Tuesday, April 12, 2011

Shilpa Soundaryada bennu hathhi...

"ಶಿಲ್ಪಕಲೆಯ ಬಗ್ಗೆ ಹೇಳಬೇಕೆಂದರೆ ನಮ್ಮ ಲಕ್ಕುಂಡಿ ಎಲಿಮೆಂಟರಿ ಸಾಲಿ,ಹಂಪಿ ಹೈಸ್ಕೂಲು ಮತ್ತ ಬೇಲೂರು ಯುನಿವರ್ಸಿಟಿ  ನೋಡ್ರಿ  ಸರ"  ಲಕ್ಕುಂಡಿಯ ಮ್ಯುಸಿಯಮ್ಮಿನ ಅಧಿಕಾರಿಯೊಬ್ಬರು ತುಂಬಾ ಅಭಿಮಾನದಿಂದ ಹೇಳಿದರು. ಅವರ ಅಭಿಮಾನ ಲಕ್ಕುಂಡಿಯ ವೈಭವದ ಮೇಲೋ, ಕರ್ನಾಟಕದ ಒಟ್ಟು ಶಿಲ್ಪಕಲೆಯ ಮೇಲೋ ತಿಳಿಯಲಿಲ್ಲ.ಆದರೂ
ಅವರ ವಿಚಾರಗಳನ್ನು  ಮೆಚ್ಚದಿರಲು ಆಗಲಿಲ್ಲ.ಇನ್ನು ಕಲೆಯ ಯುನಿವರ್ಸಿಟಿಯನ್ನು ಒಮ್ಮೆ  ನೋಡಲೇ ಬೇಕೆಂಬ ಆಶೆ ಹುಟ್ಟಿತು. ಆ ಪ್ರಕಾರವಾಗಿ ಮೊನ್ನೆ ಆದಿತ್ಯವಾರ ನಾವು ಅಂದರೆ ನಾಗೇಶನ ಗ್ರೂಪು ಅವನ ಕಾರಿನಲ್ಲಿ ನಮ್ಮ ಫ್ಯಾಮಿಲಿ ನಮ್ಮ ಕಾರಿನಲ್ಲಿ-ಪಾವನ ಸಹಿತ-ಬೆಳಗ್ಗೆ ಬೇಗ ಹೊರಟೆವು.ಹೋಗುವ ದಾರಿ ಉತ್ತಮ ಸ್ಥಿತಿಯಲ್ಲಿತ್ತು.ಹಾಗಾಗಿ ತುಂಬಾ ಅನುಕೂಲವಾಯಿತು.ಭಾಗ್ಯ ದೀಪಕ್ ಸಹ ಬಂದರು.ಬೇಲೂರನ್ನು ಸುಮಾರು ಹತ್ತುವರೆಗೆ ತಲುಪಿದೆವು. ಸುಮಾರು ಇಪ್ಪತ್ತು ವರುಷಗಳ ಹಿಂದೆ ನೋಡಿದ್ದ ನೆನಪು.ಆಗ ಇಷ್ಟು ವ್ಯವಸ್ಥೆಗಳಿರಲಿಲ್ಲ.ಶಿಲ್ಪಕಲೆಯ ಯುನಿವರ್ಸಿಟಿ ಅಂದರೆ ಅತಿಶಯೋಕ್ತಿ ಏನಲ್ಲ.ಅದಕ್ಕಿಂತ ಹೆಚ್ಚೇ ಎಂದು ಹೇಳಬಹುದು.ಆದರೆ ನನ್ನ ಸಾಹಿತ್ಯ ಸಾಮರ್ಥ್ಯ ತುಂಬಾ ಲಿಮಿಟೆಡ್ ಆಗಿ ಭಾವನೆಗಳನ್ನು ಬರೆಯಲು ವ್ಯಕ್ತಪಡಿಸಲು ತೊಂದರೆಯಾಗುತ್ತಿದೆ.ಬೇಲೂರು ಒಂದು ದೇವಸ್ಥಾನ ನಿಜವಾಗಿಯೂ ಶಿಲ್ಪಕಲೆಯ ಸಾಮ್ರಾಜ್ಯ ಎಂದೇ ಹೇಳಬೇಕು.ಕಲೆ,ಸಾಹಿತ್ಯ,ಸಂಗೀತ ಇವುಗಳ ಬಗ್ಗೆ ಬರೆಯುವಾಗ ಸಾಮಾನ್ಯವಾಗಿ ನಾವು ಮೈಕೆಲೆಂಜಲೋ,ಷೇಕ್ಸಪಿಯರ್,wordswoth ಮೊಜಾರ್ಟ ಹೀಗೆ ವ್ಯಾಖ್ಯಾನಿಸುತ್ತೇವೆ ವಿನಹ ನಮ್ಮ ಕವಿ ಸಾಹಿತ್ಯಕಾರರ ಬಗ್ಗೆ ಬರೆಯಲು ಹೋಗುವುದಿಲ್ಲ.ಇದೊಂದು ಬಗೆಯ ಗುಲಮಗಿರಿಯೆಂದೆ ಎಣಿಸಬಹುದು ಮೈಕೆಲೆಂಜಲೋ  ಕೃತಿಯನ್ನು ನಾನು ನೋಡಿಲ್ಲ,ಆದರೂ ಬೇಲೂರಿನ ಹಳೆಬೀಡಿನ ದೇವಸ್ಥಾನಗಳನ್ನು ನೋಡಿದ ಬಳಿಕ ನಾವು ಪಾಲುಂಡು ಮೇಲುಂಬರೇ ಎಂಬಂತೆ ಬೇರೆ ಯಾವುದೇ ಶಿಲ್ಪ ಕೃತಿಗಳನ್ನು ನೋಡುವ ಅಗತ್ಯವಿಲ್ಲ.ಒಂದು ಮಂದಿರದ ಒಳಗೆ ಹೊರಗೆ ಒಂದು ಇಂಚು ಜಾಗ ಬಾಕಿ ಇಡದೇ ಕೆತ್ತನೆಗಳನ್ನು ಕೆತ್ತಿ ರಚಿಸಿದ್ದಾರೆ.ಈ ಮಂದಿರಗಳನ್ನು ಕಟ್ಟಲು ಸುಮಾರು ನೂರು ವರುಷ ಸಮಯ ತಗಲಿರಬಹುದು ಎಂದು ಅಲ್ಲಿದ್ದ ಒಬ್ಬರ ಅಂಬೋಣ.ಇರಬಹುದು.ನನಗೆ ನೂರಲ್ಲ ಸಾವಿರ ವರ್ಷ ಆಯಸ್ಸು ಕೊಟ್ಟರೂ ಅಲ್ಲಿನ ಭವ್ಯತೆಯ ಶೇಕಡಾ ಒಂದರಷ್ಟನ್ನು ಕೆತ್ತಲು,ಮಾಡಲು ಆಗಲಾರದು.ಶಿಲ್ಪಿಯು ಅಷ್ಟರ ಮಟ್ಟಿಗೆ ತಪಸ್ಸು ಮಾಡಿರಬೇಕು.ಆಗ ಮಾತ್ರ ಇಂತಹ ಅದ್ಭುತಗಳನ್ನು ಸೃಷ್ಟಿ ಮಾಡಲು ಸಾಧ್ಯ.ಅನ್ಯಥಾ ಆಗಲಾರದು.ಶ್ರೀ ಎಸ್ ಎಲ್ ಭೈರಪ್ಪನವರ ಸಾರ್ಥ ಕಾದಂಬರಿಯಲ್ಲಿ ಈ ಬಗ್ಗೆ ಉಲ್ಲೇಖ ಬರುತ್ತದೆ.ಕಾರಿಗರರು ಧ್ಯಾನ,ತಪಸ್ಸು,ಬ್ರಹ್ಮಚರ್ಯ ಇವುಗಳನ್ನು ಆಚರಿಸಿದರೆ ಮಾತ್ರ ಅವರ ಕೃತಿಗಳಲ್ಲಿ ಪೂರ್ಣತೆ,ಸೌಂದರ್ಯ,ಜೀವಂತಿಕೆ,ಮುಂತಾದುವುಗಳನ್ನು ಮೂಡಿಸಬಹುದು.ಈ ವಿಚಾರವನ್ನು ಅವರು ಕಾದಂಬರಿಯಲ್ಲಿ ವಿಸ್ತಾರವಾಗಿ ಚಿತ್ರಿಸಿದ್ದಾರೆ.ಅದು ಬೇರೆ ಯಾವುದೋ ಸನ್ನಿವೇಶದಲ್ಲಿ ಅವರು ಬರೆದಿದ್ದರೂ ಬೇಲೂರಿನ ಹಳೆಬೀಡಿನ ದರ್ಶನ ಮಾಡಿದಾಗ ಆ ಮಾತುಗಳು ಸರಿಯೆಂದು ಭಾಸವಾಗುತ್ತದೆ.ದೇವಸ್ಥಾನಗಳ ಶಿಲ್ಪಗಳ ವರ್ಣನೆ ಮಾಡಿದಷ್ಟು ಸಾಲದು.ಅದನ್ನು ಇನ್ನೊಮ್ಮೆ ಎಂದಾದರೂ ಖಯಾಲಿ ಬಂದಾಗ ದಾಖಲಿಸುತ್ತೇನೆ. 

