ಶನಿವಾರ ಮಧ್ಯಾಹ್ನ ಯಥಾಪ್ರಕಾರ ರಾಮದಾಸನ ಅಂಗಡಿಗೆ ಹಾಜರಿ ಹಾಕಿದೆ
"
"
"
.ಬರ್ಕಲಿ ಸಿಗರೇಟು ಎಳೆಯುವ ಗಿರಾಕಿ ನಾನು.ಅದೂ ಉಶಿಣೆ.ಮಾತು ಮದುವೆ ಮತ್ತು ಖರ್ಚುಗಳತ್ತ ತಿರುಗಿತು.ನನ್ನ ಮದುವೆಯ ಸಮಯದಲ್ಲಿ ನಾಲಕ್ಕು ರುಪಾಯಿ ದೇಣೆ ಮಾತಾಗಿತ್ತು.ಆದರೆ ಅದೂ ಸಹ ಬಾಕಿ ಮಾಡಿದ್ದಾರೆ" ಪನ್ನಿ ಮಾಮನ ಡೈಲಾಗು.ಹೆಹ್ಹೆ ಅದರಲ್ಲೂ ಉಶಿಣೆಯೇ?"ಮಾತಾಗಿತ್ತು ಹೌದು,ಆದ್ರೆ ರುಪಾಯಿ ಯಾರ ಹತ್ರ ಉಂಟು ಮಾರಾಯ! ಗಾಡಿಯ ಮೇಲೆ ಹೊರಣ,ಎದುರುಕಾಣಿಸಿದ ಮೇಲೆ ಗಂಡಿನ ಹೆಣ್ಣಿನ ಕಡೇ ಅಂತ ಇಲ್ಲ.ಎಲ್ಲಾ ಒಂದೆ." ಎಂದರು.ನಾಲ್ಕು ರುಪಾಯಿ ದೇಣೆ ತಕ್ಕೊಳ್ಳುವ ಕಾಲ ಅಗ್ಗದ್ದೋ ಅಥವಾ ನಾಲ್ಕು ರೂಪಾಯಿ ಕೊಡಲೂ ಆಗದಂತ ಕಾಲ ಕಷ್ಟದ್ದೋ ಎಂಬ ಜಿಜ್ಜಾಸೆ ಎಂಬ ಚರ್ಚೆ ತುಂಬ ಹೊತ್ತು ನಡೆಯಿತು.ಯಾವುದೇ ನಿಷ್ಕರ್ಷೆ ಆಗಲಿಲ್ಲ.ಹಳೆಮಂಡೆ ಪನ್ನಿಮಾಮನ ಪ್ರಕಾರ ಹಳೆಕಾಲ ಅಗ್ಗದ್ದು.ನಮ್ಮ ಪ್ರಕಾರ "ಹಳೇಕಾಲ ಅಗ್ಗದ್ದೇನೂ ಅಲ್ಲ. ನಾಲ್ಕು ಐದು ರೂಪಾಯಿಗಳಿಗೆ ಬಾಯಿಬಾಯಿ ಬಿಡುವ ಕಾಲ ಅಗ್ಗದ್ದಲ್ಲ ಬದಲಿಗೆ ದುರ್ಭಿಕ್ಷದ್ದು,ಅದನ್ನು ನೀವು ನಮ್ಮ-ಕಿರಿಯರ-ಬಳಿ ಒಪ್ಪಲು ತಯಾರಿಲ್ಲ.ಅಷ್ಟೇ. ತರ್ಕ ಮಾಡುವಾಗ ಮನುಷ್ಯ ನಿಯತ್ತಾಗಿರಬೇಕು.ಸುಮ್ಮನೆ ಹಟ ಸಾಧನೆ ಮಾಡಬಾರದು."ಅವರಿಗೆ ಇನ್ನೂ ಸಿಟ್ಟು ಬಂತು."ನಿಮಗೆ ಹಿರಿಯರೆಂದರೆ ಸ್ವಲ್ಪವೂ ಗೌರವ ಇಲ್ಲ.ಬಾಯಿಗೆ ಬಂದಂತೆ ಹರಟೆ ಹೊಡಿತೀರಿ....."ಸ್ವಲ್ಪ ಹೊತ್ತು ಲೆಕ್ಚರ್ ಆಯಿತು. ನಾವೂ ಮಾತಾಡಲಿಲ್ಲ.
