Friday, February 18, 2011

Sweet memories

ಮದುವೆ..ಮದುವೆ..."
"
"

"



"
"
"
"
ನಮ್ಮ ವಾಸುದೇವ ಭಾವಜಿಯ ತಂಗಿಯನ್ನು ನಿನಗೆ ಕೊಡುವ ಇರಾದೆ ಇದೆ.ನಿನ್ನ ಒಪ್ಪಿಗೆ ಬೇಕು,ಹೇಗೆ?" ಸಂಜೆ ಹೈಸ್ಕೂಲ್ ದಾರಿಯಲ್ಲಿ ವಾಕಿಂಗ್ ಹೋಗುವಾಗ ಮುಕುಂದನಿಂದ ಪ್ರಸ್ತಾವ ಬಂತು.ಅಂದರೆ ನಿಮ್ಮಲ್ಲಿ ಮಧ್ಯಾಹ್ನ ಊಟಕ್ಕೆ ಇರುತ್ತಿದ್ದಳಲ್ಲ ಅವಳೇ?"ಹೌದು"ಕೆಲವು ಸಮಯದ ಅವನ ಮದುವೆಯ ಸಮಯದಲ್ಲಿ ಅವಳನ್ನು ನೋಡಿದ್ದೆ.ಕವಿಗಳು ವರ್ಣಿಸುತ್ತಾರಲ್ಲ,ಹಾಗೆ ಕಂಡಿದ್ದಳು.ಕಣ್ಣು-ಮನಸ್ಸು ಅವಳ ಹಿಂದೆ ಹಿಂದೆ ಹೋಗುತ್ತಿದ್ದವು.ಮದುವೆಯಲ್ಲಿ ಹೆಚ್ಚಿನ ಸ್ವಾರಸ್ಯ ಉಳಿಯಲಿಲ್ಲ.ಹರಟೆಮಲ್ಲನು ಮಾತುಕತೆಗಳಲ್ಲಿ ವ್ಯಸ್ತನಾಗದೆ ಇದ್ದೆ.ಇದರ ವಾಸನೆ ಪಿ.ಬಿ.ವಿ.ಕಾಮತರಿಗೆ ಹೊಡೆಯಿತು.ಹೇಗೆ? ಒಂದೇ ಕಡೆ ಲೈನು ಹೊಡೀತಾ ಇದ್ದಿ! ಹುಡುಗಿ ನಮ್ಮ ಗುರುತಿನವಳೆ,ಮಾತುಕತೆ ಸುರುಮಾಡುವನಾ ಎಂತದು?"ಕುಶಾಲು ಮಾಡಿದರು.ಕಾಮತರು ವಿಷಯಮಂಡನೆ ಇಟ್ಟಿದ್ದರೊ ಗೊತ್ತಿಲ್ಲ,ಪ್ರಸ್ತಾವ ಅಂತೂ ಬಂದಿದೆ,ನಾನೂ ಮದುವೆ ಪ್ರಾಯದವನೇ,ಮನೆಯಲ್ಲೂ ಒತ್ತಡ ಒತ್ತಾಯಗಳಿದ್ದವು. ಮನಸ್ಸೂ ಆ ಯುವತಿಯನ್ನು ಒಲಿದಿತ್ತು.ಆದರೂ ದಾಕ್ಶಿಣ್ಯಕ್ಕೋ,ದೊಡ್ಡಸ್ತಿಕೆಗೋ ಎಂಬಂತೆ ಆಗಲಿ ನೋಡೋಣ ಎಂದೆ.ಮುಕುಂದನೂ ಸೂಕ್ಷ್ಮ ಅರಿತವನೇ.ನಿನ್ನ ಒಪ್ಪಿಗೆಯನ್ನು ಭಾವನಿಗೆ ತಿಳಿಸುತ್ತೇನೆಂದ.