Thursday, April 7, 2011

bhrashtacharada virudha horata

ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಶ್ರಿಯುತರಾದ ಅಣ್ಣಾ ಹಜಾರೆಯವರು ಆಮರಣಾಂತ ಉಪವಾಸ ಹೂಡಿದ್ದಾರೆ ಎಂಬ ಸುದ್ದಿ ಟೀ ವಿ ಹಾಗೂ ತಮ್ಮ ಪತ್ರಿಕೆಯಲ್ಲಿ ಓದಿದೆ.ತತ್ಸಂಬಂಧ ನ್ಯಾಯಾಧೀಶರಾದ ಸಂತೋಷ ಹೆಗ್ಡೆಯವರು ಕೊಟ್ಟ ಅಭಿಪ್ರಾಯವನ್ನೂ ಓದಿದ್ದೇನೆ.ಅವರ ಮಾತುಗಳನ್ನು ನಾನು ಅನುಮೋದಿಸುತ್ತೇನೆ.ಸಮಾಜದಲ್ಲಿ ಭ್ರಷ್ಟಾಚಾರ ಇರಬಾರದು ನಿಜ.ಆದರೆ ತಲತಲಾಂತರದಿಂದ ಬಂದಿರುವ ಈ ಪಿಡುಗನ್ನು ಹೋಗಲಾಡಿಸಲು ಅಷ್ಟು ಸುಲಭವಿಲ್ಲ.ನಮ್ಮಲ್ಲಿ ಭ್ರಷ್ಟಾಚಾರವೆಂದರೆ ಪ್ರಮುಖವಾಗಿ ಸರಕಾರಿ ಕಛೇರಿಗಳಲ್ಲಿ ಅಧಿಕಾರಿಗಳು ಹಿಂಡುವ ಲಂಚ ರುಷುವತ್ತುಗಳು ಎಂಬ ಭಾವನೆ ಇದೆ. ಸರಕಾರೀ ಅಧಿಕಾರಿಗಳು,ರಾಜಕಾರಣಿಗಳು ಇವರೆಲ್ಲ ಭ್ರಷ್ಟಾಚಾರಿಗಳು,ಉಳಿದಂತೆ ನಾವೆಲ್ಲ ಸುಭಗರು ಎಂಬ ಬಲವಾದ ತಪ್ಪುಕಲ್ಪನೆ ಎಲ್ಲರಲ್ಲಿ ಇದೆ. ಕಾನೂನು ಬದ್ಧವಾದ ಕೆಲಸಕಾರ್ಯಗಳಿಗೂ ಲಂಚ ನೀಡುವವರಿದ್ದಾರೆ.ಸ್ವಲ್ಪವೂ ಕಾಯುವ ತಾಳ್ಮೆ ಇಲ್ಲ.ನಮಗೆ ಕೂತಲ್ಲಿ ಕೆಲಸವಾಗಬೇಕು,ಏನೂ ಬಾಧೆ ಆಗಬಾರದು ಅಂದರೆ ಆಗುತ್ತದೆಯೇ? ತನ್ನ ಕೆಲಸ ಆಗಲು ಏನು ಅಡ್ಡಿ ಆತಂಕ ಇವೆ ಎಂಬ ಮಾಹಿತಿ ಪಡಕೊಳ್ಳಲು ಹೆಚ್ಚಿನವರು ತಯಾರಿಲ್ಲ,ಹೇಗಾದರೂ ಮಾಡಿ ತಮ್ಮ ಕೆಲಸ ಮಾಡಿ ಕೊಡಿ ಎನ್ನುವವರೆ ಹೆಚ್ಚು.ಆ ಬಗ್ಗೆ ಅಕಾರಣ ಹಣ ಖರ್ಚು ಮಾಡಲೂ ತಯಾರಿದ್ದಾರೆ.ಒಂದು ಕೆಲಸ ಆಗಬೇಕಾದರೆ ಅದಕ್ಕೆ ಸಂಬಂಧಪಟ್ಟ ಮಾಹಿತಿ,ಕಾಗದಪತ್ರ ಮುಂತಾದವುಗಳನ್ನು ಒದಗಿಸಿದರೆ ಅಧಿಕಾರಿಗಳಿಗೆ ಲಂಚ ನೀಡುವ ಪ್ರಶ್ನೆ ಇಲ್ಲ.ನಾವು ನೋಡಿರುವಂತೆ ವ್ಯಾಪಾರಿ ವರ್ಗದವರು ಸಾಮಾನ್ಯವಾಗಿ ಸರಿಯಾದ ಲೆಕ್ಕಪತ್ರ ಇಡುವುದಿಲ್ಲ.ಆದರೆ ಉಲ್ಟಾ ಸೇಲ್ಸ್‌ಟ್ಯಾಕ್ಸ್,ಕಮರ್ಶಿಯಲ್‌ಟ್ಯಾಕ್ಸ್ ಅಧಿಕಾರಿಗಳನ್ನು ಮಾತ್ರ ಲಂಚ ಕೋರರು,ಎಷ್ಟು ಕೊಟ್ಟರೂ ಅವರ ಬಾಯಾರಿಕೆ ಹಿಂಗುವುದಿಲ್ಲ ಎಂಬ ವ್ಯಂಗ್ಯ ಬೇರೆ.ಸರಿಯಾದ ಲೆಕ್ಕಪತ್ರವಿಟ್ಟು ಲಂಚಕೋರ ಅಧಿಕಾರಿಗಳನ್ನು ದಿಟ್ಟವಾಗಿ ಎದುರಿಸುವ ವ್ಯಾಪಾರೀ ವರ್ಗದ ಪ್ರಮಾಣ ಎಷ್ಟಿದೆ?ಯಾರಾದರೂ ಈ ಬಗ್ಗೆ ಸಮೀಕ್ಷೆ ನಡೆಸಿದ್ದಾರೆಯೆ?ಒಟ್ಟಾರೆಯಾಗಿ ಟ್ಯಾಕ್ಸ್ ಅಧಿಕಾರಿಗಳು ಭ್ರಷ್ಟರು ಎಂದು ಬಿರುದುಕೊಟ್ಟು ಕೈ ತೊಳಕೊಂಡರೆ ಸರಿಯೇ? ಲಂಚ ಕೇಳುವವನು ತಪ್ಪಿತಸ್ಥ,ಲಂಚಕೋರ,ಭ್ರಷ್ಟಾಚಾರಿ ಎಂದಾದರೆ ಲಂಚ ಕೊಡುವವನು ಲಂಚ ಪಡಕೊಳ್ಳುವಂತೆ ಪ್ರೇರೇಪಿಸುವವನನ್ನು ಏನೆಂದು ಕರೆಯಬೇಕು? ಅಂತವರಿಗೆ ಯಾವ ಬಿರುದನ್ನು ನೀಡಬೇಕು? ಕಸ್ಟಂಸ್‌ಅಧಿಕಾರಿಗಳು ಲಂಚಕೋರರು, ಏನನ್ನಾದರೂ ಕಿತ್ತುಕೊಳ್ಳದೇ ಅವರು ವಿಮಾನನಿಲ್ದಾಣದಿಂದ ಪ್ರಯಾಣಿಕರನ್ನು ಹೊರಬಿಡುವುದಿಲ್ಲ ಎಂಬ ವಿಚಾರ ಹೆಚ್ಚಿನವರಲ್ಲಿದೆ.ಸರಿಯಾದ ತೆರಿಗೆ,ಕಸ್ಟಮ್ ಡ್ಯೂಟಿ ಪಾವತಿಮಾಡಿದ್ದರೆ ಅಧಿಕಾರಿಗಳಿಗೆ ಏಕೆ ಹಣ ಕೊಡ ಬೇಕು? ಬೇಕಾಬಿಟ್ಟಿ ಇತರರನ್ನು ಹೀಯಾಳಿಸಲು ಬಹಳ ಸುಲಭ.ನಾನು ನಮ್ಮಲ್ಲಿ ಲಂಚಗುಳಿತನ ಭ್ರಷ್ಟಾಚಾರ ಇಲ್ಲವೇ ಇಲ್ಲ.ಎಲ್ಲ ಅಧಿಕಾರೀವರ್ಗದವರು ಬಹಳ ಸಾಚಾ ಎಂದು ಪ್ರತಿಪಾದಿಸಲು ಹೊರಟಿಲ್ಲ.ನಮಗೆ ಅಂದರೆ ಸಾರ್ವಜನಿಕರಿಗೂ ಬಾಧ್ಯತೆ ಇದೆ. ಅದನ್ನು ನಾವು ಚನ್ನಾಗಿ ನಿಭಾಯಿಸುತ್ತಿದ್ದೇವೆಯೋ ಎಂದು ವಿಮರ್ಶೆ ಮಾಡಿಕೊಳ್ಳಬೇಕು.
ಅಣ್ಣಾ ಹಜಾರೆಯವರು ಒಬ್ಬ ಉನ್ನತ ವ್ಯಕ್ತಿ.ಅವರ ಸಾಧನೆಗಳ ಬಗ್ಗೆ ನನಗೆ ತುಂಬಾ ಗೌರವವಿದೆ.ಇವತ್ತಿನ ದಿನದ ಅಸಾಮಾನ್ಯ ಪರಿಸ್ಥಿತಿಯಲ್ಲೂ ಅವರು ಅಸಾಧ್ಯವನ್ನು ಸಾಧ್ಯವೆಂದು ಸಾಧಿಸಿ ತೋರಿಸಿದ ಮಹಾನ್ ಪುರುಷ.ಅವರ ಸಾಧನೆಗಳನ್ನು ನಮ್ಮ ಜನ ಹಾಗೂ ಸರಕಾರಗಳು ಗುರುತಿಸುವ ಮೊದಲೇ ಅವರಿಗೆ ನೋಬೆಲ್ ಪಾರಿತೋಷಕಕ್ಕೆ ಸಮಾನವಾದ ಮ್ಯಾಗ್‌ಸೇಸೆ ಪುರಸ್ಕಾರ ದೊರಕಿತ್ತು.ಸಮಾಜದಲ್ಲಿನ ಕೆಡುಕುಗಳನ್ನು ಕಿತ್ತೊಗೆಯಬೇಕು. ಒಪ್ಪುತ್ತೇವೆ.ಆದರೆ ಅದಕ್ಕೆ ಪೂರಕವಾಗಿ ಮೊದಲು ರಂಗವನ್ನು ಸಿದ್ಧಪಡಿಸಿಕೊಳ್ಳಬೇಕು.ಏಕಾಏಕಿ ಅಣ್ಣಾಹಜಾರೆಯವರಂಥ ಪ್ರಸಿದ್ಧ ಹಾಗೂ ಅಪರೂಪ ವ್ಯಕ್ತಿಗಳು ಆಮರಣಾಂತ ಉಪವಾಸದಂತಹ ನಿರ್ಧಾರಗಳನ್ನು ಸರಕಾರಗಳ ಮೇಲೆ ಹೇರಿದರೆ ಸೂಕ್ತ ನಿವಾರಣೆ,ಭ್ರಷ್ಟಾಚಾರ ನಿರ್ಮೂಲನೆ ಆಗುವುದೇ? ಇದು ಒಂದು ರೀತಿಯಲ್ಲಿ ಒತ್ತಡ ತಂತ್ರವೆಂದೆನಿಸುವುದಿಲ್ಲವೇ? ಅಲ್ಲದೆ ಭ್ರಷ್ಟಾಚಾರ ನಿರ್ಮೂಲನೆಯು ಕೇವಲ ಸರಕಾರದ ಜವಾಬ್ದಾರಿಯೇ? ನಮ್ಮ ನಿಮ್ಮೆಲ್ಲರ ಕರ್ತವ್ಯವಲ್ಲವೇ? ಲೋಕಪಾಲ ಮಸೂದೆಯನ್ನು ಜಾರಿಗೊಳಿಸಿದ ಕೂಡಲೇ ಈ ಪಿಡುಗು ತೊಲಗಿಹೋಗುವುದೇ?ಈಗಾಗಲೇ ರಾಜ್ಯಗಳಲ್ಲಿ ಲೋಕಾಯುಕ್ತ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.ಎಷ್ಟರಮಟ್ಟಿಗೆ ಸುಧಾರಣೆಯಾಗಿದೆ! ಅಥವಾ ಏನಾದರೂ ಸುಧಾರಣೆ ಆಗಿದೆಯೆ?.ಎಷ್ಟು ಮಂದಿ ಸರಕಾರೀ ಅಧಿಕಾರಿಗಳು ಲೋಕಾಯುಕ್ತರ ಕಾರ್ಯಾಚರಣೆಗೆ ಹೆದರುತ್ತಾರೆ?ನಾನು ಎಲ್ಲೋ ಓದಿರುವಂತೆ ಒಬ್ಬ ಅಧಿಕಾರಿಯ ಮೇಲೆ ಎರಡು ಬಾರಿ ಲೋಕಾಯುಕ್ತರ ದಾಳಿ ನಡೆದಿದೆ! ನಮ್ಮ ರಾಜ್ಯದ ಲೋಕಾಯುಕ್ತರು ನೇರ ನುಡಿಯ ಕರ್ತವ್ಯನಿಷ್ಟ ನ್ಯಾಯಮೂರ್ತಿಗಳಾದುದರಿಂದ ತುಂಬಾ ಪರಿಣಾಮಕಾರಿಯಾಗಿ ಮನ್ನಣೆ ಪಡೆದಿದ್ದಾರೆ. ಈ ಸ್ಥಿತಿ ಎಲ್ಲಾ ರಾಜ್ಯಗಳಲ್ಲಿವೆಯೇ?ಕೇವಲ ಸರಕಾರೀ ಯಂತ್ರವು ಸರಿಯಾದರೆ ಸಾಕಾಗದು.ಜನಮಾನಸವೂ ಸಹ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಎದ್ದೇಳಬೇಕು.ಆಣ್ಣಾ ಹಜಾರೆಯವರ ಅಸ್ತ್ರ ಕೇವಲ ಸರಕಾರದ ವಿರುದ್ಧವಲ್ಲದೆ ಸಮಾಜದಲ್ಲಿರುವ,ಜನರ ಮನಸ್ಸಿನಲ್ಲಿರುವ ಭ್ರಷ್ಟ,ದಾಸ್ಯ ಮಾನಸಿಕತೆಯ ವಿರುದ್ಧವೂ ಇರಬೇಕು ಎಂದು ನನ್ನ ಅಭಿಮತ.ನಾನು ಅಣ್ಣಾ ಹಜಾರೆಯವರ ಪ್ರಯತ್ನಗಳಿಗೆ,ಉದ್ದೇಶಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಇಂತಿ

Sunday, February 20, 2011

Extraveganza or what.....