"
"
"
"ಆದರೂ ದಿನ ಕಳೆದಂತೆ ಮದುವೆಗಳಲ್ಲಿ ಮನುಷ್ಯನ ನಿಜ ಬಣ್ಣ ಬಯಲಾಗಲಾರಂಭಿಸಿದವು.ನನ್ನನ್ನೂ ಕೂಡಿಸಿ ಬರೆಯುತ್ತಿದ್ದೇನೆ.ಯಾರೂ ತಪ್ಪು ಭಾವನೆ ಇಟ್ಟುಕೊಳ್ಳಬಾರದು.ಇತರರಿಗೆ,ಊರವರಿಗೆ ಹೇಳುವಾಗ ಸುಧಾರಣೆಯ ಮಾತುಗಳು-ಆಡಂಬರ,ಅನ್ನ ತಿಂಡಿ ವೇಸ್ಟ್ ಮಾದಬಾರದು,ಅನಗತ್ಯ ಪೊಂಪ್-ದೊಡ್ಡಸ್ತಿಕೆ ಪ್ರದರ್ಶನದ ಅಗತ್ಯವಿಲ್ಲ......ಆದರೆ ತನ್ನ ಸ್ವಂತದ ಸರದಿ ಬಂದಾಗ.........!ಹಿಂದೆ ರಾಮಮಂಟಪದ ಮೆನೆಜ್‌ಮೆಂಟ್‌ನವರು ಒಂದು ಸ್ಕೀಮ್ ಮಾಡಿದರು.ಆರ್ಥಿಕ ತೊಂದರೆಯಿದ್ದವರು ತಮ್ಮ ಮನೆಯವರ ಮದುವೆ,ಮುಂಜಿ ಯಾ ಇತರ ಕಾರ್ಯಕ್ರಮ ಮಾಡಬೇಕಿದ್ದರೆ ಅರ್ಜಿ ಕೊಟ್ಟರೆ ಬಾಡಿಗೆಯನ್ನು ಮಾಫಿ ಮಾಡಬಹುದು.ಆ ಸೌಲಭ್ಯವನ್ನು ಒಬ್ಬರು ಪಡಕೊಂಡು ಕಾರ್ಯಕ್ರಮ ನಡೆಯುತ್ತಿತ್ತು.ಆ ಮಹನೀಯರ ಹೆಸರು ಬೇಡ.ನಮ್ಮ ಮೋಹನದಾಸ ಊಟಕ್ಕೆ ಹೋದಾಗ ಮದುವೆ ಪ್ರೋಗ್ರಾಂ ಗಡದ್ದಾಗಿ ನಡೆಯುತ್ತಿತ್ತು.ಒಳ್ಳೆಯ ಸಭೆಯೂ ಸೇರಿತ್ತು.ಸುಶ್ರಾವ್ಯವಾದ ವಾದ್ಯವೂ ಇತ್ತು.ಫೋಟೋ ಮತ್ತು ವೀಡೀಯೋ ಸಹ ಇತ್ತು.ಕಾರ್ಯಕ್ರಮ ಸಾಂಗವಾಗಿ ನಡೆಯಿತು.ಮರುದಿನ ಮೋಹನದಾಸನು ಅವರಿಗೆ ಬಾಡಿಗೆಯ ಬಿಲ್ಲನ್ನು ಕಳುಹಿಸಿದ.ತನಗೆ ಬಾಡಿಗೆ ಮಾಫಿ ಆಗಿದೆ ಬಹುಶಃ ನಿನಗೆ ತಿಳಿದಿರಲಿಕ್ಕಿಲ್ಲ ಎಂದು ಜವಾಬು ಬಂತು."ನನಗೆ ಗೊತ್ತಿದೆ.ನಿನ್ನ ಬಾಡಿಗೆ ಮಾಫಿ ಕ್ಯಾನ್ಸಲ್ ಆಗಿದೆ"ಎಂದನಿವ.ಅದು ಹೇಗೆ?"ಅಲ್ಲ ಮಾರಾಯ ನಿನಗೆ ಮದುವೆಗೆ ಫೋಟೋ ವೀಡೀಯೋ ಒಳ್ಳೇ ವಾದ್ಯದವರು ಎಲ್ಲ ಬೇಕು.