ಪರಿಸರದಲ್ಲಿ ತಿರುಗುತ್ತಾ ಅವರಿವರ ತಪ್ಪು ಒಪ್ಪುಗಳನ್ನು ವಿಮರ್ಶಿಸುತ್ತಾ ಇರುವುದು ಸರಿಯಲ್ಲ. ಒಂದು ದುರ್ಘಟನೆ ನಡೆದರೆ, ನನಗೆ ಗೊತ್ತಿರುವಂತೆ ಅದರ ನ್ಯಾಯಿಕ ತನಿಖೆ ಆಗಲೇಬೇಕು. ಅದು ಒಂದು ಮೆಂಡೇಟರಿ ಡ್ಯೂಟಿ. ಅದು ಆಗೇ ಆಗುತ್ತದೆ. ಆದರೆ ಪ್ರತಿಯೊಂದರಲ್ಲೂ ಟೀ ಆರ್ ಪೀ ಹುಡುಕುವುದು ಯುಕ್ತವಲ್ಲ.
Narasimha Moorthy T:- yes...these TRP in every news has taken the media to this nadir.
No comments:
Post a Comment