ಶನಿವಾರ ಮಧ್ಯಾಹ್ನ ಯಥಾಪ್ರಕಾರ ರಾಮದಾಸನ ಅಂಗಡಿಗೆ ಹಾಜರಿ ಹಾಕಿದೆ
"
"
"
.ಬರ್ಕಲಿ ಸಿಗರೇಟು ಎಳೆಯುವ ಗಿರಾಕಿ ನಾನು.ಅದೂ ಉಶಿಣೆ.ಮಾತು ಮದುವೆ ಮತ್ತು ಖರ್ಚುಗಳತ್ತ ತಿರುಗಿತು.ನನ್ನ ಮದುವೆಯ ಸಮಯದಲ್ಲಿ ನಾಲಕ್ಕು ರುಪಾಯಿ ದೇಣೆ ಮಾತಾಗಿತ್ತು.ಆದರೆ ಅದೂ ಸಹ ಬಾಕಿ ಮಾಡಿದ್ದಾರೆ" ಪನ್ನಿ ಮಾಮನ ಡೈಲಾಗು.ಹೆಹ್ಹೆ ಅದರಲ್ಲೂ ಉಶಿಣೆಯೇ?"ಮಾತಾಗಿತ್ತು ಹೌದು,ಆದ್ರೆ ರುಪಾಯಿ ಯಾರ ಹತ್ರ ಉಂಟು ಮಾರಾಯ! ಗಾಡಿಯ ಮೇಲೆ ಹೊರಣ,ಎದುರುಕಾಣಿಸಿದ ಮೇಲೆ ಗಂಡಿನ ಹೆಣ್ಣಿನ ಕಡೇ ಅಂತ ಇಲ್ಲ.ಎಲ್ಲಾ ಒಂದೆ." ಎಂದರು.ನಾಲ್ಕು ರುಪಾಯಿ ದೇಣೆ ತಕ್ಕೊಳ್ಳುವ ಕಾಲ ಅಗ್ಗದ್ದೋ ಅಥವಾ ನಾಲ್ಕು ರೂಪಾಯಿ ಕೊಡಲೂ ಆಗದಂತ ಕಾಲ ಕಷ್ಟದ್ದೋ ಎಂಬ ಜಿಜ್ಜಾಸೆ ಎಂಬ ಚರ್ಚೆ ತುಂಬ ಹೊತ್ತು ನಡೆಯಿತು.ಯಾವುದೇ ನಿಷ್ಕರ್ಷೆ ಆಗಲಿಲ್ಲ.ಹಳೆಮಂಡೆ ಪನ್ನಿಮಾಮನ ಪ್ರಕಾರ ಹಳೆಕಾಲ ಅಗ್ಗದ್ದು.ನಮ್ಮ ಪ್ರಕಾರ "ಹಳೇಕಾಲ ಅಗ್ಗದ್ದೇನೂ ಅಲ್ಲ. ನಾಲ್ಕು ಐದು ರೂಪಾಯಿಗಳಿಗೆ ಬಾಯಿಬಾಯಿ ಬಿಡುವ ಕಾಲ ಅಗ್ಗದ್ದಲ್ಲ ಬದಲಿಗೆ ದುರ್ಭಿಕ್ಷದ್ದು,ಅದನ್ನು ನೀವು ನಮ್ಮ-ಕಿರಿಯರ-ಬಳಿ ಒಪ್ಪಲು ತಯಾರಿಲ್ಲ.ಅಷ್ಟೇ. ತರ್ಕ ಮಾಡುವಾಗ ಮನುಷ್ಯ ನಿಯತ್ತಾಗಿರಬೇಕು.ಸುಮ್ಮನೆ ಹಟ ಸಾಧನೆ ಮಾಡಬಾರದು."ಅವರಿಗೆ ಇನ್ನೂ ಸಿಟ್ಟು ಬಂತು."ನಿಮಗೆ ಹಿರಿಯರೆಂದರೆ ಸ್ವಲ್ಪವೂ ಗೌರವ ಇಲ್ಲ.ಬಾಯಿಗೆ ಬಂದಂತೆ ಹರಟೆ ಹೊಡಿತೀರಿ....."ಸ್ವಲ್ಪ ಹೊತ್ತು ಲೆಕ್ಚರ್ ಆಯಿತು. ನಾವೂ ಮಾತಾಡಲಿಲ್ಲ.

"
"
"
"
ಆದರೂ ದಿನ ಕಳೆದಂತೆ ಮದುವೆಗಳಲ್ಲಿ ಮನುಷ್ಯನ ನಿಜ ಬಣ್ಣ ಬಯಲಾಗಲಾರಂಭಿಸಿದವು.ನನ್ನನ್ನೂ ಕೂಡಿಸಿ ಬರೆಯುತ್ತಿದ್ದೇನೆ.ಯಾರೂ ತಪ್ಪು ಭಾವನೆ ಇಟ್ಟುಕೊಳ್ಳಬಾರದು.ಇತರರಿಗೆ,ಊರವರಿಗೆ ಹೇಳುವಾಗ ಸುಧಾರಣೆಯ ಮಾತುಗಳು-ಆಡಂಬರ,ಅನ್ನ ತಿಂಡಿ ವೇಸ್ಟ್ ಮಾದಬಾರದು,ಅನಗತ್ಯ ಪೊಂಪ್-ದೊಡ್ಡಸ್ತಿಕೆ ಪ್ರದರ್ಶನದ ಅಗತ್ಯವಿಲ್ಲ......ಆದರೆ ತನ್ನ ಸ್ವಂತದ ಸರದಿ ಬಂದಾಗ.........!ಹಿಂದೆ ರಾಮಮಂಟಪದ ಮೆನೆಜ್‌ಮೆಂಟ್‌ನವರು ಒಂದು ಸ್ಕೀಮ್ ಮಾಡಿದರು.ಆರ್ಥಿಕ ತೊಂದರೆಯಿದ್ದವರು ತಮ್ಮ ಮನೆಯವರ ಮದುವೆ,ಮುಂಜಿ ಯಾ ಇತರ ಕಾರ್ಯಕ್ರಮ ಮಾಡಬೇಕಿದ್ದರೆ ಅರ್ಜಿ ಕೊಟ್ಟರೆ ಬಾಡಿಗೆಯನ್ನು ಮಾಫಿ ಮಾಡಬಹುದು.ಆ ಸೌಲಭ್ಯವನ್ನು ಒಬ್ಬರು ಪಡಕೊಂಡು ಕಾರ್ಯಕ್ರಮ ನಡೆಯುತ್ತಿತ್ತು.ಆ ಮಹನೀಯರ ಹೆಸರು ಬೇಡ.ನಮ್ಮ ಮೋಹನದಾಸ ಊಟಕ್ಕೆ ಹೋದಾಗ ಮದುವೆ ಪ್ರೋಗ್ರಾಂ ಗಡದ್ದಾಗಿ ನಡೆಯುತ್ತಿತ್ತು.ಒಳ್ಳೆಯ ಸಭೆಯೂ ಸೇರಿತ್ತು.ಸುಶ್ರಾವ್ಯವಾದ ವಾದ್ಯವೂ ಇತ್ತು.ಫೋಟೋ ಮತ್ತು ವೀಡೀಯೋ ಸಹ ಇತ್ತು.ಕಾರ್ಯಕ್ರಮ ಸಾಂಗವಾಗಿ ನಡೆಯಿತು.ಮರುದಿನ ಮೋಹನದಾಸನು ಅವರಿಗೆ ಬಾಡಿಗೆಯ ಬಿಲ್ಲನ್ನು ಕಳುಹಿಸಿದ.ತನಗೆ ಬಾಡಿಗೆ ಮಾಫಿ ಆಗಿದೆ ಬಹುಶಃ ನಿನಗೆ ತಿಳಿದಿರಲಿಕ್ಕಿಲ್ಲ ಎಂದು ಜವಾಬು ಬಂತು."ನನಗೆ ಗೊತ್ತಿದೆ.ನಿನ್ನ ಬಾಡಿಗೆ ಮಾಫಿ ಕ್ಯಾನ್ಸಲ್ ಆಗಿದೆ"ಎಂದನಿವ.ಅದು ಹೇಗೆ?"ಅಲ್ಲ ಮಾರಾಯ ನಿನಗೆ ಮದುವೆಗೆ ಫೋಟೋ ವೀಡೀಯೋ ಒಳ್ಳೇ ವಾದ್ಯದವರು ಎಲ್ಲ ಬೇಕು.ನಮ್ಮದೆ ಆದ ರಾಮಮಂಟಪಕ್ಕೆ ಬಾಡಿಗೆ ಪ್ರಶ್ನೆ ಬಂದಾಗ ನಿನ್ನ ಬಡತನ ಬರ್ತದೋ."ಹಾಗಾದ್ರೆ ದೊಡ್ಡವರು-ದುಡ್ಡಿದವರು ಮಾತ್ರ ಗಮ್ಮತ್ ಮಾಡಬಹುದೋ? ಬಡವರು ಗಮ್ಮತ್ ಮಾಡಲೇಬಾರದೋ? ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಇನ್ನೊಂದಾ?" ಚರ್ಚೆ ಶುರುವಾಯ್ತು.ಅದಕ್ಕೋಸ್ಕರವೇ ಈ ಮಾಫಿಯ ಸ್ಕೀಮನ್ನೇ ರದ್ದು ಮಾಡಿದ್ದೇವೆ.ಪ್ರತಿಯೊಬ್ಬನೂ ತನಗೆ ಅನುಕೂಲ,ಇಚ್ಛೆ ಇದ್ದಂತೆ ಕಾರ್ಯಕ್ರಮ ನಡೆಸಲಿ. ಯಾರೂ ಮುಂದೆ ಕಿರಿಕಿರಿ ತಕರಾರು ಮಾಡಬಾರದು ಎಂದು ಈ ನಿರ್ಧಾರ ಆಗಿದೆ." ಎಂದು ಪ್ರಕಟಿಸಲಾಯಿತು.
"