ನಮ್ಮದೆ ಆದ ರಾಮಮಂಟಪಕ್ಕೆ ಬಾಡಿಗೆ ಪ್ರಶ್ನೆ ಬಂದಾಗ ನಿನ್ನ ಬಡತನ ಬರ್ತದೋ."ಹಾಗಾದ್ರೆ ದೊಡ್ಡವರು-ದುಡ್ಡಿದವರು ಮಾತ್ರ ಗಮ್ಮತ್ ಮಾಡಬಹುದೋ? ಬಡವರು ಗಮ್ಮತ್ ಮಾಡಲೇಬಾರದೋ? ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಇನ್ನೊಂದಾ?" ಚರ್ಚೆ ಶುರುವಾಯ್ತು.ಅದಕ್ಕೋಸ್ಕರವೇ ಈ ಮಾಫಿಯ ಸ್ಕೀಮನ್ನೇ ರದ್ದು ಮಾಡಿದ್ದೇವೆ.ಪ್ರತಿಯೊಬ್ಬನೂ ತನಗೆ ಅನುಕೂಲ,ಇಚ್ಛೆ ಇದ್ದಂತೆ ಕಾರ್ಯಕ್ರಮ ನಡೆಸಲಿ. ಯಾರೂ ಮುಂದೆ ಕಿರಿಕಿರಿ ತಕರಾರು ಮಾಡಬಾರದು ಎಂದು ಈ ನಿರ್ಧಾರ ಆಗಿದೆ." ಎಂದು ಪ್ರಕಟಿಸಲಾಯಿತು.
"
"
"
"
"
"
"
"ನಾನೂ ಸಹ ಅನವಶ್ಯಕ ಖರ್ಚು ವೆಚ್ಚಗಳ ವಿರೋಧಿ.ಹಿಂದೆ ವಿಕ್ರಮನ ಮುಂಜಿಯ ಸಮಯದಲ್ಲಿ ಈ ಆಡಂಬರ,ಡೌಲುಗಳ ಬಗ್ಗೆ ನನಗೂ,ಮನೆಯ ಇತರರಿಗೂ-ಮುಖ್ಯವಾಗಿ ತಂದೆಯವರಿಗೂ-ಒಂದೆರಡು ಮಾತುಕತೆ,ಚರ್ಚೆ ಆಗಿತ್ತು.ಮುಂಜಿ ಕಾರ್ಯಕ್ರಮ ಮನೆಯಲ್ಲೇ ಆಗಲಿ,ಭಾರೀ ಗಡದ್ದು ಮಾಡುವ ಅಗತ್ಯ ಇಲ್ಲ ಎಂದು ನನ್ನ ಅಭಿಪ್ರಾಯ.ನಿನಗೆ ಗೊತ್ತಿಲ್ಲ.ನಮ್ಮ ವಿಕ್ರಮ ಮನೆತನಕ್ಕೇ ಹಿರಿಯ ಮೊಮ್ಮಗ.ಅವನ ಮುಂಜಿ ಪ್ರೋಗ್ರಾಮ್ ಏಕ್‌ದಮ್ ಧೂಮ್‌ಧಾಮ್ ಮಾಡಬೇಕು, ಸುಬ್ರಾಯನ ಮುಂಜಿಯನ್ನು ಶೀನ್ವಾಸ ಎಷ್ಟು ಗಮ್ಮತ್ತಿನಲ್ಲಿ ಮಾಡಿದ್ದ! ನೀನು ಠಣ್‌ಠಣ್ ರುಪಾಯಿ ಈಚೆಬದಿ ನೂಕು,ಉಳಿದದ್ದೆಲ್ಲ ನನಗೆ ಬಿಡು" ಅವರ ತರ್ಕ ಮತ್ತು ಹುಕುಮ್.ನನಗೂ ಹೌದೆನಿಸಿತು.ದೊಡ್ಡಪ್ಪನವರು ಹಿಂದೆ ಸುಬ್ರಾಯಣ್ಣನ ಉಪನಯನದಲ್ಲಿ ಗಡದ್ದು ಮಾಡಿದ್ದರು ಎಂದಲ್ಲ.