ಮುಂದಿನ ಮಾತುಕತೆಗಳು ಶೀಘ್ರವಾಗಿ ನಡೆದವು.ನನ್ನ ಮದ್ವೆಗೆ ನಾನು ಖರ್ಚು ಮಾಡುವ ಬಾಬ್ತು ಬರಬಾರದು ನೋಡು ಎಂದಿದ್ದೆ.ಆ ಪ್ರಯುಕ್ತ ಹತ್ತು ಸಾವಿರ ರೂ.ಗಳನ್ನು ಹೆಣ್ಣಿನ ಮನೆಯವರು ಕೊಡುವುದು ಮತ್ತು ನಾವು ಮದುಮಗಳಿಗೆ ಬೇಕಾಗುವ ನಗ ಸೀರೆ ಇತ್ಯಾದಿಗಳನ್ನು ಒಯ್ಯುವುದು ಎಂದು ಮಾತು ಆಯ್ತು.ಈ ಮಧ್ಯೆ ನಿಶ್ಥಿತಾರ್ಥ ನಡೆಯಬೇಕೆಂದು ಅಜೆಕಾರಿನಿಂದ ರಿಕ್ವೆಸ್ಟ್ ಬಂತು.ಮದುವೆಗೆ ಒಪ್ಪಿ ಕೊಡುತೆಗೆದುಕೊಳ್ಳುವ ಮಾತುಕತೆ ಮುಗಿಸಿದ ಮೇಲೆ ಈಗ ಪುನಃ ನಿಶ್ಥಿತಾರ್ಥ ಏಕೆ? ಆದಷ್ಟು ಅಚ್ಚುಕಟ್ಟಿನಲ್ಲಿ ಲಗ್ನ ಕಾರ್ಯ ಮಾಡಬೇಕೆಂದು ಸೂಚನೆ ಇದ್ದು ಈಗ ಎಂಗೇಜ್ ಮೆಂಟ್ ಅಗತ್ಯ ಇರಲಿಲ್ಲ ಎಂದು ನನ್ನ ವಿಚಾರ.ಆದರೂ ಎಂಗೇಜ್ ಮೆಂಟ್ ಕಾರ್ಯಕ್ರಮ ನಡೆಯಿತು.ಏನಾದರೂ ಮಾತುಕತೆ ಇದ್ದರೆ ಆಗಲಿ ಎಂದರು ಭಟ್ಟರು."ಹತ್ತು ಸಾವಿರ ರೂಪಾಯಿ ಮತ್ತು ನಾಲ್ಕು ಬಳೆ ಹಾಕಿಕೊಡಿ" ಎಂದರು ತಂದೆಯವರು.ಮೊದಲು ನಿರ್ಣಯವಾದುದಕ್ಕಿಂತ ನಾಲ್ಕು ಬಳೆ ಜಾಸ್ತಿ ಹೇಗಾಯ್ತು ಎಂದು ನನಗೆ ಅಚ್ಚರಿಯಾಯ್ತು. ಆದರೆ ಹೆಣ್ಣಿನ ಕಡೆಯವರಿಂದ ಹೆಚ್ಚಿನ ಯಾವುದೇ ತಕರಾರು ಬಾರದಿದ್ದುದರಿಂದ ನಾನೂ ತೆಪ್ಪಗಾದೆ.ಮನಸ್ಸಿನಲ್ಲಿ ಮಾತಿಗೆ ತಪ್ಪಿದೆವಲ್ಲಾ ಎಂಬ ಸಣ್ಣ ತಪ್ಪು ಭಾವನೆ ಕೊಂಚ ಕಾಲ ಇತ್ತು.