"
"
"
"
"
"
"
ನಾನೂ ಸಹ ಅನವಶ್ಯಕ ಖರ್ಚು ವೆಚ್ಚಗಳ ವಿರೋಧಿ.ಹಿಂದೆ ವಿಕ್ರಮನ ಮುಂಜಿಯ ಸಮಯದಲ್ಲಿ ಈ ಆಡಂಬರ,ಡೌಲುಗಳ ಬಗ್ಗೆ ನನಗೂ,ಮನೆಯ ಇತರರಿಗೂ-ಮುಖ್ಯವಾಗಿ ತಂದೆಯವರಿಗೂ-ಒಂದೆರಡು ಮಾತುಕತೆ,ಚರ್ಚೆ ಆಗಿತ್ತು.ಮುಂಜಿ ಕಾರ್ಯಕ್ರಮ ಮನೆಯಲ್ಲೇ ಆಗಲಿ,ಭಾರೀ ಗಡದ್ದು ಮಾಡುವ ಅಗತ್ಯ ಇಲ್ಲ ಎಂದು ನನ್ನ ಅಭಿಪ್ರಾಯ.ನಿನಗೆ ಗೊತ್ತಿಲ್ಲ.ನಮ್ಮ ವಿಕ್ರಮ ಮನೆತನಕ್ಕೇ ಹಿರಿಯ ಮೊಮ್ಮಗ.ಅವನ ಮುಂಜಿ ಪ್ರೋಗ್ರಾಮ್ ಏಕ್‌ದಮ್ ಧೂಮ್‌ಧಾಮ್ ಮಾಡಬೇಕು, ಸುಬ್ರಾಯನ ಮುಂಜಿಯನ್ನು ಶೀನ್ವಾಸ ಎಷ್ಟು ಗಮ್ಮತ್ತಿನಲ್ಲಿ ಮಾಡಿದ್ದ! ನೀನು ಠಣ್‌ಠಣ್ ರುಪಾಯಿ ಈಚೆಬದಿ ನೂಕು,ಉಳಿದದ್ದೆಲ್ಲ ನನಗೆ ಬಿಡು" ಅವರ ತರ್ಕ ಮತ್ತು ಹುಕುಮ್.ನನಗೂ ಹೌದೆನಿಸಿತು.ದೊಡ್ಡಪ್ಪನವರು ಹಿಂದೆ ಸುಬ್ರಾಯಣ್ಣನ ಉಪನಯನದಲ್ಲಿ ಗಡದ್ದು ಮಾಡಿದ್ದರು ಎಂದಲ್ಲ.ನಮ್ಮ ವಿಕ್ರಮ ಮನೆಗೆ ಹಿರೀ ಮೊಮ್ಮಗ,ಮತ್ತು ನಮ್ಮಲ್ಲಿ ಪದೇಪದೇ ಸಮಾರಂಭಗಳು ನಡೆಯುವ ನದರು ಕಮ್ಮಿ.ಅನುಕೂಲವೂ ಇದೆ.ಹಾಗಿರುವಾಗ ತಕ್ಕಷ್ಟು ವಿಜ್ರಂಭಣೆಯಿಂದ ನಡೆಯಲಿ ಎಂದು ಸಮ್ಮತಿಸಿದೆ.ಆದರೂ ಮನದ ಯಾವುದೋ ಸಣ್ಣ ಕೋಣೆಯಲ್ಲಿ ಆಗಾಗ ತರ್ಕಗಳು ಏಳುತ್ತಿದ್ದವು.ಈ ತರ್ಕಗಳನ್ನು ಮೆಟ್ಟಿ ಮುಂಜಿ ಪ್ರೋಗ್ರಾಂ ಸಾಕಷ್ಟು ಚೆನ್ನಾಗಿಯೇ ಆಯ್ತು.ಎಲ್ಲರಿಗೂ-ಮನೆಯವರಿಗೂ,ಸಂಬಂಧಿಕರಿಗೂ ಅಲ್ಲದೇ ಆಹ್ವಾನಿತರಿಗೂ ಖುಶಿಯಾಯ್ತು.ಅದಕ್ಕೆ ಸರಿಯಾಗಿ ಜನರ ಆಲೋಚನಾ ಚಕ್ರ ಸುತ್ತುವ ಧಾಟಿ ಸಹ ಬದಲಾಗಲಾರಂಭಿಸಿತ್ತು.ವ್ಯವಸ್ಥೆ ಇರುವಾಗ ಖರ್ಚು ಮಾಡಬೇಕು ಮಾರಾಯಾ,ನಿನಗೇನು ಆರು ಮಕ್ಕಳಿದ್ದಾರಾ?ಒಬ್ಬ ಹುಡುಗ ಒಬ್ಬಳು ಮಗಳು.ಈಗ ಮಾಡದೇ ಮತ್ಯಾವಾಗ ಮಾಡ್ತಿ? ಕೆಲವರ ಸಲಹೆ ಸೂಚನೆಗಳು ಬಂದವು.ಹೌದಲ್ಲ?ಎಂದಿತು ಮನಸ್ಸು.ನಾವು ಮಾಡುವ-ಮಾಡಿದ-ಖರ್ಚುಗಳು ದುಂದುವೆಚ್ಚಗಳಲ್ಲ ಎಂಬ ಸಮರ್ಥನೆ ತಾವಾಗಿಯೇ ಹುಟ್ಟಿ ಗಟ್ಟಿಯಾಯಿತು.ಪಾವನಳ ನೆಂಟಸ್ತಿಕೆ ರವಿಶಂಕರನೊಟ್ಟಿಗೆ ಫಿಕ್ಸ್ ಆಗಿ ಒಂದು ದಿನ ಅವಳನ್ನು ನೋಡುವ ಕಾರ್ಯಕ್ರಮ ಇಟ್ಟುಕೊಂಡಿದ್ದೆವು.ಎಲ್ಲರೂ ಬರಲಿರುವ ನೆಂಟರ ನಿರೀಕ್ಷೆಯಲ್ಲಿದ್ದೆವು.ಅಷ್ಟರಲ್ಲಿ ಒಂದು ಬಿಳೀ ಕಾರು ಮನೆಯ ಎದುರು ಬಂದು ನಿಂತಿತು."ಓಹ್! ಡಾಕ್ಟರ್ ವಿ.ಎಸ್.ಆಚಾರ್ಯ ಬಂದ್ರು" ಎಂದು ಮೋಹನದಾಸ ಮತ್ತಿತರರು ಹೊರಗೆ ಓಡಿ ಕಾರಿನಿಂದ ಮೆಲ್ಲನೆ ಇಳಿಯುತ್ತಿದ್ದ ಗೃಹಮಂತ್ರಿಗಳನ್ನು ಸ್ವಾಗತಿಸತೊಡಗಿದರು.ನಾನು ಬರುವುದು ನಿಮಗೆ ಹೇಗೆ ಗೊತ್ತು? ಸಂತೆಕಟ್ಟೆಗೆ ಹೋಗಿದ್ದೆ,ಹಾಗೇ ನಿಮ್ಮಲ್ಲಿ ಸ್ವಲ್ಪ ರೆಸ್ಟ್ ತಕೊಂಡು ಮುಂದೆ ಪ್ರಯಾಣ ಮಾಡುವಾ ಎಂದು ಬಂದೆ.ನಿಮ್ಮಲ್ಲಿ ಏನೋ ಕಾರ್ಯಕ್ರಮ ಇಟ್ಟುಕೊಂಡ ಹಾಗಿದೆ? ನಾನು ಬಂದು ತೊಂದ್ರೆ ಆಯ್ತೋ?"ನೀವು ಬಂದದ್ದು ಬಹಳ ಸಂತೋಷ.ನಮ್ಮಲ್ಲಿ ಹುಡುಗಿ ನೋಡಲು ಹುಡುಗಮತ್ತವರ ಪೈಕಿ ಬರ್ತಾರೆ,ಅವರನ್ನು ಕಾಯ್ತಾ ಇದ್ದೆವು,ನೀವು ಒಳಗೆ ಬನ್ನಿ. ವಿಶ್ರಾಂತಿಗೆ ವ್ಯವಸ್ಥೆ ಮಾಡೋಣ" ಸ್ವಾಗತಿಸಿದೆವು.ಆಗಲಿ,ಆಗಲಿ.ಒಳ್ಳೆಯ ಸಮಯಕ್ಕೆ ಬಂದ ಹಾಗಾಯ್ತು.ಓಹೊ ಗುರುಗಳು ಇಲ್ಲೇ ಇದ್ದೀರಾ?"ಎಂದು ಬಾಬುಮಾಮನವರನ್ನು ವಿಚಾರಿಸಿದರು.ಅವರ ಬಳಿ ಸ್ವಲ್ಪ ಹೊತ್ತು ರಾಜ್ಯ್ ರಾಜಕೀಯ,ಆರ್ಥಿಕ ಪರಿಸ್ಥಿತಿ ಅದು ಇದು ಮಾತಾಡುವ ವೇಳೆಗೆ ಪೇಟೆಯಿಂದ ಗುರುದಾಸ ಶೆಣೈ,ಸತೀಶ ಪೈ ಅವರಿವರು ಓಡಿ ಬಂದರು.ಮಂತ್ರಿಗಳು ನಮಗೆ ಶುಭ ಹಾರೈಸಿ ಗುರು ಮನೆಗೆ ಹೋದರು. ಎಷ್ಟು ಬಂಗಾರ ಹಾಕ್ತೀ?" ಮೋಹನದಾಸ ಕೇಳಿದ.ಅವರ ಡಿಮಾಂಡ್ ಏನುಂಟು?"ಈಗ ಡಿಮಾಂಡ್ ಅಂತ ಯಾರೂ ಏನೂ ಹೇಳುವುದಿಲ್ಲ.ನಾವು ನಮ್ಮ ಯೋಗ್ಯತೆ,ಅವರ ಘನತೆಗಳಿಗೆ ಸರಿಯಾಗಿ ನಗ ಮಾಡಿಸಿ ಮದುವೆ ಮಾಡಿಕೊಡಬೇಕು.ಆದರೂ ಒಂದು ಮಾತು ಕೇಳಿ ಬರ್ತೇನೆ." ಒಂದು ದಿನ ಹೋಗಿ ರಮಾನಂದಭಾವಜಿ ಮನೆಗೆ ಹೋದ.ನೀವು ಎಷ್ಟು ಏನು ಬಂಗಾರ ಹಾಕ್ತೀರಿ ಎಂಬುದು ನಿಮಗೆ ಬಿಟ್ಟ ವಿಚಾರ.ನಾವು ಎಂತದೂ ಕೇಳುವ ಕ್ರಮ ಇಲ್ಲ." ಜವಾಬು ಬಂತು.
"
"
"
"
"
"
"
"
"
"


"
"
"
"