ನಮ್ಮ ವಿಕ್ರಮ ಮನೆಗೆ ಹಿರೀ ಮೊಮ್ಮಗ,ಮತ್ತು ನಮ್ಮಲ್ಲಿ ಪದೇಪದೇ ಸಮಾರಂಭಗಳು ನಡೆಯುವ ನದರು ಕಮ್ಮಿ.ಅನುಕೂಲವೂ ಇದೆ.ಹಾಗಿರುವಾಗ ತಕ್ಕಷ್ಟು ವಿಜ್ರಂಭಣೆಯಿಂದ ನಡೆಯಲಿ ಎಂದು ಸಮ್ಮತಿಸಿದೆ.ಆದರೂ ಮನದ ಯಾವುದೋ ಸಣ್ಣ ಕೋಣೆಯಲ್ಲಿ ಆಗಾಗ ತರ್ಕಗಳು ಏಳುತ್ತಿದ್ದವು.ಈ ತರ್ಕಗಳನ್ನು ಮೆಟ್ಟಿ ಮುಂಜಿ ಪ್ರೋಗ್ರಾಂ ಸಾಕಷ್ಟು ಚೆನ್ನಾಗಿಯೇ ಆಯ್ತು.ಎಲ್ಲರಿಗೂ-ಮನೆಯವರಿಗೂ,ಸಂಬಂಧಿಕರಿಗೂ ಅಲ್ಲದೇ ಆಹ್ವಾನಿತರಿಗೂ ಖುಶಿಯಾಯ್ತು.ಅದಕ್ಕೆ ಸರಿಯಾಗಿ ಜನರ ಆಲೋಚನಾ ಚಕ್ರ ಸುತ್ತುವ ಧಾಟಿ ಸಹ ಬದಲಾಗಲಾರಂಭಿಸಿತ್ತು.ವ್ಯವಸ್ಥೆ ಇರುವಾಗ ಖರ್ಚು ಮಾಡಬೇಕು ಮಾರಾಯಾ,ನಿನಗೇನು ಆರು ಮಕ್ಕಳಿದ್ದಾರಾ?ಒಬ್ಬ ಹುಡುಗ ಒಬ್ಬಳು ಮಗಳು.ಈಗ ಮಾಡದೇ ಮತ್ಯಾವಾಗ ಮಾಡ್ತಿ? ಕೆಲವರ ಸಲಹೆ ಸೂಚನೆಗಳು ಬಂದವು.ಹೌದಲ್ಲ?ಎಂದಿತು ಮನಸ್ಸು.ನಾವು ಮಾಡುವ-ಮಾಡಿದ-ಖರ್ಚುಗಳು ದುಂದುವೆಚ್ಚಗಳಲ್ಲ ಎಂಬ ಸಮರ್ಥನೆ ತಾವಾಗಿಯೇ ಹುಟ್ಟಿ ಗಟ್ಟಿಯಾಯಿತು.ಪಾವನಳ ನೆಂಟಸ್ತಿಕೆ ರವಿಶಂಕರನೊಟ್ಟಿಗೆ ಫಿಕ್ಸ್ ಆಗಿ ಒಂದು ದಿನ ಅವಳನ್ನು ನೋಡುವ ಕಾರ್ಯಕ್ರಮ ಇಟ್ಟುಕೊಂಡಿದ್ದೆವು.ಎಲ್ಲರೂ ಬರಲಿರುವ ನೆಂಟರ ನಿರೀಕ್ಷೆಯಲ್ಲಿದ್ದೆವು.ಅಷ್ಟರಲ್ಲಿ ಒಂದು ಬಿಳೀ ಕಾರು ಮನೆಯ ಎದುರು ಬಂದು ನಿಂತಿತು."ಓಹ್! ಡಾಕ್ಟರ್ ವಿ.ಎಸ್.ಆಚಾರ್ಯ ಬಂದ್ರು" ಎಂದು ಮೋಹನದಾಸ ಮತ್ತಿತರರು ಹೊರಗೆ ಓಡಿ ಕಾರಿನಿಂದ ಮೆಲ್ಲನೆ ಇಳಿಯುತ್ತಿದ್ದ ಗೃಹಮಂತ್ರಿಗಳನ್ನು ಸ್ವಾಗತಿಸತೊಡಗಿದರು.