ಹದಿಹರೆಯದ ಮನಸುಗಳು ಒದ್ದೆ ಗೋಡೆಯಂತೆ ಎಂಬ ಗಾದೆಯಿದೆ. ಯಾವುದೇ ವಿಚಾರಗಳನ್ನು ತುಂಬಿ, ಕೂಡಲೇ ಮೆತ್ತಿಕೊಳ್ಳುತ್ತವೆ. ಹಾಗಾಗಿ ಆ ಪ್ರಾಯದ ಮಕ್ಕಳಿಗೆ ಉತ್ತಮ ವಿಚಾರಗಳ ಬೋಧೆಯನ್ನು ಮಾಡಬೇಕು. ಆ ಮಕ್ಕಳು ಮಾತ್ರವಲ್ಲ, ಅವರು ಬೆಳೆಯುತ್ತಿರುವ ಪರಿಸರವೂ ಸಹ ಚೆನ್ನಾಗಿ ಬೆಳೆದು ಬೆಳಗುತ್ತದೆ.
ನನ್ನ ಹದಿಹರೆಯದಲ್ಲಿ ನನಗೆ ರಾ ಸ್ವ ಸಂಘದ ಸಂಪರ್ಕ ಆದುದು ನನ್ನ ಪೂರ್ವ ಜನ್ಮಗಳ ಪುಣ್ಯಾರ್ಜನೆಯ ಫಲವೆನ್ನ ಬಹುದು. ಅಲ್ಲದೆ ಹೆಬ್ರಿಯ ಅನೇಕ ಹಿರಿಯರ ಮಾರ್ಗದರ್ಶನ ಕೂಡ ನನ್ನ ಜೀವನವನ್ನು ರೂಪಿಸಿದೆ ಎನ್ನಬಹುದು...
'ನಮ್ಮಿಂದ ಇತರರಿಗೆ ಬಹಳ ಸಹಾಯ ಮಾಡಲಾಗದಿದ್ದರೆ ಪರವಾಗಿಲ್ಲ, ಆದರೂ ಸದಾ ಇತರರ ಒಳ್ಳೆಯದನ್ನೇ ಆಶಿಸಬೇಕು' ನಮ್ಮ ನರಸಿಂಹ ಮಾಮನವರು ಆಗಾಗ ತಿಳಿಹೇಳುತ್ತಿದ್ದರು.
'ನೀನು ಮುಂದೆ ಸಂಸ್ಥೆಯಲ್ಲಿ ಉನ್ನತ ಪದಗಳನ್ನು ಪಡೆಯುವ ಸಾಧ್ಯತೆಗಳೂ ಇರುತ್ತವೆ. ಆದ್ದರಿಂದ ಆದಷ್ಟು ಸಂಯಮದಿಂದ, ಶಾಲೀನ ಮಾತುಗಳಿಂದ ವ್ಯವಹರಿಸು' ನಮ್ಮ ತಂದೆಯವರ ಆಪ್ತರೂ ನನ್ನ ಹಿತೈಷಿಯೂ ಆದ ಸಂಜೀವ ನಾಯಕಮಾಮ ನವರು ಆಗಾಗ ಬೋಧಿಸುತ್ತಿದ್ದರು.
ಹೆಬ್ರಿ ಊರ ಜನರೆಲ್ಲರೂ ಸಜ್ಜನರು, ಊರ ಅಭಿವೃದ್ಧಿ ಕಾರ್ಯಗಳಲ್ಲಿ, ಹಬ್ಬ ಉತ್ಸವಗಳಲ್ಲಿ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಒಗ್ಗಟ್ಟಾಗಿ ಭಾಗವಹಿಸುವವರು.
ಶ್ರೀಮಂತಿಕೆ ಹಣದಲ್ಲಿರುವುದಲ್ಲ, ಬದಲಿಗೆ ಹೃದಯವಂತಿಕೆಯಲ್ಲಿರಬೇಕು ಎಂದು ನಮ್ಮಮ್ಮ ಪದೇ ಪದೇ ನೆನಪಿಸುತ್ತಿದ್ದರು. ಹಣದ ಅಭಾವ ಒಂದು ಬಿಟ್ಟರೆ ಇತರೇ ವಿಚಾರಗಳಲ್ಲಿ ನಮ್ಮಮ್ಮ ಭಾರೀ ಶ್ರೀಮಂತೆ.
ಮೇಲಿನ ಹಾಗೂ ಇತರೇ ಅನೇಕ ವಿಚಾರಗಳು ನನ್ನ ಜೀವನವನ್ನು ರೂಪಿಸಿವೆ. ಸಹೃದಯ ಗೆಳೆಯರ ಗುಂಪು ಅವುಗಳಲ್ಲೊಂದು, ಗೆಳೆಯರ ವಿಷಯದಲ್ಲೂ ನಾನು ಸಹ ಬಹಳ ಶ್ರೀಮಂತ ಎಂದೇ ಹೇಳಬಹುದು.
ಎಪ್ಪತ್ತ ಮೂರು ಮಳೆಗಾಲಗಳು ಕಳೆದವು, ಎಪ್ಪತ್ತನಾಲ್ಕರ ಮಳೆಯ ನಿರೀಕ್ಷೆಯಲ್ಲಿದ್ದೇನೆ. ನಮ್ಮಮ್ಮ ಹೇಳಿದಂತೆ ರೂಪಾಯಿ ವಿಷಯ ಬಿಟ್ಟು ಉಳಿದಂತೆ ಗೆಳೆಯರ ಬಳಗ, ಬಂಧುಬಾಂಧವರ ಸಾಂಗತ್ಯ, ಊರುಪರವೂರುಗಳಲ್ಲಿ ಗೌರವಾದರ ಮುಂತಾದವುಗಳಲ್ಲಿ ನಾನು ತುಂಬ ಶ್ರೀಮಂತ.!