"
ಒಮ್ಮೆ ರಜೆಯಲ್ಲಿ ಊರಿಗೆ ಬಂದಾಗ ವಾಡಿಕೆಯಂತ ಹೆಡ್‌ಆಫೀಸಿಗೆ ಹೋಗಿ ಪ್ರಿಮಿಸಿಸ್‌ ಡಿಪಾರ್ಟ್‌ಮೆಂಟಿನಲ್ಲಿ ಮಲ್ಯರನ್ನು ಭೆಟ್ಟಿಯಾದೆ.ಆಡ್‌ಪಳ್ಳೊ ಮಾಲ್ಲ್‌ಮಾಮ್‌"ಉಟ್ಟಾ,ಹಾಂಗಾ ಹೆಡ್ಡಾಫೀಸಾಂತು ಆಡ್‌ ಪೋಡೂ ನಾ" ಅಪ್ಪಣೇ ಕೊಟ್ಟರು.ಮಾತುಕತೆ ಸಾಗಿತು.ತಮ್ಮ ವಿದ್ಯಾಳಿಗೆ ಒಳ್ಳೆಯ ನೆಂಟಸ್ತಿಕೆ ಇದ್ದರೆ ತಿಳಿಸು ಮಾರಾಯಾ ಎಂದರು.ನಮ್ಮ ಮಂಜ ಇದ್ದಾನೆ ಎಂದೆ.ನಿಮ್ಮ ಮಂಜ ಏನು ಮಾಡ್ತಾನೆ?"ಇಂಜಿನಿಯರ್"ಇಂಜಿನಿಯರ್ ಅಂದ್ರೆ ಉಲ್ಟಾ ಪೆಸ್ಕಾತಿಯ?"ನೀವೀಗ ಮಗಳ ಮದುವೆಗೆ ತಕ್ಕ ಮಟ್ಟಿಗೆ ನಗ ಮಾಡಿಟ್ಟಿರುತ್ತೀರಿ.ಎಷ್ಟೂ ಕೊಡ್ತೀರಿ?" ಕೇಳಿದೆ.ನನಗಿರುವವಳು ಒಬ್ಬಳೇ ಮಗಳು.ನಾನೇನೂ ಕೃಪಣತೆಯಲ್ಲಿ ಮದುವೆ ಮಾಡುವುದಿಲ್ಲ.ಆದರೂ ನೀನು ಇಂಜಿನಿಯರ್ ಅಂದಿಯಲ್ಲ.ಅದಕ್ಕೆ ಮಾತಿಗೆ ಹೇಳಿದ್ದು" ಸಮಜಾಯಿಶಿ ನೀಡಿದರು.ಅಲ್ಲ ಏನು ಮಾಡಿದ್ದೀ ಎಂದು ಹೇಳು ಮಾರಾಯಾ?"ನೋಡು ಕೇಶವಾ,ನೀನು ನನ್ನ ಅಂತರಂಗದ ದೋಸ್ತಿ.ಇಂತಿಷ್ಟು ಬಂಗಾರ,ವಜ್ರ ಎಲ್ಲ ಕೊಡುತ್ತೇನೆ.ಮದುವೆ ಗಡದ್ದು ಮಾಡುತ್ತೇನೆ.ಹುಡುಗ ಹೇಗೆ?" ವಿಚಾರಿಸಿದರು.ಮಾಲ್ಲ್‌ಮಾಮ್ ನೀವು ನನ್ನ ದೋಸ್ತಿ ಮಾತ್ರ್ವಲ್ಲ,ನನ್ನ ಗುರುಗಳು ಕೂಡಾ.ನಿಮ್ಮ ಮನೆ ಅಂದ್ರೆ ನಮ್ಮ ಮನೆ ಇದ್ದ ಹಾಗೆ.ನನಗೆ ನೀವು ಬಹಳವೇ ಹೆಲ್ಪ್ ಈ ಹಿಂದೆ ಮಾಡಿದ್ದೀರಿ.ಹಾಗಿರುವಾಗ ನಿಮಗೆ ನಾನು ಕಾಟುಪೋಟು ಸಂಬಂಧ ಹೇಳುತ್ತೇನಾ?ಇನ್ನು ಬಂಗಾರದ ವಿಷಯ.ನೀವು ಸೂಚಿಸಿದಕ್ಕಿಂತ ಐದು ಪವನು ಕಮ್ಮಿ ಹಾಕಿ,ಇನ್ನೂ ಡಿಸ್‌ಕೌಂಟು ಬೇಕಿದ್ದರೆ ನಮ್ಮ ಚಿಕ್ಕಪ್ಪನವರ ಬಳಿ ಕೇಳಬೇಕು.ಮದ್ವೆ ಮಾತ್ರ ಗಡದ್ದ್ ಮಾಡಿಕೊಡಬೇಕು." ಮಾತುಕೊಟ್ಟೆ.ಚಿಕ್ಕಪ್ಪ ಸಹ ನನ್ನ ಮಾತು ಒಪ್ಪಿ ಅನುಮೋದಿಸಿದರು.ಮಲ್ಯರೂ ಸಹ ಮಗಳ ಮದುವೆಯನ್ನು ಗಮ್ಮತ್ತಾಗಿ ಮಾಡುವತ್ತ ಮನವಿಟ್ಟರು.ಮಂಜನ ಮದುವೆ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲಿನಲ್ಲಿ ವಿಜ್ರಂಭಣೆಯಿಂದ ನಡೆಯಿತು.ಈ ಎಪಿಸೋಡು ಯಾಕೆ ನೆನಪಾಯ್ತು?ಹಿಂದೆ ಎಲ್ಲೆಲ್ಲಿ ಖರ್ಚು ಉಳಿಸಬಹುದು ಅಲ್ಲಲ್ಲಿ ಉಳಿಸುವ ಸ್ಕೀಮ್ ಹಾಕುತ್ತಿದ್ದರು.ಈಗ ಹಾಗಲ್ಲ.ವಿವಾಹ ಸಮಾರಂಭಗಳು ದಿನ ಹೋದಂತೆ ಹೆಚ್ಚು ಹೆಚ್ಚಾಗಿ ವಿಜ್ರಂಭಣೆ ತೋರಲಾರಂಭಿಸಿವೆ ಮತ್ತು ಅವುಗಳು ಅನಿವಾರ್ಯವೆನಿಸಿವೆ.ದುಡ್ಡಿನ ಮುಖ ಯಾರೂ ನೋಡುವುದಿಲ್ಲ.ಹಿಂದಿನ-ಈಗಿನ ಮಾನಸಿಕತೆಗಳ ತುಲನೆ ಮಾಡುವಾಗ ನೆನಪಾದ ಮಾತುಗಳು. ನಿಶ್ಚಯತಾಂಬೂಲ ಕಾರ್ಯಕ್ರಮಕ್ಕೆ ಹೇಳಿಕೆಗೆಂದು ರಮಣ ನಾಯಕರಲ್ಲಿ ಹೋದೆ,ನಿಶ್ಚಯಕ್ಕೆ ಎಷ್ಟು ಜನರ ಹೇಳಿಕೆ?"ಸುಮಾರು ಮುನ್ನೂರು ಮಂದಿ ಅಂತ ಲೆಕ್ಕ ಹಾಕಿದ್ದೇವೆ."ಎಂದೆ.ಅಷ್ಟು ಜಾಗ ನಿಮ್ಮಲ್ಲಿ ಎಲ್ಲುಂಟು?ಚಪ್ಪರ ಹಾಕ್ತೀಯ?"ಚಪ್ಪರ ಏಕೆ ರಾಮಮಂಟಪ ಉಂಟಲ್ಲ,ನೀವು ಎಲ್ಲರೂ ಬನ್ನಿ"ಮರುದಿನ ಪ್ರೋಗ್ರಾಮ್ ಆಗುತ್ತ ಇರುವಾಗ ಪುನಃ ಕರೆದರು-"ಕಾಲಿ ತೂಂವೆ ತಿನ್ಶಿ ಮಳ್ಳೆಲೆ,ಆತ್ತಂಚಿ ಚಾರ್ಷೆ ವೈರಿ ಜನ ಜಾಲ್ಲಾ,ಆನಿಕಯಿ ಎತ್ತ ಆಸ್ಸತಿ! ಪೂರಾ ವ್ಯವಸ್ಥಾ ಆಸ್ಸ ನಂವ್ಹೆ?"ಮೋಹನದಾಸನ ಬಳಿ ಕೇಳಿ.ಅವನು ವ್ಯವಸ್ಥಾಪ್ರಮುಖ್" ಮುಂದೆ ಸಾಗಿದೆ."
ವ್ಹೈರೆ ವ್ಯವಸ್ಥಾಪ್ರಮುಖ್ ಮ್ಹಳ್ಳೆರಿ ಕಸ್ಸನ್‌ರೆ?" ಎಂದು ಕೇಳಹತ್ತಿದರು.ಪಾವನಳ ಮದುವೆ ಕೂಡಾ ನಮ್ಮ ಮಟ್ಟಿಗೆ ಹೇಳುವುದಾದರೆ ವೈಭವದಿಂದ-ಕುಲದೀಪನ ಅಭಿಪ್ರಾಯ-ನಡೆಯಿತು.

Saturday, February 19, 2011

nanhe-munhe bacche tere-san devu




ನನ್ಹೆ ಮುನ್ಹೆ ಬಚ್ಹೆ ತೇರೆ ಮುಟ್ಟೀ ಮೆ ಕ್ಯಾ ಹೆಮುಟ್ಟಿ ಮೆ ಕ್ಯಾ ಹೆ- ದೇವಣ್ಣ ನಾಯಕರ (ನಮ್ಮ ತಂದೆಯವರ) ಸವಾರಿ ಊಟಕ್ಕೆ ಹೊರಟಿತು. "ಸಾನ್ ದೇವು ಜಾವ್ಣಾ ಭಾಯ್ರ್ ಸರ್ಲೊ ಘಂಟೆ ಬಾರ ಜಾಲ್ಲೆ" ಭವಾನಿ ಮಾಯಿಯವರು ಘೋಷಣೆ ಮಾಡಿದರು. ಬೆಳಗಿನ ಕೆಲಸ ಬಾಕಿ ಇದ್ದವರೂ ಸಹಾ ಚುರುಕಾದರು. ಇದು ಒಂದು ಲೆಜೆಂಡ್ ಅನ್ನುವ ರೀತಿಯಲ್ಲಿ ನಮ್ಮ ತಂದೆಯವರ ದಿನಚರಿ ಆಗಿತ್ತು. ಊಟ ತಿಂಡಿ ವಿಚಾರದಲ್ಲಿ ನಮ್ಮ ತಂದೆಯವರು ತುಂಬಾ ಪರ್ಟಿಕುಲರ್. ಎಲ್ಲಾ ಟೈಮ್ ಪ್ರಕಾರ ಆಗಬೇಕು. ಬೆಳಗ್ಗೆ ಪ್ರಕಾಶ ಹೋಟ್ಲಿನಲ್ಲಿ ಚಾ, ಮಧ್ಯೆ ಸುಮರು ಹತ್ತೂವರೆಗೆ ಚಾ ತಿಂಡಿ, ಮತ್ತೆ ಹನ್ನೆರಡು ಘಂಟೆಗೆ ಊಟ, ಅಂಗಡಿ ಮಾಳಿಗೆಯಲ್ಲಿ ಸಣ್ಣ ನಿದ್ದೆ, ರಾತ್ರಿ ಎಂಟು ಘಂಟೆಗೆ ಊಟ. ವೈಭವದ ಊಟ ಅಲ್ಲದಿದ್ದರೂ ರುಚಿಕರ ಆಗಬೇಕು. ಅನ್ನದ ಮೇಲೆ ಸಾರು ಯಾ ಸಾಂಬಾರು ಬಡಿಸಿದ ತಕ್ಷಣ ನೆಕ್ಕಿನೋಡಿ ಒಂಚೂರು ಉಪ್ಪು ಅಥವಾ ಹುಳಿ ಕಮ್ಮಿ, ಎರಡು ಮೆಣಸು ಬಿದ್ದರೆ ಹೈಕ್ಲಾಸ್ ಎಂದು ಜಡ್ಜ್ ಮೆಂಟ್ ಕೊಡಲೆ ಬೇಕು, ಹಾಗೇನಾದರೂ ಹೇಳದಿದ್ದರೆ ಇವತ್ತೇನೋ ಮಂಡೆಬಿಸಿ ಉಂಟು ಅಂತಾ ಲೆಕ್ಕ. ಜೀವನದಲ್ಲಿ ತುಂಬ ಕಷ್ಟಸುಖ-ಕಷ್ಟವೇ ಜಾಸ್ತಿ-ಅನುಭವಿಸಿದ ಜೀವ. ನಾವು ಹೋಗಲಿ ಎಲ್ಲರೂ ಬಡವರೇ, ಕಾಲ ದೇಶ ಪರಿಸ್ಥಿತಿ ಬಡತನದ್ದೆ ಆಗಿತ್ತು. ತಾನು ಬಡವ, ಒಂದೆರಡು ರೂಪಾಯಿಗೆ ತತ್ವಾರ, ಹಾಗೆಂದು ಯಾರೂ ನಾಚಿಗೆ ಪಟ್ಟುಕೊಂಡು ತಿರುಗುವುದು ನಾನು ನೋಡಿಲ್ಲ. ಅದೊಂದು ಕಾಮನ್ ವಿಷಯ ಆಗಿತ್ತು. ಆದರೆ ಗಮನಿಸ ಬೇಕಾದ ಮಾತೆಂದರೆ ಎಲ್ಲರಲ್ಲಿ ಜೀವನೋತ್ಸಾಹ ಇತ್ತು. ರಾತ್ರಿ ಊಟಕ್ಕೆ ಕಷ್ಟವಿದ್ದರೂ ಖುಷಿ ಗಮ್ಮತ್ತುಗಳಿಗೆ ಕೊರತೆಯಿರಲಿಲ್ಲ.ಇತರರಲ್ಲಿ ಸಮಸ್ಯೆಯಿದೆ ಎಂದು ಉಳಿದವರಿಗೆ ತಿಳಿದಿರುವುದರಿಂದ ಪರಸ್ಪರ ಮೌನ ಸಹಾನುಭೂತಿ ಇರುತ್ತಿತ್ತು. 
 