ನಾನು ಬರುವುದು ನಿಮಗೆ ಹೇಗೆ ಗೊತ್ತು? ಸಂತೆಕಟ್ಟೆಗೆ ಹೋಗಿದ್ದೆ,ಹಾಗೇ ನಿಮ್ಮಲ್ಲಿ ಸ್ವಲ್ಪ ರೆಸ್ಟ್ ತಕೊಂಡು ಮುಂದೆ ಪ್ರಯಾಣ ಮಾಡುವಾ ಎಂದು ಬಂದೆ.ನಿಮ್ಮಲ್ಲಿ ಏನೋ ಕಾರ್ಯಕ್ರಮ ಇಟ್ಟುಕೊಂಡ ಹಾಗಿದೆ? ನಾನು ಬಂದು ತೊಂದ್ರೆ ಆಯ್ತೋ?"ನೀವು ಬಂದದ್ದು ಬಹಳ ಸಂತೋಷ.ನಮ್ಮಲ್ಲಿ ಹುಡುಗಿ ನೋಡಲು ಹುಡುಗಮತ್ತವರ ಪೈಕಿ ಬರ್ತಾರೆ,ಅವರನ್ನು ಕಾಯ್ತಾ ಇದ್ದೆವು,ನೀವು ಒಳಗೆ ಬನ್ನಿ. ವಿಶ್ರಾಂತಿಗೆ ವ್ಯವಸ್ಥೆ ಮಾಡೋಣ" ಸ್ವಾಗತಿಸಿದೆವು.ಆಗಲಿ,ಆಗಲಿ.ಒಳ್ಳೆಯ ಸಮಯಕ್ಕೆ ಬಂದ ಹಾಗಾಯ್ತು.ಓಹೊ ಗುರುಗಳು ಇಲ್ಲೇ ಇದ್ದೀರಾ?"ಎಂದು ಬಾಬುಮಾಮನವರನ್ನು ವಿಚಾರಿಸಿದರು.ಅವರ ಬಳಿ ಸ್ವಲ್ಪ ಹೊತ್ತು ರಾಜ್ಯ್ ರಾಜಕೀಯ,ಆರ್ಥಿಕ ಪರಿಸ್ಥಿತಿ ಅದು ಇದು ಮಾತಾಡುವ ವೇಳೆಗೆ ಪೇಟೆಯಿಂದ ಗುರುದಾಸ ಶೆಣೈ,ಸತೀಶ ಪೈ ಅವರಿವರು ಓಡಿ ಬಂದರು.ಮಂತ್ರಿಗಳು ನಮಗೆ ಶುಭ ಹಾರೈಸಿ ಗುರು ಮನೆಗೆ ಹೋದರು. ಎಷ್ಟು ಬಂಗಾರ ಹಾಕ್ತೀ?" ಮೋಹನದಾಸ ಕೇಳಿದ.ಅವರ ಡಿಮಾಂಡ್ ಏನುಂಟು?"ಈಗ ಡಿಮಾಂಡ್ ಅಂತ ಯಾರೂ ಏನೂ ಹೇಳುವುದಿಲ್ಲ.ನಾವು ನಮ್ಮ ಯೋಗ್ಯತೆ,ಅವರ ಘನತೆಗಳಿಗೆ ಸರಿಯಾಗಿ ನಗ ಮಾಡಿಸಿ ಮದುವೆ ಮಾಡಿಕೊಡಬೇಕು.ಆದರೂ ಒಂದು ಮಾತು ಕೇಳಿ ಬರ್ತೇನೆ." ಒಂದು ದಿನ ಹೋಗಿ ರಮಾನಂದಭಾವಜಿ ಮನೆಗೆ ಹೋದ.ನೀವು ಎಷ್ಟು ಏನು ಬಂಗಾರ ಹಾಕ್ತೀರಿ ಎಂಬುದು ನಿಮಗೆ ಬಿಟ್ಟ ವಿಚಾರ.ನಾವು ಎಂತದೂ ಕೇಳುವ ಕ್ರಮ ಇಲ್ಲ." ಜವಾಬು ಬಂತು.