ಅದೇ ಆಲೋಚನೆಯಿಂದಲೇ ತಂದೆಯವರಲ್ಲಿ ಕೇಳಿದಾಗ "ನೀನು ಹೆಚ್ಚು ಮಂಡೆಬಿಸಿ ಮಾಡಬೇಡ ನಾನೆಲ್ಲ ಸರಿ ಮಾಡುತ್ತೇನೆ. ಹುಡುಗಿ ಕಡೆಯವರಿಗೇ ಚಿಂತೆ ಇಲ್ಲ,ನಿನ್ನದೆಂತ ತಕರಾರು"ಎಂದರು.ಜನ್ಮದಲ್ಲಿ ಪರ್ಸು ಇಲ್ಲದೆ ತಿರುಗುತ್ತಿದ್ದ ಕೇಶವ ನಾಯ್ಕ ಈಗ ಒಂದು ಹೊಸಾ ಪರ್ಸು ತಕ್ಕೊಂಡು ಅದರಲ್ಲಿ ಒಬ್ಬ ಸುಂದರಿಯ ಫೋಟೋ ಹಾಕಿ ತಿರುಗಲಾರಂಭಿಸಿದ.ದೋಸ್ತಿಗಳಿಗೆ ಫೋಟೋ ತೋರಿಸಿ ಮೆಚ್ಚುಗೆ ಪಡೆದೂ ಆಯ್ತು.ಹೆಂಡತಿಯಾಗಿ ಬರುವವಳು ತುಂಬಾ ಚಂದದವಳು ಎಂಬ ಹೆಮ್ಮೆಯೂ ಆಗಲಾರಂಭಿಸಿತು.ಗೆಳೆಯ ನರಸಿಂಹ ನಾಯಕರಿಗೆ ಪಟ ತೋರಿಸಿದಾಗ ಶಹಭಾಶ್ ಗಿರಿ ಕೊಟ್ಟರು. ಆಗ ಮಾಲತಿಯು ಅಲ್ಲೇ ಕೆಲಸಮಾಡುತ್ತಿದ್ದಳು.ಆ ಸಮಯದಲ್ಲಿ ಅವಳ ಬಳಿ ಮಾತನಾಡಲಿಲ್ಲ.ಹೇಗೂ ಹೆಬ್ರಿ ಬ್ರಾಂಚಿಗೆ ಬರುತ್ತಾಳಲ್ಲವೇ ನೋಡುವ ಎಂದೂ,ಸ್ವಲ್ಪ ಸಂಕೋಚವೂ ಆದುದರಿಂದ ಅವಳೊಡನೆ ಮಾತಾಡಲಿಲ್ಲ.ಅದೇ ರೀತಿ ಅವಳಿಗೆ ಹೆಬ್ರಿಗೇ ವರ್ಗವಾಯ್ತು.ನಮ್ಮಲ್ಲಿ ನಡೆಯುವ ಲವ್ ಲೆಟರ್ ಗಳ ಪೋಸ್ಟ್ ಮೇನ್ ಅವಳೆ.ಹೌದಾ ದೇವು ನಿನ್ನ ಮಗನಿಗೆ ಹುಡುಗಿ ನಿಶ್ಚಯ ಆಯ್ತಂತೆ?" ಶಾಂತಮಾಯಿ ವಿಚಾರಿಸಿದರು.ಹೌದು ಅಜೆಕಾರು ಕಿಣಿಯರ ಮಗಳು"ಏನು ಮಾತುಕತೆ ಅಡಿದ್ದೀರಿ?"ನಮ್ಮದು ಭಾಳ ಸಿಂಪಲ್.ಹತ್ತು ಸಾವಿರದ ಕಟ್ಟು ಈಚೆ ಕೈಯಿಂದ ತೆಕ್ಕೊಳ್ಳುವುದು.ಆಚೆಬದಿಯಿಂದ ಹೊರಣ ಹೋಗುವುದು.ಹುಡುಗಿ ಕಾಪ್ಪಡ ಭಾಂಗರ ಎಲ್ಲ ನಮ್ಮದೇ" ತಂದೆಯವರೆಂದಾಗ"