೧೯೭೦ರ ಸಮಯ-ಮೇ ತಿಂಗಳ ಜೋರು ಶೆಖೆ ದಿನಗಳಲ್ಲಿ ಒಂದು ದಿನ ಹುತ್ತುರ್ಕೆಯಲ್ಲಿನ ನಮ್ಮ ಮುಳಿಮನೆ ಬೆಂಕಿ ಬಿದ್ದು ಭಸ್ಮ ಆಯ್ತು. ಹಾಕಿಕೊಂಡ ಚಡ್ಡಿ ಕೋಮಣ ಉಳಿಯಿತಷ್ಟೆ, ಉಳಿದದ್ದೆಲ್ಲ ಅಗ್ನಿಗೆ ಆಹುತಿ ಆಯ್ತು. ಮೊದಲೇ ಬಡತನ, ಮೇಲೆ ಈ ದುರಂತ. ಸದಾ ಹಸನ್ಮುಖಿಯಾಗಿರುತ್ತಿದ್ದ ತಾನು ಎಷ್ಟೇ ಕಷ್ಟದಲ್ಲಿದ್ದರೂ ಅವುಗಳನ್ನು ತನ್ನಲ್ಲೆ ಇಟ್ಟುಕೊಂಡು ಮಕ್ಕಳ ಯಾ ಇತರರ ಎದುರು ಖುಷಿಯಾಗಿ ಇರುತ್ತಿದ್ದ ತಂದೆಯವರು ಆ ರಾತ್ರಿ ನನ್ನ ಮುಂದೆ ಗೋಳೋ ಎಂದು ಗೋಳಾಡಿದ್ದು ಇಂದಿಗೂ ಮರೆತಿಲ್ಲ. ನಾಲ್ಕು ದಿನಗಳ ಬಳಿಕ ವಿವೇಕ ಹೇಳಿದ-'ಚಿಕ್ಕಪ್ಪ ಮತ್ತೆ ಸಂಜೀವಮಾಮ್ ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅಳುತ್ತಿದ್ದರು. ಚಿಕ್ಕಪ್ಪನವರಿಗೆ ಎಷ್ಟು ಕಷ್ಟ ಆಗಿದೆ ಎಂದು ಇವರು ಕೇಳಲಿಲ್ಲಕೈಯ್ಯಲ್ಲಿ ಸ್ವಲ್ಪ ರೂಪಾಯಿ ನೋಟು ಹಿಡಕೊಂಡು ತಂದೆಯವರ ಅಂಗಿಕಿಸೆಯಲ್ಲಿ ತುರುಕಿದರು. ಅವನ್ನು ತೆಗೆದು ವಾಪಸು ಇವರ ಕಿಸೆಗೆ ಹಾಕಿದರು. ಹೀಗೆ ೨-೩ ಬಾರಿ ನಡೆಯಿತುಮಾತಿಲ್ಲ ಕತೆಯಿಲ್ಲಇಬ್ಬರೂ ಮನಸ್ಸು ತುಂಬಿಬಂದು ಪರಸ್ಪರ ಅಪ್ಪಿಕೊಂಡು ಅಳುತಿದ್ದರು. ಪ್ರೀತಿ ದೋಸ್ತಿ ಅಂದರೆ ಹೇಗೆ ನೋಡು, ಇಲ್ಲಿ ಹಣಕಾಸಿನ ವಿಷಯ ಬರುವುದಿಲ್ಲ.' ಎಷ್ಟು ಸರಿಯಾದ ಮಾತುಸಣ್ಣಸಣ್ಣ ಮಾತುಗಳು ವಿಚಾರಗಳು ಈಗ ನೆನಸಿಕೊಂಡಾಗ ಖುಶಿಉದ್ವೇಗಕೆಲವೊಮ್ಮೆ ಅಳು ಬರುತ್ತವೆ.
 
ಸಂಜೀವ ಪೈಗಳು ಒಮ್ಮೆ ತಮ್ಮ ಸುಖ ಕಷ್ಟ-ಹೆಚ್ಚಾಗಿ ಕಷ್ಟದ ಮಾತೇ ಜಾಸ್ತಿ- ಹೇಳಿಕೊಳ್ಳುತ್ತಿದ್ದರು, ''ನೋಡು ಕೇಶವಾ ಪ್ರಾಯ ಆಯ್ತು ಕೂತ್ರೆ ಏಳಲಿಕ್ಕೆ ಆಗುವುದಿಲ್ಲಎದ್ರೆ ಕೂತ್ಕೊಳ್ಲಿಕ್ಕೆ ಆಗುವುದಿಲ್ಲ'' ಎಂದು ತಾಪತ್ರಯ ಸುರು ಮಾಡಿದರು.
 
"ಅಲ್ಲ ಸಂಜೀವ ಮಾಮು ನೀವಿಲ್ಲದೆ ಹೆಬ್ರಿಯಲ್ಲಿ ಯಾವುದೇ ಕಾರ್ಯಕ್ರಮ ಆಗುದಿಲ್ಲ,  ಭಜನೆಮದುವೆಮುಂಜಿ ಅಥವಾ ಇತರೇ ಪ್ರೋಗ್ರಾಮ್ ಇರಲಿ ಸಂಜೀವ್ ಪೈಮಾಮ್ ಬಂದ್ರಾ? ಇಲ್ವಾ ಹಾಗಾದ್ರೆ ಅವ್ರು ಬರ್ಲಿ ಅಂತಾ ನೀವು ಬರುವ ವರೆಗೆ ಕಾದು ನಂತರ ಮುಂದುವರೆಯುವ ಕಾಲ ಇತ್ತು, ಒಳ್ಳೆಯ ಭಜನೆ ಹಾಡಬೇಕು ಸಂಜೀವ ಮಾಮ್, ಫಸ್ಟ್ ಕ್ಲಾಸ್ ಅಲಂಕಾರ ಆಗ್ಬೇಕು ಸಂಜೀವ ಮಾಮ್, ಪ್ರೋಗ್ರಾಮ್ ನಲ್ಲಿ ಲೈಟಿಂಗ್ ಆಗ್ಬೇಕು ಸಂಜೀವ ಪೈ, ಹೀಗೆ ನೀವು ಅನಿವಾರ್ಯ ಆಗಿದ್ದೀರಿ ಈಗ ಹೀಗೆ ಹೇಳಿದರೆ ಹೇಗೆ" ಎಂದೆ
 
ಒಮ್ಮೆ ತಮ್ಮಲ್ಲೆ ತನ್ಮಯರಾದರು-ಹಿಂದಿನ ದಿನಗಳ ನೆನಪಾಯ್ತು,ನಿಟ್ಟುಸಿರು ಬಿಟ್ಟರು ''ಹೌದು ಮಾರಾಯ ಪ್ರಾಯದ ದಿನಗಳು ಹಾಗೆಯೇ, ಇಷ್ಟೆಲ್ಲ ಮಾಡಿದ್ದೇನೆ ನೋಡು ಏನು ಹುರುಪಿತ್ತು ಆಗ!  ನಮ್ಮದೇ ದಾಯಾದಿಗಳು ನನಗೆ ತೊಂದರೆ ಮಾಡಲು ಬಹಳ ಕಷ್ಟ ಪಟ್ಟರು, ಆದರೂ ನಾನು ಜಗ್ಗಲಿಲ್ಲಈಗ ನೋಡು ಊಟಕ್ಕೆ ಕೂತರೆ ಎಬ್ಬಿಸಲು ಯಾರಾದರೂ ಬರಬೇಕುಕೈ ಎತ್ತಲು ಕಷ್ಟ ಆಗ್ತದೆ" ತುಂಬ ವ್ಯಥೆ ಪಟ್ಟರು.
 
ಹ ಹ್ಹಾ ಹ್ಹಾ ಎಂದು ನಗಾಡಿದೆ.ಬೇಜಾರು ಮಾಡಬೇಡಿ ನೆಗಾಡಿದ್ದಕ್ಕೆ ಎಂದೆ.ಈಗ ನನಗೆ ೬೧ ನಡೆಯುತ್ತಿದೆ ಕೂತರೆ ಏಳಲಿಕ್ಕಾಗುವುದಿಲ್ಲ, ಕೈ ಎತ್ತುವಾಗ ಕಳಕ್ ಆಗ್ತದೆಮೊನ್ನೆ ಸುಚ್ಚನತ್ರ (ಸುರೇಶ) ಹೇಳಿದೆ-ಹ ಹ್ಹಾ ಹ್ಹಾ ಎಂದ. ಸಾಕಲ್ವಾ ನನಗೆ!
 