"
"
"
"
"
"
"
"
"
"
"
"
"
"
"ಒಮ್ಮೆ ರಜೆಯಲ್ಲಿ ಊರಿಗೆ ಬಂದಾಗ ವಾಡಿಕೆಯಂತ ಹೆಡ್‌ಆಫೀಸಿಗೆ ಹೋಗಿ ಪ್ರಿಮಿಸಿಸ್ ಡಿಪಾರ್ಟ್‌ಮೆಂಟಿನಲ್ಲಿ ಮಲ್ಯರನ್ನು ಭೆಟ್ಟಿಯಾದೆ.ಆಡ್‌ಪಳ್ಳೊ ಮಾಲ್ಲ್‌ಮಾಮ್"ಉಟ್ಟಾ,ಹಾಂಗಾ ಹೆಡ್ಡಾಫೀಸಾಂತು ಆಡ್ ಪೋಡೂ ನಾ" ಅಪ್ಪಣೇ ಕೊಟ್ಟರು.ಮಾತುಕತೆ ಸಾಗಿತು.ತಮ್ಮ ವಿದ್ಯಾಳಿಗೆ ಒಳ್ಳೆಯ ನೆಂಟಸ್ತಿಕೆ ಇದ್ದರೆ ತಿಳಿಸು ಮಾರಾಯಾ ಎಂದರು.ನಮ್ಮ ಮಂಜ ಇದ್ದಾನೆ ಎಂದೆ.ನಿಮ್ಮ ಮಂಜ ಏನು ಮಾಡ್ತಾನೆ?"ಇಂಜಿನಿಯರ್"ಇಂಜಿನಿಯರ್ ಅಂದ್ರೆ ಉಲ್ಟಾ ಪೆಸ್ಕಾತಿಯ?"ನೀವೀಗ ಮಗಳ ಮದುವೆಗೆ ತಕ್ಕ ಮಟ್ಟಿಗೆ ನಗ ಮಾಡಿಟ್ಟಿರುತ್ತೀರಿ.ಎಷ್ಟೂ ಕೊಡ್ತೀರಿ?" ಕೇಳಿದೆ.ನನಗಿರುವವಳು ಒಬ್ಬಳೇ ಮಗಳು.ನಾನೇನೂ ಕೃಪಣತೆಯಲ್ಲಿ ಮದುವೆ ಮಾಡುವುದಿಲ್ಲ.ಆದರೂ ನೀನು ಇಂಜಿನಿಯರ್ ಅಂದಿಯಲ್ಲ.ಅದಕ್ಕೆ ಮಾತಿಗೆ ಹೇಳಿದ್ದು" ಸಮಜಾಯಿಶಿ ನೀಡಿದರು.ಅಲ್ಲ ಏನು ಮಾಡಿದ್ದೀ ಎಂದು ಹೇಳು ಮಾರಾಯಾ?"ನೋಡು ಕೇಶವಾ,ನೀನು ನನ್ನ ಅಂತರಂಗದ ದೋಸ್ತಿ.ಇಂತಿಷ್ಟು ಬಂಗಾರ,ವಜ್ರ ಎಲ್ಲ ಕೊಡುತ್ತೇನೆ.ಮದುವೆ ಗಡದ್ದು ಮಾಡುತ್ತೇನೆ.ಹುಡುಗ ಹೇಗೆ?" ವಿಚಾರಿಸಿದರು.ಮಾಲ್ಲ್‌ಮಾಮ್ ನೀವು ನನ್ನ ದೋಸ್ತಿ ಮಾತ್ರ್ವಲ್ಲ,ನನ್ನ ಗುರುಗಳು ಕೂಡಾ.ನಿಮ್ಮ ಮನೆ ಅಂದ್ರೆ ನಮ್ಮ ಮನೆ ಇದ್ದ ಹಾಗೆ.ನನಗೆ ನೀವು ಬಹಳವೇ ಹೆಲ್ಪ್ ಈ ಹಿಂದೆ ಮಾಡಿದ್ದೀರಿ.ಹಾಗಿರುವಾಗ ನಿಮಗೆ ನಾನು ಕಾಟುಪೋಟು ಸಂಬಂಧ ಹೇಳುತ್ತೇನಾ?ಇನ್ನು ಬಂಗಾರದ ವಿಷಯ.ನೀವು ಸೂಚಿಸಿದಕ್ಕಿಂತ ಐದು ಪವನು ಕಮ್ಮಿ ಹಾಕಿ,ಇನ್ನೂ ಡಿಸ್‌ಕೌಂಟು ಬೇಕಿದ್ದರೆ ನಮ್ಮ ಚಿಕ್ಕಪ್ಪನವರ ಬಳಿ ಕೇಳಬೇಕು.