ಗೌರವಿಸುವ ಹಿರಿಯರು, ಪ್ರೀತಿಸುವ ಕಿರಿಯರು, ಅಭಿಮಾನದಿಂದ ಕಾಣುವ ತಮ್ಮಂದಿರು ಇನ್ನೇನು ಬೇಕು!!👍👍
ಇಂದು ಎಲ್ಲರೂ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ ಹಾರೈಸಿದ್ದಾರೆ. ಪ್ರತಿಯೊಬ್ಬರಿಗೂ ಪ್ರೀತಿ ಅಭಿಮಾನ ಪೂರ್ವಕ ಧನ್ಯವಾದಗಳು.
ಪ್ರತಿಕ್ರಿಯೆಗಳು:-
01: ದಿವ್ಯಾ-ಚಂದದ ರೀತಿಯಲ್ಲಿ ಕೃತಜ್ಞತೆಯ ಅರ್ಪಣೆ. ಮನಸೂರೆಗೊಳ್ಳುವ ಬರಹ
02:ಶಿವಶಂಕರ್ ಕೆ-ಮನದಾಳದ ಮಾತುಗಳ ಸಣ್ಣ ಮಾಲೆಯನ್ನು ಸುಂದರವಾಗಿ ಪೋಣಿಸಿದ್ದೀರಿ. ದೇವರು ಚೆನ್ನಾಗಿಟ್ಟಿರಲಿ. ಶುಭಾಶಯಗಳು🙏
ಉತ್ತರ-ನಿಮ್ಮ ಪ್ರೀತಿ ವಿಶ್ವಾಸಗಳಿಗೆ ಶರಣು.
03: ವಿದ್ಯಾ ನಾಯಕ್ ಗುರುವಾಯನಕೆರೆ-ಹುಟ್ಟು ಹಬ್ಬದ ಶುಭಾಶಯಗಳು
04: ಗುಣಾಕರ ನಾಯಕ್-ತುಂಬಾ ಚೆನ್ನಾಗಿ ಬರೆದಿದ್ದೀರಿ ma'am
05: ರವಿ ಬಜಕೂಡ್ಲು B-ಹುಟ್ಟುಹಬ್ಬದ ಪ್ರೀತಿಯ ಶುಭಾಶಯಗಳು ಸರ್.
06: ರವೀಶ ತಡಸ-ಒಂದರ್ಥದಲ್ಲಿ ನನಗೂ ಹೆಬ್ರಿಯ ಕುರಿತು ಭಾವಾತ್ಮಕ ಸಂಬಂಧ. ಬಾಲಕೃಷ್ಣ ಮಲ್ಯರ ಕಾರಣಕ್ಕೆ. ಆಗ ಜಿಲ್ಲಾಪ್ರಚಾರಕರಾಗಿದ್ದ ಅವರ ಅಣತಿಯ ಮೇಲೆ 1974 ಅಕ್ಟೋಬರ್ ರಜೆಯಲ್ಲಿ ಹಿರಿಯಡ್ಕಕ್ಕೆ ಶಾಖೆ ಮಾಡಲು ಹೋಗಿದ್ದೆ. ಯಾವುದೋ ಭಾವಿಯ ನೀರಲ್ಲಿ ಸ್ನಾನ, ಉಳಿದುಕೊಂಡಿದ್ದ ಮನೆ ಸಂಘದ ಕುರಿತು ಅಷ್ಟೇನೂ owning ಇಲ್ಲದ ಆರ್ಯಸಮಾಜದವರದು.ಅವರ ಮನೆಯಲ್ಲಿ ಊಟ ಸಿಗದು. ಆದರೆ ಶ್ರೀಧರ ಮಲ್ಯ ಮತ್ತು ನರಸಿಂಹ ಮಲ್ಯರ ಮನೆಯಲ್ಲಿ ಅನ್ನಪೂರ್ಣೆಯರಿದ್ದರು.ಒಬ್ಬ ಸ್ವಯಂಸೇವಕನಾಗಿ ಮರುಚಿಂತನೆ ಮಾಡದಷ್ಟು ಪುಣ್ಯವಂತ ನಾನು.
ಉತ್ತರ:- ನೀವು ನನಗೆ ಇನ್ನೂ ಹತ್ತಿರವಾದಿರಿ. ಪೂಜ್ಯರಾದ ಮಲ್ಯರ ಗರಡಿಯಲ್ಲಿ ನನ್ನ ನಿಮ್ಮಂತಹ ಅನೇಕ ಹುಡುಗರು/ ಯುವಕರು ನುರಿತಿದ್ದಾರೆ, ಬೆಳೆದಿದ್ದಾರೆ. ಸಮಾಜಮುಖೀ ಜೀವನ ನಡೆಸುತ್ತಿದ್ದಾರೆ.
07:ಸುರೇಶ ಕಾಮತ್ KPT Frnd Mumbai-Very impressive!
08:Somanath Nayak-ಹುಟ್ಟುಹಬ್ಬದ ಶುಭಾಶಯಗಳು. 👏👏
09:Anitha Kamath PBV-Happy birthday Keshavanna. Seeking blessings.