ನಮ್ಮ ತಂದೆಯವರದು ಸಹ ಒಂದು ರೀತಿಯ ಸ್ವಭಾವ. ತಾನು ಬಹಳ ಘಟ್ಟಿ ಮನುಷ್ಯಕಲ್ಲು ತಿಂದು ಕರಗಿಸಿಕೊಂಡವಹಾಗೆ ಹೀಗೆ ಎಂದೆಲ್ಲ ತಲೆ ತುಂಬ ತುಂಬಿಕೊಂಡವರುಪ್ರಾಯದ ದಿನಗಳಲ್ಲಿ ಕಲ್ಲು ತಿಂದು ಕರಗಿಸಿಕೊಂಡಿರಬಹುದುಆದರೆ ಪ್ರಾಯ ಸಂದಂತೆ ಮನಸ್ಸು ಯುವಕರಂತೆ ಚುರುಕಿದ್ದರೂ ದೇಹ ಕೇಳಬೇಕಲ್ಲ. ಆರೋಗ್ಯ ವ್ಯತ್ಯಾಸವಾಗಿ ಹಾಸಿಗೆ ಹಿಡಿಯುವ ವರೆಗೆ ಅವರು ಮಾನಸಿಕವಾಗಿ ತರುಣರೇ ಆಗಿದ್ದರು. ಪೆರ್ಡೂರಿನಿಂದ ವಾಪಸು ಬಂದಾಗ ಮನೆಯ ಎದುರು ಜನ ಒಟ್ಟಾಗಿದ್ದರು. ಗಡಿಬಿಡಿಯಾಯ್ತು. ಜಗಲಿಯಲ್ಲಿ ಮಲಗಿದ್ದಾರೆ, ಡಾಕ್ಟ್ರು ಚೆಕ್ ಮಾಡ್ತಾ ಇದ್ದಾರೆ. "ಏನಿಲ್ಲ,ಸ್ವಲ್ಪ ಸುಸ್ತಾಗಿದೆ, ರೆಸ್ಟ್ ತೆಗೊಳ್ಳಿ" ಎಂದು ಮದ್ದು ಬರೆದು ಕೊಟ್ಟರು. ನನ್ನನ್ನು ಕರೆದು ಇವರನ್ನು ಕೂಡಲೇ ಮಣಿಪಾಲಕ್ಕೆ ತೋರಿಸಿ ಎಂದು ತಾಕೀತು ಮಾಡಿದರು. ಇವರು ಬರಬೇಕಲ್ಲಾ, ತನಗೆ ಎಂತದೂ ಧಾಡಿಯೂ ಆಗ್ಲಿಲ್ಲ, ಡಾಕ್ಟ್ರು ಎಲ್ಲ ಹಾಗೇ ಹೇಳುವುದು, ಸ್ವಲ್ಪ ಗ್ಯಾಸ್ ಅಷ್ಟೆ, ಎರಡು ವಾಯು ಮಾತ್ರೆ ತೆಕ್ಕೊಂಡರೆ ಎಲ್ಲ ಸರಿಯಾಗ್ತದೆ ಫುಸ್ ಎಂದು ಪುಕುಳಿಗೆ ಕೈ ಒರೆಸಿಕೊಂಡರು, ಡಾಕ್ಟ್ರು ಬರೆದುಕೊಟ್ಟ ಮಾತ್ರೆ ತೆಕೊಂಡ ಬಗ್ಗೆ ನನಗೆ ಇವತ್ತಿಗೂ ಡೌಟುಂಟು. ಮಕ್ಕಳ ಎದುರಿಗೆ ತನ್ನ (ವೀಕ್ ನೆಸ್) ಅಥವಾ ಅನಾರೋಗ್ಯದ ವಿಷಯ ಹೇಳಿದರೆ ತನ್ನ ದೊಡ್ಡಸ್ತಿಕೆ ಡೌನ್ ಆಗುತ್ತದೋ ಎಂಬ ಹೀನೈಸಿಕೆ. ಇದೊಂದು ಮಾನಸಿಕತೆ. ಇದೇ ಮೈಂಡ್ ಸೆಟ್ ಇದ್ದುದರಿಂದ ನನಗೂ ಅವರಿಗೂ ತುಂಬ ಸಲ ಚರ್ಚೆ ಜಗಳ ಆದದ್ದೂ ಉಂಟು. ನನ್ನ ಲೆಕ್ಕದಲ್ಲಿ ನನ್ನ ತಪ್ಪಿಲ್ಲದಿದ್ದರೂ ನೆಕ್ಸ್ಟ್ ದಿನ ನಾನೇ ಹೋಗಿ ತಪ್ಪು ಮಾಫಿ ಕೇಳಿಕೊಂಡಿದ್ದೇನೆ. ತನ್ನ ಆರೋಗ್ಯದ ಬಗ್ಗೆ ಡೋಂಟ್ ಕೇರ್ ಇದ್ದವರು ಊರಿನ ಇತರರ ಅಸೌಖ್ಯದ ಮಾತು ಬಂದಾಗ ಖುದ್ದು ಹೋಗಿ ಯಾ ನಮ್ಮನ್ನು ಕಳಿಸಿ ವಿಚಾರಿಸುತ್ತಿದ್ದರು. ಊರಲ್ಲಿ ಯಾರದ್ದೇ ಸಾವು ಆಗಲಿ ನಂತರದ ಕಾರ್ಯಗಳಿಗೆ ತುರ್ತು ಪ್ರಾರಂಭಮಾಡುತ್ತಿದ್ದರು, 

ನನ್ನ ನೆನಪಿನಂತೆ ಶಿವರಾಯ ಶೆಣೈಯವರ ಕಿರಿಮಗಳು ಮರದಿಂದ ಬಿದ್ದು ಕೈ ಮುರುಕೊಂಡು ಗುಣ ಆಗದೆ ಸುಮಾರು ೧ ವರ್ಷಕ್ಕಿಂತಲೂ ಮಿಕ್ಕಿ ನರಳಿ ಮುಕ್ತಳಾದಳು. ಮನೆಯಲ್ಲಿ ಗೋಳಾಟವೋ ಗೋಳಾಟ. ಸಹಜವೇ. ಊರಿನವರೆಲ್ಲರು ಬಂದು ಸಮಾಧಾನ ಹೇಳುತ್ತ ಇರುವಲ್ಲಿ ಇವರು ಬಂದು ಹೆಣ ಸಾಗಿಸುವ ವ್ಯವಸ್ಥೆ ಮಾಡ ತೊಡಗಿದರು. ನನಗೆ ಸ್ವಲ್ಪ ಅಸಮಾಧಾನ ಆಯ್ತು. ಕಡೆಗೆ ಈ ವಿಷಯ ಎತ್ತಿದಾಗ "ಮನೆಯವರ ದುಃಖಕ್ಕೆ ಕೊನೆ ಇರುವುದಿಲ್ಲ ಅದೂ ಮಕ್ಕಳು ತೀರಿಕೊಂಡರೆ ಇನ್ನೂ ಕಷ್ಟ, ಹಾಗಂತ ಅವರ ರೋದನ ಮುಗಿಯುವ ವರೆಗೆ ಕಾಯುತ್ತ ಕೂತರೆ ಹೆಣದ ವಿಲೇವಾರಿ ಕಡೆಗೆ ಅವರೇ ಮಾಡಬೇಕಾಗ್ತದೆ ಗೊತ್ತಾಯ್ತಾ, ಭಾವನೆ, ಅನುಕಂಪ ನಿನ್ನಷ್ಟೇ ನನಗೂ ಉಂಟು, ಸ್ವಲ್ಪ ವಾಸ್ತವಿಕತೆಯತ್ತ ಮನಸ್ಸು ಕೊಡು" ಹೌದೆಂದು ನನಗೂ ಅಂದಾಜಾಯ್ತು. ಘಟ್ಟಿ ಮನಸ್ಸಿನ ತಂದೆಯವರು ಕೊನೆ ಸಮಯದಲ್ಲಿ ಡಿಪ್ರೆಶ್ಯನ್ ಆಗಿ ವರ್ಷಾವದಿ ಅನುಭವಿಸಬೇಕಾಯ್ತಲ್ಲ! ವಿಚಿತ್ರ!

Friday, February 18, 2011

Sweet memories

ಮದುವೆ..ಮದುವೆ..."
"
"

"