ಮದ್ವೆ ಮಾತ್ರ ಗಡದ್ದ್ ಮಾಡಿಕೊಡಬೇಕು." ಮಾತುಕೊಟ್ಟೆ.ಚಿಕ್ಕಪ್ಪ ಸಹ ನನ್ನ ಮಾತು ಒಪ್ಪಿ ಅನುಮೋದಿಸಿದರು.ಮಲ್ಯರೂ ಸಹ ಮಗಳ ಮದುವೆಯನ್ನು ಗಮ್ಮತ್ತಾಗಿ ಮಾಡುವತ್ತ ಮನವಿಟ್ಟರು.ಮಂಜನ ಮದುವೆ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲಿನಲ್ಲಿ ವಿಜ್ರಂಭಣೆಯಿಂದ ನಡೆಯಿತು.ಈ ಎಪಿಸೋಡು ಯಾಕೆ ನೆನಪಾಯ್ತು?ಹಿಂದೆ ಎಲ್ಲೆಲ್ಲಿ ಖರ್ಚು ಉಳಿಸಬಹುದು ಅಲ್ಲಲ್ಲಿ ಉಳಿಸುವ ಸ್ಕೀಮ್ ಹಾಕುತ್ತಿದ್ದರು.ಈಗ ಹಾಗಲ್ಲ.ವಿವಾಹ ಸಮಾರಂಭಗಳು ದಿನ ಹೋದಂತೆ ಹೆಚ್ಚು ಹೆಚ್ಚಾಗಿ ವಿಜ್ರಂಭಣೆ ತೋರಲಾರಂಭಿಸಿವೆ ಮತ್ತು ಅವುಗಳು ಅನಿವಾರ್ಯವೆನಿಸಿವೆ.ದುಡ್ಡಿನ ಮುಖ ಯಾರೂ ನೋಡುವುದಿಲ್ಲ.ಹಿಂದಿನ-ಈಗಿನ ಮಾನಸಿಕತೆಗಳ ತುಲನೆ ಮಾಡುವಾಗ ನೆನಪಾದ ಮಾತುಗಳು. ನಿಶ್ಚಯತಾಂಬೂಲ ಕಾರ್ಯಕ್ರಮಕ್ಕೆ ಹೇಳಿಕೆಗೆಂದು ರಮಣ ನಾಯಕರಲ್ಲಿ ಹೋದೆ,ನಿಶ್ಚಯಕ್ಕೆ ಎಷ್ಟು ಜನರ ಹೇಳಿಕೆ?"ಸುಮಾರು ಮುನ್ನೂರು ಮಂದಿ ಅಂತ ಲೆಕ್ಕ ಹಾಕಿದ್ದೇವೆ."ಎಂದೆ.ಅಷ್ಟು ಜಾಗ ನಿಮ್ಮಲ್ಲಿ ಎಲ್ಲುಂಟು?ಚಪ್ಪರ ಹಾಕ್ತೀಯ?"ಚಪ್ಪರ ಏಕೆ ರಾಮಮಂಟಪ ಉಂಟಲ್ಲ,ನೀವು ಎಲ್ಲರೂ ಬನ್ನಿ"ಮರುದಿನ ಪ್ರೋಗ್ರಾಮ್ ಆಗುತ್ತ ಇರುವಾಗ ಪುನಃ ಕರೆದರು-"ಕಾಲಿ ತೂಂವೆ ತಿನ್ಶಿ ಮಳ್ಳೆಲೆ,ಆತ್ತಂಚಿ ಚಾರ್ಷೆ ವೈರಿ ಜನ ಜಾಲ್ಲಾ,ಆನಿಕಯಿ ಎತ್ತ ಆಸ್ಸತಿ! ಪೂರಾ ವ್ಯವಸ್ಥಾ ಆಸ್ಸ ನಂವ್ಹೆ?"ಮೋಹನದಾಸನ ಬಳಿ ಕೇಳಿ.ಅವನು ವ್ಯವಸ್ಥಾಪ್ರಮುಖ್" ಮುಂದೆ ಸಾಗಿದೆ."
ವ್ಹೈರೆ ವ್ಯವಸ್ಥಾಪ್ರಮುಖ್ ಮ್ಹಳ್ಳೆರಿ ಕಸ್ಸನ್‌ರೆ?" ಎಂದು ಕೇಳಹತ್ತಿದರು.ಪಾವನಳ ಮದುವೆ ಕೂಡಾ ನಮ್ಮ ಮಟ್ಟಿಗೆ ಹೇಳುವುದಾದರೆ ವೈಭವದಿಂದ-ಕುಲದೀಪನ ಅಭಿಪ್ರಾಯ-ನಡೆಯಿತು.