"
"
---------

ನೀನೊಬ್ಬ ಬೋದಾಳ ಶಂಕರ ನೋಡು.ನಾಲ್ಕು ಕಾಂಕಣ ಹೇಳು.ಅವರ ತಮ್ಮಂದಿರು ಬೇಂಕಿನಲ್ಲಿ ದೊಡ್ಡ ದೊಡ್ಡ ಕೆಲಸದಲ್ಲಿದ್ದಾರೆ.ಏನೂ ಕಮ್ಮಿ ಇಲ್ಲ.ತಂಗಿಗೆ ಅಂತ ಕೊಡ್ತಾರೆ."ಶಾಂತಮಾಯಿ ವಕಾಲತು ಮಾಡಿದರು.ಎಕ್ಸ್ ಟ್ರಾ ನಾಲ್ಕು ಬಳೆಗಳ ಕತೆ ಮದುವೆ ಆದ ಅನೇಕ ದಿನಗಳ ನಂತರ ತಿಳಿಯಿತು.೧೯೭೦ರ ದಶಕ.ಜೀವನ ಅಷ್ಟೇನೂ ಕಷ್ಟಕರವಲ್ಲದಿದ್ದರೂ ಬಹಳ ಸುಖ ಸಂಪತ್ತಿನದ್ದಾಗಿರಲಿಲ್ಲ.ಎಲ್ಲರೂ ತುಂಬಾ ಆಯ್ಕಟ್ಟು ಮಾಡಿ ದಿನ ಕಳೆಯುವ ಸಮಯ.ಅದ್ದೂರಿಯ ಕಾರ್ಯಕ್ರಮಗಳು ತೀರಾ ಕಡಿಮೆ."ನಿಮ್ಮ ದಿಬ್ಬಣ ಎಷ್ಟು?" ವಾಸುದೇವ ಕಿಣಿಯವರು ತಂದೆಯರಲ್ಲಿ ವಿಚಾರಿಸಿದರು.ನಮ್ಮದು ಅಂತ ದೊಡ್ಡ ದಿಬ್ಬಣ ಇಲ್ಲ. ಹೆಚ್ಚೆಂದರೆ ಎಪ್ಪತ್ತೈದರಿಂದ ನೂರು"ತಂದೆಯವರದ್ದು ಸುಧಾರಣೆಯ ಉತ್ತರ.ನಾನಾಗ ಅಲ್ಲೇ ಇದ್ದೆ. ಕಿಣಿಯವರನ್ನು ಈಚೆಗೆ ಕರೆದು "ತಂದೆಯವರು ಹೇಳಿದ್ದು ಅವರ ಲೆಕ್ಕ.ಆದರೆ ನೋಡಿ ನಾವು ಊರಿನಲ್ಲಿ ಎಲ್ಲರ ಗೆಳೆಯರು.ಇದುವರೆಗೆ ನಮ್ಮನ್ನು ಎಲ್ಲರೂ ತಮ್ಮ ಶುಭಕಾರ್ಯಕ್ರಮಗಳಿಗೆ ಆಮಂತ್ರಿಸಿದ್ದಾರೆ.ಹಾಗಾಗಿ ನಾವು ಯಾರನ್ನೂ ಬಿಡುವ ಹಾಗಿಲ್ಲ.ಆದ್ದರಿಂದ ನಮ್ಮ ದಿಬ್ಬಣ ಸ್ವಲ್ಪ ದೊಡ್ಡದೇ ಇರ್ತದೆ.ಮೇಲಾಗಿ ಆದಿನ ಬುಧವಾರ ಬೇರೆ.ಊರಿಗೆ ರಜೆ ಇರುತ್ತದೆ,ಹೇಳಿಕೆ ಇದ್ದವರೆಲ್ಲ ಬರ್ತಾರೆ.ಅದಕ್ಕೆ ಸರಿಯಾಗಿ ವ್ಯವಸ್ಥೆ ಮಾಡಿ." ಎಂದೆ.ನೀನು ಹೇಳಿದ ಹಾಗೆ ಆಯ್ತು ಮಾರಾಯಾ!.ಆ ನಾಣ್ಣು ಹೆಬ್ರಿಯವರಿಗೆಲ್ಲ ಆದಿನ ಟಿಕೆಟು ಬರೆದು ಕೊಟ್ಟದ್ದೆ ಕೊಟ್ಟದ್ದು.ಇಡೀ ಹೆಬ್ರಿ ಪೇಟೆ ಮದುವೆಗೆ ಬಂದಿತ್ತು.ಮೂನಿಯಲಿನಲ್ಲಿ ಮಾಡಿದರೆ ಎಲ್ಲರಿಗೂ ಹೇಳಿಕೆ ಮಾಡಬೇಕು.ಆ ರಗಳೆಯೇ ಬೇಡ ಎಂದು ಸೋಮೇಶ್ವರದಲ್ಲಿ ಮದುವೆ ಇಡಿಸಿದ್ದು.ಇದು ನೋಡಿದ್ರೆ ಒಂದಕ್ಕೆ ಡಬ್ಬಲ್ ಆಯ್ತು." ವಾಸುದೇವ ಭಾವಜಿಯವರು ಮದುವೆ ನಂತರ ಕುಶಾಲು ಮಾಡಿದರು."ಹಾಗೆಲ್ಲ ಎಂತ ಹೇಳುವುದು ನೀವು?ಅವರ ಮನೆಯವರು ಎಲ್ಲರಿಗೂ ಬೇಕಾದವರು,ಎಲ್ಲರನ್ನು ಕರೆದಿದ್ದಾರೆ" ಅನುಸೂಯಕ್ಕ ಅವರನ್ನು ಸಣ್ಣಗೆ ಕುಟುಕಿದರು.ಆ ದಿನಗಳಲ್ಲಿ ಖರ್ಚಿನಲ್ಲಿ ಎಲ್ಲೆಲ್ಲಿ ಉಳಿತಾಯ ಆಗ್ತದೋ ಅಲ್ಲಿ ಉಳಿಸಲು ಎಲ್ಲರೂ ಯತ್ನಿಸುತ್ತಿದ್ದರು.---------

No comments:

Post a Comment