"
"
"
"
ನಮ್ಮ ವಾಸುದೇವ ಭಾವಜಿಯ ತಂಗಿಯನ್ನು ನಿನಗೆ ಕೊಡುವ ಇರಾದೆ ಇದೆ.ನಿನ್ನ ಒಪ್ಪಿಗೆ ಬೇಕು,ಹೇಗೆ?" ಸಂಜೆ ಹೈಸ್ಕೂಲ್ ದಾರಿಯಲ್ಲಿ ವಾಕಿಂಗ್ ಹೋಗುವಾಗ ಮುಕುಂದನಿಂದ ಪ್ರಸ್ತಾವ ಬಂತು.ಅಂದರೆ ನಿಮ್ಮಲ್ಲಿ ಮಧ್ಯಾಹ್ನ ಊಟಕ್ಕೆ ಇರುತ್ತಿದ್ದಳಲ್ಲ ಅವಳೇ?"ಹೌದು"ಕೆಲವು ಸಮಯದ ಅವನ ಮದುವೆಯ ಸಮಯದಲ್ಲಿ ಅವಳನ್ನು ನೋಡಿದ್ದೆ.ಕವಿಗಳು ವರ್ಣಿಸುತ್ತಾರಲ್ಲ,ಹಾಗೆ ಕಂಡಿದ್ದಳು.ಕಣ್ಣು-ಮನಸ್ಸು ಅವಳ ಹಿಂದೆ ಹಿಂದೆ ಹೋಗುತ್ತಿದ್ದವು.ಮದುವೆಯಲ್ಲಿ ಹೆಚ್ಚಿನ ಸ್ವಾರಸ್ಯ ಉಳಿಯಲಿಲ್ಲ.ಹರಟೆಮಲ್ಲನು ಮಾತುಕತೆಗಳಲ್ಲಿ ವ್ಯಸ್ತನಾಗದೆ ಇದ್ದೆ.ಇದರ ವಾಸನೆ ಪಿ.ಬಿ.ವಿ.ಕಾಮತರಿಗೆ ಹೊಡೆಯಿತು.ಹೇಗೆ? ಒಂದೇ ಕಡೆ ಲೈನು ಹೊಡೀತಾ ಇದ್ದಿ! ಹುಡುಗಿ ನಮ್ಮ ಗುರುತಿನವಳೆ,ಮಾತುಕತೆ ಸುರುಮಾಡುವನಾ ಎಂತದು?"ಕುಶಾಲು ಮಾಡಿದರು.ಕಾಮತರು ವಿಷಯಮಂಡನೆ ಇಟ್ಟಿದ್ದರೊ ಗೊತ್ತಿಲ್ಲ,ಪ್ರಸ್ತಾವ ಅಂತೂ ಬಂದಿದೆ,ನಾನೂ ಮದುವೆ ಪ್ರಾಯದವನೇ,ಮನೆಯಲ್ಲೂ ಒತ್ತಡ ಒತ್ತಾಯಗಳಿದ್ದವು. ಮನಸ್ಸೂ ಆ ಯುವತಿಯನ್ನು ಒಲಿದಿತ್ತು.ಆದರೂ ದಾಕ್ಶಿಣ್ಯಕ್ಕೋ,ದೊಡ್ಡಸ್ತಿಕೆಗೋ ಎಂಬಂತೆ ಆಗಲಿ ನೋಡೋಣ ಎಂದೆ.ಮುಕುಂದನೂ ಸೂಕ್ಷ್ಮ ಅರಿತವನೇ.ನಿನ್ನ ಒಪ್ಪಿಗೆಯನ್ನು ಭಾವನಿಗೆ ತಿಳಿಸುತ್ತೇನೆಂದ.ಮುಂದಿನ ಮಾತುಕತೆಗಳು ಶೀಘ್ರವಾಗಿ ನಡೆದವು.ನನ್ನ ಮದ್ವೆಗೆ ನಾನು ಖರ್ಚು ಮಾಡುವ ಬಾಬ್ತು ಬರಬಾರದು ನೋಡು ಎಂದಿದ್ದೆ.ಆ ಪ್ರಯುಕ್ತ ಹತ್ತು ಸಾವಿರ ರೂ.ಗಳನ್ನು ಹೆಣ್ಣಿನ ಮನೆಯವರು ಕೊಡುವುದು ಮತ್ತು ನಾವು ಮದುಮಗಳಿಗೆ ಬೇಕಾಗುವ ನಗ ಸೀರೆ ಇತ್ಯಾದಿಗಳನ್ನು ಒಯ್ಯುವುದು ಎಂದು ಮಾತು ಆಯ್ತು.ಈ ಮಧ್ಯೆ ನಿಶ್ಥಿತಾರ್ಥ ನಡೆಯಬೇಕೆಂದು ಅಜೆಕಾರಿನಿಂದ ರಿಕ್ವೆಸ್ಟ್ ಬಂತು.ಮದುವೆಗೆ ಒಪ್ಪಿ ಕೊಡುತೆಗೆದುಕೊಳ್ಳುವ ಮಾತುಕತೆ ಮುಗಿಸಿದ ಮೇಲೆ ಈಗ ಪುನಃ ನಿಶ್ಥಿತಾರ್ಥ ಏಕೆ? ಆದಷ್ಟು ಅಚ್ಚುಕಟ್ಟಿನಲ್ಲಿ ಲಗ್ನ ಕಾರ್ಯ ಮಾಡಬೇಕೆಂದು ಸೂಚನೆ ಇದ್ದು ಈಗ ಎಂಗೇಜ್ ಮೆಂಟ್ ಅಗತ್ಯ ಇರಲಿಲ್ಲ ಎಂದು ನನ್ನ ವಿಚಾರ.ಆದರೂ ಎಂಗೇಜ್ ಮೆಂಟ್ ಕಾರ್ಯಕ್ರಮ ನಡೆಯಿತು.ಏನಾದರೂ ಮಾತುಕತೆ ಇದ್ದರೆ ಆಗಲಿ ಎಂದರು ಭಟ್ಟರು."ಹತ್ತು ಸಾವಿರ ರೂಪಾಯಿ ಮತ್ತು ನಾಲ್ಕು ಬಳೆ ಹಾಕಿಕೊಡಿ" ಎಂದರು ತಂದೆಯವರು.ಮೊದಲು ನಿರ್ಣಯವಾದುದಕ್ಕಿಂತ ನಾಲ್ಕು ಬಳೆ ಜಾಸ್ತಿ ಹೇಗಾಯ್ತು ಎಂದು ನನಗೆ ಅಚ್ಚರಿಯಾಯ್ತು. ಆದರೆ ಹೆಣ್ಣಿನ ಕಡೆಯವರಿಂದ ಹೆಚ್ಚಿನ ಯಾವುದೇ ತಕರಾರು ಬಾರದಿದ್ದುದರಿಂದ ನಾನೂ ತೆಪ್ಪಗಾದೆ.ಮನಸ್ಸಿನಲ್ಲಿ ಮಾತಿಗೆ ತಪ್ಪಿದೆವಲ್ಲಾ ಎಂಬ ಸಣ್ಣ ತಪ್ಪು ಭಾವನೆ ಕೊಂಚ ಕಾಲ ಇತ್ತು.ಅದೇ ಆಲೋಚನೆಯಿಂದಲೇ ತಂದೆಯವರಲ್ಲಿ ಕೇಳಿದಾಗ "ನೀನು ಹೆಚ್ಚು ಮಂಡೆಬಿಸಿ ಮಾಡಬೇಡ ನಾನೆಲ್ಲ ಸರಿ ಮಾಡುತ್ತೇನೆ. ಹುಡುಗಿ ಕಡೆಯವರಿಗೇ ಚಿಂತೆ ಇಲ್ಲ,ನಿನ್ನದೆಂತ ತಕರಾರು"ಎಂದರು.ಜನ್ಮದಲ್ಲಿ ಪರ್ಸು ಇಲ್ಲದೆ ತಿರುಗುತ್ತಿದ್ದ ಕೇಶವ ನಾಯ್ಕ ಈಗ ಒಂದು ಹೊಸಾ ಪರ್ಸು ತಕ್ಕೊಂಡು ಅದರಲ್ಲಿ ಒಬ್ಬ ಸುಂದರಿಯ ಫೋಟೋ ಹಾಕಿ ತಿರುಗಲಾರಂಭಿಸಿದ.ದೋಸ್ತಿಗಳಿಗೆ ಫೋಟೋ ತೋರಿಸಿ ಮೆಚ್ಚುಗೆ ಪಡೆದೂ ಆಯ್ತು.ಹೆಂಡತಿಯಾಗಿ ಬರುವವಳು ತುಂಬಾ ಚಂದದವಳು ಎಂಬ ಹೆಮ್ಮೆಯೂ ಆಗಲಾರಂಭಿಸಿತು.ಗೆಳೆಯ ನರಸಿಂಹ ನಾಯಕರಿಗೆ ಪಟ ತೋರಿಸಿದಾಗ ಶಹಭಾಶ್ ಗಿರಿ ಕೊಟ್ಟರು. ಆಗ ಮಾಲತಿಯು ಅಲ್ಲೇ ಕೆಲಸಮಾಡುತ್ತಿದ್ದಳು.ಆ ಸಮಯದಲ್ಲಿ ಅವಳ ಬಳಿ ಮಾತನಾಡಲಿಲ್ಲ.ಹೇಗೂ ಹೆಬ್ರಿ ಬ್ರಾಂಚಿಗೆ ಬರುತ್ತಾಳಲ್ಲವೇ ನೋಡುವ ಎಂದೂ,ಸ್ವಲ್ಪ ಸಂಕೋಚವೂ ಆದುದರಿಂದ ಅವಳೊಡನೆ ಮಾತಾಡಲಿಲ್ಲ.ಅದೇ ರೀತಿ ಅವಳಿಗೆ ಹೆಬ್ರಿಗೇ ವರ್ಗವಾಯ್ತು.ನಮ್ಮಲ್ಲಿ ನಡೆಯುವ ಲವ್ ಲೆಟರ್ ಗಳ ಪೋಸ್ಟ್ ಮೇನ್ ಅವಳೆ.ಹೌದಾ ದೇವು ನಿನ್ನ ಮಗನಿಗೆ ಹುಡುಗಿ ನಿಶ್ಚಯ ಆಯ್ತಂತೆ?" ಶಾಂತಮಾಯಿ ವಿಚಾರಿಸಿದರು.ಹೌದು ಅಜೆಕಾರು ಕಿಣಿಯರ ಮಗಳು"ಏನು ಮಾತುಕತೆ ಅಡಿದ್ದೀರಿ?"ನಮ್ಮದು ಭಾಳ ಸಿಂಪಲ್.ಹತ್ತು ಸಾವಿರದ ಕಟ್ಟು ಈಚೆ ಕೈಯಿಂದ ತೆಕ್ಕೊಳ್ಳುವುದು.ಆಚೆಬದಿಯಿಂದ ಹೊರಣ ಹೋಗುವುದು.ಹುಡುಗಿ ಕಾಪ್ಪಡ ಭಾಂಗರ ಎಲ್ಲ ನಮ್ಮದೇ" ತಂದೆಯವರೆಂದಾಗ"

"
"
---------

ನೀನೊಬ್ಬ ಬೋದಾಳ ಶಂಕರ ನೋಡು.ನಾಲ್ಕು ಕಾಂಕಣ ಹೇಳು.ಅವರ ತಮ್ಮಂದಿರು ಬೇಂಕಿನಲ್ಲಿ ದೊಡ್ಡ ದೊಡ್ಡ ಕೆಲಸದಲ್ಲಿದ್ದಾರೆ.ಏನೂ ಕಮ್ಮಿ ಇಲ್ಲ.ತಂಗಿಗೆ ಅಂತ ಕೊಡ್ತಾರೆ."ಶಾಂತಮಾಯಿ ವಕಾಲತು ಮಾಡಿದರು.ಎಕ್ಸ್ ಟ್ರಾ ನಾಲ್ಕು ಬಳೆಗಳ ಕತೆ ಮದುವೆ ಆದ ಅನೇಕ ದಿನಗಳ ನಂತರ ತಿಳಿಯಿತು.೧೯೭೦ರ ದಶಕ.ಜೀವನ ಅಷ್ಟೇನೂ ಕಷ್ಟಕರವಲ್ಲದಿದ್ದರೂ ಬಹಳ ಸುಖ ಸಂಪತ್ತಿನದ್ದಾಗಿರಲಿಲ್ಲ.ಎಲ್ಲರೂ ತುಂಬಾ ಆಯ್ಕಟ್ಟು ಮಾಡಿ ದಿನ ಕಳೆಯುವ ಸಮಯ.ಅದ್ದೂರಿಯ ಕಾರ್ಯಕ್ರಮಗಳು ತೀರಾ ಕಡಿಮೆ."ನಿಮ್ಮ ದಿಬ್ಬಣ ಎಷ್ಟು?" ವಾಸುದೇವ ಕಿಣಿಯವರು ತಂದೆಯರಲ್ಲಿ ವಿಚಾರಿಸಿದರು.ನಮ್ಮದು ಅಂತ ದೊಡ್ಡ ದಿಬ್ಬಣ ಇಲ್ಲ. ಹೆಚ್ಚೆಂದರೆ ಎಪ್ಪತ್ತೈದರಿಂದ ನೂರು"ತಂದೆಯವರದ್ದು ಸುಧಾರಣೆಯ ಉತ್ತರ.ನಾನಾಗ ಅಲ್ಲೇ ಇದ್ದೆ. ಕಿಣಿಯವರನ್ನು ಈಚೆಗೆ ಕರೆದು "ತಂದೆಯವರು ಹೇಳಿದ್ದು ಅವರ ಲೆಕ್ಕ.ಆದರೆ ನೋಡಿ ನಾವು ಊರಿನಲ್ಲಿ ಎಲ್ಲರ ಗೆಳೆಯರು.ಇದುವರೆಗೆ ನಮ್ಮನ್ನು ಎಲ್ಲರೂ ತಮ್ಮ ಶುಭಕಾರ್ಯಕ್ರಮಗಳಿಗೆ ಆಮಂತ್ರಿಸಿದ್ದಾರೆ.ಹಾಗಾಗಿ ನಾವು ಯಾರನ್ನೂ ಬಿಡುವ ಹಾಗಿಲ್ಲ.ಆದ್ದರಿಂದ ನಮ್ಮ ದಿಬ್ಬಣ ಸ್ವಲ್ಪ ದೊಡ್ಡದೇ ಇರ್ತದೆ.ಮೇಲಾಗಿ ಆದಿನ ಬುಧವಾರ ಬೇರೆ.ಊರಿಗೆ ರಜೆ ಇರುತ್ತದೆ,ಹೇಳಿಕೆ ಇದ್ದವರೆಲ್ಲ ಬರ್ತಾರೆ.ಅದಕ್ಕೆ ಸರಿಯಾಗಿ ವ್ಯವಸ್ಥೆ ಮಾಡಿ." ಎಂದೆ.ನೀನು ಹೇಳಿದ ಹಾಗೆ ಆಯ್ತು ಮಾರಾಯಾ!.ಆ ನಾಣ್ಣು ಹೆಬ್ರಿಯವರಿಗೆಲ್ಲ ಆದಿನ ಟಿಕೆಟು ಬರೆದು ಕೊಟ್ಟದ್ದೆ ಕೊಟ್ಟದ್ದು.ಇಡೀ ಹೆಬ್ರಿ ಪೇಟೆ ಮದುವೆಗೆ ಬಂದಿತ್ತು.ಮೂನಿಯಲಿನಲ್ಲಿ ಮಾಡಿದರೆ ಎಲ್ಲರಿಗೂ ಹೇಳಿಕೆ ಮಾಡಬೇಕು.ಆ ರಗಳೆಯೇ ಬೇಡ ಎಂದು ಸೋಮೇಶ್ವರದಲ್ಲಿ ಮದುವೆ ಇಡಿಸಿದ್ದು.ಇದು ನೋಡಿದ್ರೆ ಒಂದಕ್ಕೆ ಡಬ್ಬಲ್ ಆಯ್ತು." ವಾಸುದೇವ ಭಾವಜಿಯವರು ಮದುವೆ ನಂತರ ಕುಶಾಲು ಮಾಡಿದರು."ಹಾಗೆಲ್ಲ ಎಂತ ಹೇಳುವುದು ನೀವು?ಅವರ ಮನೆಯವರು ಎಲ್ಲರಿಗೂ ಬೇಕಾದವರು,ಎಲ್ಲರನ್ನು ಕರೆದಿದ್ದಾರೆ" ಅನುಸೂಯಕ್ಕ ಅವರನ್ನು ಸಣ್ಣಗೆ ಕುಟುಕಿದರು.ಆ ದಿನಗಳಲ್ಲಿ ಖರ್ಚಿನಲ್ಲಿ ಎಲ್ಲೆಲ್ಲಿ ಉಳಿತಾಯ ಆಗ್ತದೋ ಅಲ್ಲಿ ಉಳಿಸಲು ಎಲ್ಲರೂ ಯತ್ನಿಸುತ್ತಿದ್ದರು.---------